ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಬದಲಾವಣೆಗಳ ಗಾಳಿ ಬಿಸಿದ್ದು ಇದಕ್ಕೆ ಪೂರಕವಾಗಿ ಈಗ ಪಾಕಿಸ್ತಾನದ ದಂತಕಥೆ ವಾಸಿಂ ಅಕ್ರಂ ನೀಡಿರುವ ಹೇಳಿಕೆ ಬಂದಿದೆ.


COMMERCIAL BREAK
SCROLL TO CONTINUE READING

ಹೌದು, ಅವರು ಈಗ ಭಾರತದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಅವರ ಐಪಿಎಲ್ ಭವಿಷ್ಯದ ಕುರಿತಾಗಿ ವಿಸ್ತೃತವಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.ನೂತನ ನಾಯಕ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ (MI) ತಂಡವು IPL 2024 ರಲ್ಲಿ ನೀಡಿದ ಕಳಪೆ ಪ್ರದರ್ಶನದ ನಂತರ ರೋಹಿತ್ ಅವರ ಭವಿಷ್ಯದ ಬಗ್ಗೆ ಮಾತನಾಡಿರುವ ಅವರು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೇರುವ ಸಾಧ್ಯತೆ ಇದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.


'ಮುಂದಿನ ಋತುವಿನಲ್ಲಿ ಅವರು ಮುಂಬೈ ಇಂಡಿಯನ್ಸ್‌ನಲ್ಲಿ ಇರುವುದಿಲ್ಲ ಎಂಬ ಭಾವನೆ ನನ್ನಲ್ಲಿದೆ. ನಾನು ಅವರನ್ನು ಕೆಕೆಆರ್‌ನಲ್ಲಿ ನೋಡಲು ಇಷ್ಟಪಡುತ್ತೇನೆ. ಅವರು ಅಲ್ಲಿ ಆಟವಾಡುತ್ತಾರೆ ಎಂದು ಊಹಿಸಿಕೊಳ್ಳಿ, ಗೌತಿ ಒಬ್ಬ ಮಾರ್ಗದರ್ಶಕನಾಗಿ ಮತ್ತು ಅಯ್ಯರ್ ನಾಯಕನಾಗಿ, ಅವರು ಆ ವಿಕೆಟ್‌ನಲ್ಲಿ ಬಹಳ ಬಲವಾದ ಬ್ಯಾಟಿಂಗ್ ಘಟಕವನ್ನು ಹೊಂದಿರುತ್ತಾರೆ. ಅವರು ಯಾವುದೇ ವಿಕೆಟ್‌ನಲ್ಲಿ ಉತ್ತಮವಾಗಿ ಬ್ಯಾಟ್ ಮಾಡುತ್ತಾರೆ, ಅವರು ಉತ್ತಮ ಆಟಗಾರ. ಆದರೆ ಅವರನ್ನು ಕೆಕೆಆರ್‌ನಲ್ಲಿ ನೋಡುವುದು ಒಳ್ಳೆಯದು' ಎಂದು ಅಕ್ರಮ್ ತಿಳಿಸಿದ್ದಾರೆ.


ಈಗ ಅಕ್ರಂ ಅವರ ಹೇಳಿಕೆ ಒಂದು ವೇಳೆ ನಿಜವಾದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದ ವಹಿಸಿ ಐದು ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ರೋಹಿತ್ ಶರ್ಮಾ ಕೋಲ್ಕತ್ತಾ ತಂಡದಲ್ಲಿ ಗಮನಾರ್ಹ ಬದಲಾವಣೆಯನ್ನು ತರುವ ಸಾಧ್ಯತೆ ಇದೆ ಎನ್ನಲಾಗಿದೆ.ಆದಾಗ್ಯೂ, ಅಕ್ರಂ ಅವರ ಹೇಳಿಕೆ ಊಹಾತ್ಮಕವಾಗಿವೆ. ಏಕೆಂದರೆ IPL 2025 ಆಟಗಾರರ ಹರಾಜಿಗೆ ಇನ್ನೂ ತಿಂಗಳುಗಳು ಬಾಕಿ ಉಳಿದಿವೆ ಮತ್ತು MI ಮತ್ತು KKR ಎರಡೂ ತಂಡಗಳ ತಂತ್ರಗಳ ಬಗ್ಗೆ ಇನ್ನೂ ಮಾಹಿತಿ ಇಲ್ಲ. ರೋಹಿತ್ ಶರ್ಮಾ KKR ಗೆ ಹೋಗುತ್ತಾರೋ ಅಥವಾ MI ಗೆ ನಿಷ್ಠರಾಗಿ ಉಳಿಯುತ್ತಾರೋ ಎಂಬುದು ಇನ್ನೂ ಯಕ್ಷ ಪ್ರಶ್ನೆಯಾಗಿ ಉಳಿದಿದೆ.


ಐಪಿಎಲ್ 2024 ರ ಋತುವಿನಲ್ಲಿ ರೋಹಿತ್ ಶರ್ಮಾ ಅವರ ಪ್ರದರ್ಶನಕ್ಕೆ ಬರುವುದಾದರೆ, 11 ಪಂದ್ಯಗಳಲ್ಲಿ 32.60 ರ ಸರಾಸರಿಯಲ್ಲಿ 326 ರನ್ ಗಳಿಸಿದ್ದರೂ, ಅವರ ಸ್ಟ್ರೈಕ್ ರೇಟ್ 158.29 ತ್ವರಿತ ಸ್ಕೋರ್ ಮಾಡುವ ಸಾಮರ್ಥ್ಯವನ್ನು ತೋರಿಸುತ್ತದೆ. ಅವರು ಆರಂಭದಲ್ಲಿ ಪ್ರಬಲ ಇನ್ನಿಂಗ್ಸ್‌ಗಳನ್ನು ಹೊಂದಿದ್ದರೂ, ಪಂದ್ಯಾವಳಿಯ ಅಂತ್ಯದಲ್ಲಿ ಶರ್ಮಾ ಅವರ ಫಾರ್ಮ್ ಕ್ಷೀಣಿಸಿತು.