IPL 2024, RCB vs LSG: ಇಂದು ಸಂಜೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಲಕ್ನೋ ಸೂಪರ್‌ ಜೈಂಟ್ಸ್‌ ನಡುವೆ ಹೈವೋಲ್ಟೇಜ್‌ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ಕಾತುರದಿಂದ ಕಾಯುತ್ತಿದ್ದಾರೆ. ತವರು ನೆಲದಲ್ಲಿ ಲಕ್ನೋ ಮಣಿಸಲು ಆರ್‌ಸಿಬಿ ಪಕ್ಕಾ ಪ್ಲ್ಯಾನ್‌ ಮಾಡಿಕೊಂಡಿದೆ. ಈಗಾಗಲೇ ಆರ್‌ಸಿಬಿ 3 ಪಂದ್ಯಗಳನ್ನು ಆಡಿದ್ದು, ಈ ಪೈಕಿ ಕೇವಲ ಒಂದರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಎರಡು ಸೋಲು ಕಂಡಿರುವ ಫಾಫ್ ಡು ಪ್ಲೆಸ್ಸಿಸ್ ಪಡೆಗೆ ಗೆಲುವು ಅನಿವಾರ್ಯವಾಗಿದೆ. 


COMMERCIAL BREAK
SCROLL TO CONTINUE READING

ಇನ್ನು ಆಡಿರುವ 2 ಪಂದ್ಯಗಳಲ್ಲಿ ಒಂದು ಗೆಲುವು, ಸೋಲು ಕಂಡಿರುವ ಲಕ್ನೋ ತಂಡಕ್ಕೂ ಈ ಪಂದ್ಯದಲ್ಲಿ ಗೆಲುವಿನ ಅನಿವಾರ್ಯವಿದೆ. ಅಂಕಪಟ್ಟಿಯಲ್ಲಿ ಆರ್‌ಸಿಬಿ 9ನೇ ಸ್ಥಾನದಲ್ಲಿದ್ದರೆ, ಲಕ್ನೋ 6ನೇ ಸ್ಥಾನದಲ್ಲಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ತಮ್ಮ ಸ್ಥಾನ ಉತ್ತಮಪಡಿಸಿಕೊಳ್ಳಲು ಉಭಯ ತಂಡಗಳ ನಡುವೆ ರೋಚಕ ಸೆಣಸಾಟ ನಡೆಯು ನಿರೀಕ್ಷೆ ಇದೆ. ಆದರೆ ಈ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಹೀಗಾಗಿ ಪಂದ್ಯದ ಫಲಿತಾಂಶ ಏನಾಗಲಿದೆ ಅನ್ನೋದು ತೀವ್ರ ಕೂತುಹಲ ಮೂಡಿಸಿದೆ.


ಇದನ್ನೂ ಓದಿ: ವಿಶೇಷ ದಾಖಲೆಯ ಹೊಸ್ತಿಲಲ್ಲಿ ವಿರಾಟ್: ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್’ಮನ್ ಆಗ್ತಾರಾ ಕಿಂಗ್ ಕೊಹ್ಲಿ?


ವರದಿಗಳ ಪ್ರಕಾರ ಆರ್​ಸಿಬಿ ಮತ್ತು ಲಕ್ನೋ ನಡುವಿನ ಪಂದ್ಯದಲ್ಲಿ ಮಳೆ ಬೀಳುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ. ಆದರೆ ರಾತ್ರಿಯ ಆಟವಾಗಿರುವುದರಿಂದ ಈ ಪಂದ್ಯದಲ್ಲಿ ಇಬ್ಬನಿ ಮಹತ್ವದ ಪಾತ್ರ ವಹಿಸಲಿದೆ. ರಾತ್ರಿ 7 ಗಂಟೆಯಿಂದ 9ರ ನಡುವಿನ ವಾತಾವರಣವು ಬ್ಯಾಟಿಂಗ್ ಮಾಡುವ ತಂಡಕ್ಕೆ ಅನುಕೂಲವಾಗಲಿದೆ. ಆ ಸಂದರ್ಭದಲ್ಲಿ ಹೆಚ್ಚಿನ ಇಬ್ಬನಿ ಇರುವುದಿಲ್ಲ. ಪಂದ್ಯ ಪ್ರಾರಂಭವಾಗುವ ಸಂಜೆ 7 ಗಂಟೆಯಿಂದ 33 ಡಿಗ್ರಿ ಸೆಲ್ಸಿಯಸ್, ರಾತ್ರಿ 11 ಗಂಟೆಗೆ 27 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನವು ಇರುತ್ತದೆ. ಹೀಗಾಗಿ ಟಾಸ್‌ ಗೆದ್ದ ತಂಡಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಈ ಪಂದ್ಯದ ಮೇಲೆ ವರುಣ ಕೃಪೆ ತೋರಿದರೆ ಪಂದ್ಯದ ಫಲಿತಾಂಶದ ಬಗ್ಗೆ ಮತ್ತಷ್ಟು ಕುತೂಹಲ ಮೂಡಲಿದೆ. 


ಉಭಯ ತಂಡಗಳು ಬಲಿಷ್ಠವಾಗಿರುವುದರಿಂದ ಯಾವ ತಂಡಕ್ಕೆ ಗೆಲುವಿನ ಸಿಹಿ ದೊರೆಯಲಿದೆ ಅನ್ನೋದರ ಬಗ್ಗೆ ಕಾದು ನೋಡಬೇಕಿದೆ. ಆರ್‌ಸಿಬಿ ತನ್ನ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗವನ್ನು ಸುಧಾರಿಸಿಕೊಂಡು ಕಣಕ್ಕಿಳಿಯಬೇಕಿದೆ. ಆರ್‌ಸಿಬಿ ವಿರಾಟ್‌ ಕೊಹ್ಲಿಯವರನ್ನೇ ನೆಚ್ಚಿಕೊಂಡಂತಿದೆ. ಇನ್ನುಳಿದ ಆಟಗಾರರು ಉತ್ತಮ ಪ್ರದರ್ಶನ ತೋರಬೇಕಿದೆ. ಅದರಂತೆ ಲಕ್ನೋ ಉತ್ತಮ ಬೌಲರ್‌ಗಳನ್ನು ಹೊಂದಿದ್ದು, ಆರ್‌ಸಿಬಿ ವಿರುದ್ಧ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ. 


ಇದನ್ನೂ ಓದಿ: ಐಪಿಎಲ್‌ನ ಎರಡು ಪಂದ್ಯಗಳ ವೇಳಾಪಟ್ಟಿ ಬದಲಾವಣೆ: BCCI ನಿರ್ಧಾರದ ಹಿಂದಿನ ಕಾರಣ ಇದೇ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.