IPL 2024 Initial Time Table Announced: ಈ ಬಾರಿ ಮಾರ್ಚ್ 22 ರಿಂದ ಐಪಿಎಲ್ 2024 ಆರಂಭಗೊಳ್ಳಲಿದೆ. ಪಂದ್ಯಾವಳಿಯ ಆರಂಭಿಕ ವೇಳಾಪಟ್ಟಿಯನ್ನು ಐಪಿಎಲ್ ಮಂಡಳಿ ಪ್ರಕಟಿಸಿದೆ.  ಲೋಕಸಭೆ ಚುನಾವಣೆಗಳ ಹಿನ್ನೆಲೆ ಮೊದಲ 17 ದಿನಗಳ ಪಂದ್ಯಗಳನ್ನು ಪ್ರಕಟಿಸಲಾಗಿದೆ. ಇದಾದ ಬಳಿಕ ಪಂದ್ಯಾವಳಿಯ ಉಳಿದ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಯಾಗಲಿದೆ. ಮುಂಬರುವ ಋತುವಿನ ಮೊದಲ ಪಂದ್ಯವು ಮಾರ್ಚ್ 22 ರಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಈ ಪಂದ್ಯ ಧೋನಿ ತಂಡದ ನೆಲ ಅಂದರೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. (IPL 2024 News In Kannada)


IPL 2024 Fixture: ಡೆಲ್ಲಿ ಕ್ಯಾಪಿಟಲ್ಸ್‌ ಪಂದ್ಯ ಸ್ಥಳಾಂತರ: ಮತ್ತೊಂಮ್ಮೆ ಡಿಡಿಸಿಎ ಸ್ಥಳಕ್ಕಾಗಿ ಹೆಣೆದಾಟ!


COMMERCIAL BREAK
SCROLL TO CONTINUE READING

17 ದಿನಗಳ ವೇಳಾಪಟ್ಟಿ ಪ್ರಕಟಣೆ
ಮಾರ್ಚ್ 22 ರಿಂದ ಏಪ್ರಿಲ್ 7 ರವರೆಗಿನ ಪಂದ್ಯಾವಳಿಯ ಮೊದಲ 17 ದಿನಗಳ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಗೊಂಡಿದೆ, ಇದಕ್ಕೆ ಕಾರಣ ಎಂದರೆ ಲೋಕಸಭೆ ಚುನಾವಣೆಗಳು ಎನ್ನಲಾಗಿದೆ.  ಚುನಾವಣಾ ಆಯೋಗದ ವತಿಯಿಂದ ಸಾರ್ವತ್ರಿಕ ಚುನಾವಣೆಯ ದಿನಾಂಕಗಳ ಘೋಷಣೆ ಬಳಿಕ ಮಂಡಳಿ ಪಂದ್ಯಾವಳಿಯ ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಆರಂಭಿಕ ಹಣಾಹಣಿ ನಡೆಯಲಿದೆ. ಇದೇ ವೇಳೆ  2023 ರ ಋತುವಿನ ಫೈನಲಿಸ್ಟ್‌ಗಳಾದ ಗುಜರಾತ್ ಟೈಟಾನ್ಸ್, ತಂಡದ ಮಾಜಿ ನಾಯಕ ಹಾರ್ದಿಕ್ ಪಾಂಡ್ಯ ಅವರ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯವನ್ನು ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಪಂದ್ಯ ಮಾರ್ಚ್ 24 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ.


ಇದನ್ನೂ ಓದಿ-IPL 2024 Update: ಗುಜರಾತ್ ಟೈಟಾನ್ಸ್‌ಗೆ ಬಿಗ್​ ಶಾಕ್..! ಐಪಿಎಲ್ 2024ರಿಂದ ಮೊಹಮ್ಮದ್ ಶಮಿ ಔಟ್!!


ಪಂದ್ಯಗಳು ಆರಂಭಗೊಳ್ಳುವ ಸಮಯಗಳು ಇಂತಿವೆ
ಟೂರ್ನಿಯ ಉದ್ಘಾಟನಾ ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಉಳಿದ ಪಂದ್ಯಗಳು ಸಂಜೆ 7:30 ರಿಂದ ನಡೆಯಲಿವೆ. ಮಧ್ಯಾಹ್ನ ನಡೆಯಲಿರುವ ಪಂದ್ಯಗಳು ಮಧ್ಯಾಹ್ನ 3:30ಕ್ಕೆ ಆರಂಭವಾಗಲಿವೆ. ಬಿಡುಗಡೆಯಾದ 21 ಪಂದ್ಯಗಳ ವೇಳಾಪಟ್ಟಿಯಲ್ಲಿ, 4 ದಿನಗಳಲ್ಲಿ ಡಬಲ್ ಹೆಡರ್ ಪಂದ್ಯಗಳನ್ನು ಗಮನಿಸಲಾಗಿದೆ. ಇದೇ ವೇಳೆ, ಉಳಿದ ದಿನಗಳಲ್ಲಿ ತಲಾ ಒಂದು ಪಂದ್ಯವನ್ನು ಆಡಲಾಗುತ್ತದೆ. ಡಬಲ್ ಹೆಡರ್ ಪಂದ್ಯಗಳು ಮಾರ್ಚ್ 23, 24 ಮಾರ್ಚ್, 31 ಮಾರ್ಚ್ ಮತ್ತು ಏಪ್ರಿಲ್ 7 ರಂದು ನಡೆಯಲಿವೆ. ಶನಿವಾರ (ಮಾರ್ಚ್ 23) ಮಧ್ಯಾಹ್ನ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಿಂದ ಪ್ರಾರಂಭವಾಗುವ ಮೊದಲ ವಾರದಲ್ಲಿ ಎರಡು ಡಬಲ್ ಹೆಡರ್‌ಗಳು ಇರುತ್ತವೆ. ಇದಾದ ಬಳಿಕ ಸಂಜೆ ಕೋಲ್ಕತ್ತಾ ನೈಟ್ ರೈಡರ್ಸ್ vs ಸನ್ ರೈಸರ್ಸ್ ಹೈದರಾಬಾದ್ ನಡುವೆ ಹಣಾಹಣಿ ನಡೆಯಲಿದೆ. ಭಾನುವಾರ (ಮಾರ್ಚ್ 24) ಮಧ್ಯಾಹ್ನ ರಾಜಸ್ಥಾನ್ ರಾಯಲ್ಸ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಇನ್ನೊಂದೆಡೆ, ಗುಜರಾತ್ ಟೈಟಾನ್ಸ್ ಮತ್ತು ಐದು ಬಾರಿ ವಿಜೇತ ಮುಂಬೈ ಇಂಡಿಯನ್ಸ್ ನಡುವೆ ಸಂಜೆ ಪಂದ್ಯ ನಡೆಯಲಿದೆ.


21 ಪಂದ್ಯಗಳ ಟೈಮ್ ಟೇಬಲ್ ಇಂತಿದೆ
ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.