Virat Kohli Video: ವಿರಾಟ್ ಕೊಹ್ಲಿ ಇತ್ತೀಚಿನ ದಿನಗಳಲ್ಲಿ IPL 2024ರಲ್ಲಿ  ಅದ್ಭುತ ಪ್ರದರ್ಶನವನ್ನು ತೋರಿಸುತ್ತಿದ್ದಾರೆ. ರನ್ ಮಶೀನ್ ಎಂದೇ ಕರೆಯಲ್ಪಡುವ ಕಿಂಗ್ ಕೊಹ್ಲಿಗೆ ಇದು ಸಾಮಾನ್ಯ ಸಂಗತಿಯಾಗಿದೆ, ಆದರೆ ಏತನ್ಮಧ್ಯೆ ಅವರು ತಮ್ಮ ವೈಯಕ್ತಿಕ ಜೀವನದಲ್ಲಿಯೂ ಕೂಡ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಮರೆಯುವುದಿಲ್ಲ.

COMMERCIAL BREAK
SCROLL TO CONTINUE READING

ವಿರಾಟ್ ಕೊಹ್ಲಿ ಇತ್ತೀಚೆಗೆ ಇದ್ದಕ್ಕಿದ್ದಂತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಅವರು ಎಲ್ಲಿಗೂ ಹೋಗುವ ತವಕದಲ್ಲಿದ್ದಾರೆ ಎಂಬಂತೆ ತೋರುತ್ತಿದೆ. ಬಹುಶಃ ಬೇಗ ಮನೆಗೆ ಹೋಗಿ ಹೆಂಡತಿ ಮಕ್ಕಳನ್ನು ಭೇಟಿಯಾಗಬೇಕು ಎಂಬಂತೆ ತೋರುತ್ತಿದೆ. ವಿರಾಟ್ ಕೊಹ್ಲಿ ತಮ್ಮ ಕುಟುಂಬವನ್ನು ಭೇಟಿಯಾಗಲು ಆತುರರಾಗುವುದು ಇದೇ ಮೊದಲ ಬಾರಿ ಅಲ್ಲ, ಅವರು ಪಂದ್ಯ ಮುಗಿದ ತಕ್ಷಣ ಮುಂಬೈಗೆ ತೆರಳುತ್ತಾರೆ.


ಇದನ್ನೂ ಓದಿ-IPL 2024: KKR ತಂಡದ ಜೊತೆಗೆ ಮೈದಾನದಲ್ಲಿ ಬೆವರು ಸುರಿಸಿದ Shah Rukh Khan-AbRam, ಇಲ್ಲಿವೆ ವಿಡಿಯೋ!

ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ವಿರಾಟ್ ಕೊಹ್ಲಿಯನ್ನು ನೋಡಿದ ಜನರು ಕಿಂಗ್ ಕೊಹ್ಲಿ ಕುರಿತು ತುಂಬಾ ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ. ಬಹಿರಂಗಗೊಂಡ ವಿರಾಟ್ ಕೊಹ್ಲಿಯ ಈ ವಿಡಿಯೋಗೆ ಪ್ರತಿಕ್ರಿಯಿಸಿದ ಓರ್ವ ಸಾಮಾಜಿಕ ಮಾಧ್ಯಮ ಬಳಕೆದಾರರು, 'ಪ್ರತಿ ಪಂದ್ಯದ ನಂತರ, ವಿರಾಟ್ ತನ್ನ ಪತ್ನಿ ಅನುಷ್ಕಾ ಮತ್ತು ಮಕ್ಕಳೊಂದಿಗೆ ಇರಲು ಮುಂಬೈಗೆ ಪ್ರಯಾಣ ಬೆಳೆಸುತ್ತಾರೆ ಮತ್ತು ಆಟವಾಡಲು ಮುಂದಿನ ನಗರಕ್ಕೆ ಮರಳುತ್ತಾರೆ' ಎಂದಿದ್ದಾರೆ. ಈ ಕುರಿತು ಬರೆದುಕೊಂಡ ಎರಡನೇ ಬಳಕೆದಾರರು 'ಅವರು ಪ್ರತಿ ಪಂದ್ಯದ ನಂತರ ಮನೆಗೆ ಬರುತ್ತಾರೆಯೇ? ಅವರು ಎಷ್ಟು ಸುಂದರ ಪತಿಯಾಗಿದ್ದಾರೆ' ಎಂದಿದ್ದಾರೆ. ಈ ಕುರಿತು ಬರೆದುಕೊಂಡ ಮೂರನೇ ಬಳಕೆದಾರರು 'ನೀನು ವಿಶ್ವದ ಎಂಟನೇ ಅದ್ಭುತ' ಅಂತ ಹೇಳಿದ್ದಾರೆ.


ಇದನ್ನೂ ಓದಿ-IPL 2024 RCB vs GT: ಪಂದ್ಯದ ನಡುವೆಯೇ ತಮಾಷೆ ಮಾಡುತ್ತಾ Shubhman Gill ಗಿಲಕಿದ Virat Kohli, Watch Video

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ವೈವಾಹಿಕ ಜೀವನದ ಕುರಿತು ಹೇಳುವುದಾದರೆ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ವಿವಾಹವು ಇಟಲಿಯಲ್ಲಿ 11 ಡಿಸೆಂಬರ್ 2017 ರಂದು ನೆರವೇರಿದೆ. ಈ ಮದುವೆಯಲ್ಲಿ ಕೆಲವೇ ಕೆಲವು ಜನರು ಹಾಜರಿದ್ದರು. ಆದರೆ ಇಂದಿಗೂ ಅದನ್ನು ಬಾಲಿವುಡ್‌ನ ಅತ್ಯುತ್ತಮ ಮದುವೆ ಎಂದು ಕರೆಯಲಾಗುತ್ತದೆ. ಮದುವೆಯಾದ ಮೂರು ವರ್ಷಗಳ ನಂತರ, ದಂಪತಿಗೆ ವಾಮಿಕಾ ಎಂಬ ಮುದ್ದಾದ ಮಗಳು ಜನಿಸಿದ್ದಾಳೆ ಮತ್ತು ಈ ವರ್ಷ ಫೆಬ್ರವರಿ 15 ರಂದು ಅನುಷ್ಕಾ ಪುತ್ರರತ್ನನಿಗೆ ಜನ್ಮ ನೀಡಿದ್ದು, ದಂಪತಿ ತಮ್ಮ ಮಗನಿಗೆ ಅಕಾಯ್ ಎಂದು ಹೆಸರಿಟ್ಟಿದ್ದಾರೆ. ಅನುಷ್ಕಾ ಲಂಡನ್‌ನಲ್ಲಿ ಮಗನಿಗೆ ಜನ್ಮ ನೀಡಿದ್ದಾಳೆ ಕೆಲವೇ ದಿನಗಳ ಹಿಂದೆ ಅನುಷ್ಕಾ ಭಾರತಕ್ಕೆ ಮರಳಿದ್ದಾಳೆ. 


ವೈರಲ್ ವಿಡಿಯೋ ಇಲ್ಲಿದೆ ನೋಡಿ



ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.