IPL 2024 Hardik Pandya Video: ಈ ಬಾರಿಯ ಐಪಿಎಲ್ 2024 ರಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ (MI) ತಂಡವು ಇದುವರೆಗೂ ತನ್ನ ಖಾತೆಯನ್ನು ತೆರೆಯಲು ಹೆಣಗಾಡುತ್ತಿದೆ, ಹೈದ್ರಾಬಾದ್ ನಲ್ಲಿ ನಿನ್ನೆ ತಂಡ SRH ವಿರುದ್ಧ ಹೀನಾಯ ಸೋಲನ್ನು ಅನುಭವಿಸಿದೆ. ಮುಂಬೈಗೆ ಇದು ಸತತ ಎರಡನೇ ಸೋಲಾಗಿದೆ, ಇದಕ್ಕೂ ಮೊದಲು MI ತಂಡವು ಗುಜರಾತ್ ವಿರುದ್ಧ ಸೋಲನ್ನು ಅನುಭವಿಸಿತ್ತು (Hardik Pandya Complete Disappointment After Defeat). ನಿನ್ನೆಯ ಸೋಲಿನ ಬಳಿಕ ಹಾರ್ದಿಕ್ ತೀವ್ರ ನಿರಾಸೆ ಮತ್ತು ಹತಾಶೆಯ ಮನೋಭಾವದಲ್ಲಿ ಕಂಡಿದ್ದಾರೆ. 


COMMERCIAL BREAK
SCROLL TO CONTINUE READING

ಬ್ಯಾಂಟಿಂಗ್ ನಲ್ಲಿಯೂ ವಿಫಲರಾದ ಹಾರ್ದಿಕ್ ಪಾಂಡ್ಯಾ
ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದ್ರಾಬಾದ್ (Sun Raisers Hyderabad) ತಂಡ ಮುಂಬೈ ತಂಡಕ್ಕೆ ದಾಖಲೆಯ ಟಾರ್ಗೆಟ್ ನೀಡಿತ್ತು, ಒಮ್ಮೊಮ್ಮೆ ಎಂಐ ತಂಡ ಈ ಗುರಿಯನ್ನು ಸುಲಭವಾಗಿ ಸಾಧಿಸಲಿದೆ ಎಂಬಂತೆ ತೋರಿತು. ಆದರೆ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಬ್ಯಾಟಿಂಗ್‌ಗೆ ಬಂದ ತಕ್ಷಣ ಕಥೆ ಸಂಪೂರ್ಣ ಬದಲಾಯಿತು, ಈ ಸಂದರ್ಭದಲ್ಲಿ ಹಾರ್ದಿಕ್ ಅತ್ಯಂತ ನಿಧಾನವಾಗಿ ಬ್ಯಾಟಿಂಗ್ ಮಾಡಿ 20 ಎಸೆತಗಳಲ್ಲಿ ಕೇವಲ 24 ರನ್ ಗಳಿಸಿದರು. ಇದರ ನಂತರ ಅವರು ಸಾಮಾಜಿಕ ಜಾಲತಾಣಗಳಲ್ಲಿ (Social Media) ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿ ಭಾರಿ ಟ್ರೋಲ್ ಗೆ ಒಳಗಾದರು..


ಹಾರ್ದಿಕ್ ಪಾಂಡ್ಯ ಮೈದಾನದಲ್ಲಿ ಅಳುವುದೊಂದೇ ಬಾಕಿ ಇತ್ತು
ಹೈದರಾಬಾದ್‌ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಎಸ್‌ಆರ್‌ಎಚ್ ಎಂಐ ತಂಡವನ್ನು ಸೋಲಿಸಿದೆ. ಈ ಸೋಲಿನ ನಂತರ ತಂಡದ ನಾಯಕ ಹಾರ್ದಿಕ್ ಪಾಂಡ್ಯ ತುಂಬಾ ಹತಾಶರಾಗಿರುವುದು ಕಂಡುಬಂದಿದೆ. ಆಟಗಾರರ ಜೊತೆ ಕೈಕುಲುಕುವಾಗ ಪಾಂಡ್ಯ ತುಂಬಾ ನಿರಾಸೆ ಅನುಭವಿಸುತ್ತಿರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ಹಾರ್ದಿಕ್ ನಾಯಕತ್ವದಲ್ಲಿ ಮುಂಬೈ ತಂಡ (Mumbai Indians) ಇದುವರೆಗೆ ಸತತ 2 ಪಂದ್ಯಗಳಲ್ಲಿ ಸೋತಿದೆ. ಪಂದ್ಯ ಸೋತ ಬಳಿಕ ಹಾರ್ದಿಕ್ ಸ್ಥಿತಿ ಹದಗೆತ್ತಿದೆ


ನಿನ್ನೆ ಐಪಿಎಲ್‌ನಲ್ಲಿ ಹಲವು ದೊಡ್ಡ ದಾಖಲೆಗಳು ನಿರ್ಮಾಣಗೊಂಡಿವೆ
ಮತ್ತೊಂದೆಡೆ, ಐಪಿಎಲ್‌ನಲ್ಲಿ ಎಸ್‌ಆರ್‌ಹೆಚ್ ವಿರುದ್ಧ ಎಂಐ ಪಂದ್ಯದ ಸಮಯದಲ್ಲಿ ಅನೇಕ ಹೊಸ ದಾಖಲೆಗಳನ್ನು ಬರೆಯಲಾಗಿದೆ, ಮೊದಲ ದಾಖಲೆ ಎಂದರೆ ಅದು ಲೀಗ್ ನ ಅತ್ಯಧಿಕ ಸ್ಕೋರ್. ಈ ಪಂದ್ಯದಲ್ಲಿ  SRH ತಂಡ ಇದುವರೆಗಿನ IPL ಇತಿಹಾಸದಲ್ಲಿಯೇ   ಪಂದ್ಯವೊಂದರಲ್ಲಿ ಅತ್ಯಧಿಕ ಸ್ಕೋರ್ ಮಾಡುವ ತಂಡವಾಗಿ ಹೊರಹೊಮ್ಮಿದೆ. ತಂಡ MI ವಿರುದ್ಧ ಆಡುವಾಗ 277 ರನ್ ಗಳ ಬೃಹತ್ ಮೊತ್ತ ಕಲೆಹಾಕಿದೆ.  ಅಲ್ಲದೆ ಈ ಪಂದ್ಯದಲ್ಲಿ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ್ದು, 277 ರನ್ ಚೇಸಿಂಗ್ ವೇಳೆ ಎಂಐ ತಂಡ ಕೂಡ 246 ರನ್ ಗಳಿಸಿದೆ. ಈ ಗೆಲುವಿನ ಮೂಲಕ SRH IPL 2024 ರಲ್ಲಿ ತನ್ನ ಗೆಲುವಿನ ಖಾತೆಯನ್ನು ತೆರೆದಿದ್ದರೆ, MI ತಂಡವು ಇಲ್ಲಿಯವರೆಗೆ ಸತತ ಎರಡು ಸೋಲುಗಳನ್ನು ಅನುಭವಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ