IPL 2024 RCB vs MI: ಗುರುವಾರ (ಏಪ್ರಿಲ್ 11)  ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru)  ವಿರುದ್ಧ ಭರ್ಜರಿ ಏಳು ವಿಕೆಟ್‌ಗಳ ಜಯ ದಾಖಲಿಸಿದೆ. ನಿಸ್ಸಂದೇಹವಾಗಿ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದ ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ತಂಡದ ಗೆಲುವಿನ ರೂವರಿಯಾಗಿದ್ದರು. ಈ ಸಂದರ್ಭದಲ್ಲಿ ಇಬ್ಬರು ದಿಗ್ಗಜ ಆಟಗಾರರ ನಡುವಿನ ಹೃದಯಸ್ಪರ್ಶಿ ದೃಶ್ಯ ಎಲ್ಲರ ಕಣ್ಮನ ಸೆಳೆಯಿತು. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಆರ್‌ಸಿ‌ಬಿ vs ಎಂಐ (RCB vs MI) ನಡುವಿನ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ (Jasprit Bumrah) ಅವರು ವೇಗದ ಬೌಲಿಂಗ್‌ನಲ್ಲಿ 5/21 ಅಂಕಿಅಂಶಗಳೊಂದಿಗೆ  ಮಾಸ್ಟರ್‌ಕ್ಲಾಸ್ ಅನ್ನು ನಿರ್ಮಿಸಿದರು. ಇದು ಇಡೀ ಐಪಿಎಲ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಅಂಕಿ ಅಂಶವಾಗಿದೆ. ಈ ಪಂದ್ಯದಲ್ಲಿ ಆರ್‌ಸಿ‌ಬಿ ವಿರುದ್ಧ ಐಪಿಎಲ್ (IPL) ಇತಿಹಾಸದಲ್ಲಿ ಈ ದಾಖಲೆ ನಿರ್ಮಿಸಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಜಸ್ಪ್ರೀತ್ ಬುಮ್ರಾ ಪಾತ್ರರಾಗಿದ್ದಾರೆ. 


ಇದನ್ನೂ ಓದಿ- IPL 2024: ಆರ್‌ಸಿ‌ಬಿ vs ಎಂಐ ಪಂದ್ಯದಲ್ಲಿ ಇತಿಹಾಸ ಸೃಷ್ಟಿಸಿದ ಜಸ್ಪ್ರೀತ್ ಬುಮ್ರಾ


ಒಂದೆಡೆ ಮುಂಬೈ ಇಂಡಿಯನ್ಸ್ (Mumbai Indians) ತಂಡ ಗೆಲುವಿನ ಸಂಭ್ರಮದಲ್ಲಿದ್ದರೆ, ಮತ್ತೊಂದೆಡೆ ಬುಮ್ರಾ ಅವರ ಮಾಸ್ಟರ್‌ಕ್ಲಾಸ್ ಮೊಹಮ್ಮದ್ ಸಿರಾಜ್ ಅವರನ್ನು ಮಂತ್ರ ಮುಗ್ದರನ್ನಾಗಿಸಿತು.  ಸಾಂಪ್ರದಾಯಿಕ ಪಂದ್ಯದ ನಂತರದ ಹ್ಯಾಂಡ್‌ಶೇಕ್‌ ಮಾಡುವ ಸಂದರ್ಭದಲ್ಲಿ ಭಾವುಕರಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ (Mohammed Siraj) ಟೀಂ ಇಂಡಿಯಾದ ತನ್ನ ಸಹ ಆಟಗಾರ ಬುಮ್ರಾ ಅವರಿಗೆ ನಮಸ್ಕರಿಸಿದರು. ಇದು ಎಂಐ ಬೌಲಿಂಗ್ ಸ್ಟಾರ್‌ನ 5/21 ರ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳನ್ನು ಒಪ್ಪಿಕೊಳ್ಳುವ ಒಂದು ಸೂಚಕವಾಗಿದೆ.


ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರ ನಡುವಿನ ಈ ದೃಶ್ಯ ಇಬ್ಬರ ನಡುವಿನ ಗೌರವ ಮತ್ತು ಸೌಹಾರ್ದತೆಗೆ ಸಾಕ್ಷಿಯಾಯಿತಲ್ಲದೆ, ಈ ವಿನಮ್ರ ಭಾವವು ಕ್ರಿಕೆಟ್ ಜಗತ್ತನ್ನು ವಿಸ್ಮಯಗೊಳಿಸಿತು. ಮೊಹಮ್ಮದ್ ಸಿರಾಜ್ ಅವರ ಈ ನಡೆ ಆಟದ ನಿಜವಾದ ಮನೋಭಾವವನ್ನು ಒತ್ತಿಹೇಳುತ್ತಿದೆ. 


ಇದನ್ನೂ ಓದಿ- IPL 2024: 'Virat Kohli ಅವರನ್ನು ಟಿ20 ವಿಶ್ವಕಪ್ ಗೆ ಆಯ್ಕೆ ಮಾಡಬಾರದು'


ಯಾವುದೇ ಕ್ರೀಡೆಯಲ್ಲಿ ಉಭಯ ತಂಡಗಳ ನಡುವಿನ ಆಟವು ಮೈದಾನದೊಳಗಿನ ತೀವ್ರ ಪೈಪೋಟಿಯಿಂದ ಕೂಡಿರುತ್ತದೆ. ಆದರೂ, ಮೈದಾನದ ಹೊರಗಿನ ಸೌಹಾರ್ದತೆಯನ್ನು ಈ ದೃಶ್ಯ ಪ್ರತಿಬಿಂಬಿಸುತ್ತದೆ. ಐಪಿಎಲ್‌ನ ಈ ಹೃದಯಸ್ಪರ್ಶಿ ದೃಶ್ಯವು, ಕ್ರೀಡಾ ಜಗತ್ತಿನಲ್ಲಿ ತಂಡಗಳು ಮತ್ತು ಸ್ಪರ್ಧೆಯ ಗಡಿಗಳನ್ನು ಮೀರಿದ ಪರಸ್ಪರ ಗೌರವ ಮತ್ತು ಸೌಹಾರ್ದತೆಯ ಮನೋಭಾವವನ್ನು ನಮಗೆ ನೆನಪಿಸುತ್ತವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.