MS Dhoni Last IPL: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್) 2024 ರ ಸೀಸನ್ ಮಾರ್ಚ್ 22 ರಿಂದ ಪ್ರಾರಂಭವಾಗಲಿದ್ದು.. ಇದಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಕ್ಯಾಪ್ಟನ್‌ ಹಾಗೂ ದಿಗ್ಗಜ ಆಟಗಾರ ಎಂಎಸ್ ಧೋನಿ ಈಗಾಗಲೇ ಸಿದ್ಧತೆಯಲ್ಲಿದ್ದಾರೆ.. ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವೆ ನಡೆಯಲಿದ್ದು.. ಪ್ರತಿ ಬಾರಿಯಂತೆ ಈ ಸಲವೂ ಎಂಎಸ್ ಧೋನಿ ಹಾಟ್‌ ಟಾಫಿಕ್‌ ಆಗಿದ್ದಾರೆ.. 


COMMERCIAL BREAK
SCROLL TO CONTINUE READING

ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವನ್ನು ಮುನ್ನಡೆಸುತ್ತಿರುವ ಎಂಎಸ್ ಧೋನಿ ಅವರ ಕೊನೆಯ ಐಪಿಎಲ್ ಇದಾಗಲಿದೆಯೇ? ಎನ್ನುವ ಚರ್ಚೆ ಇದೀಗ ಶುರುವಾಗಿದೆ.. ಈ ಗೊಂದಲಳಿಗೆ ಮಿಸ್ಟರ್ ಐಪಿಎಲ್ ಎಂದೇ ಖ್ಯಾತಿ ಪಡೆದಿರುವ ಟೀಂ ಇಂಡಿಯಾ ಸ್ಟಾರ್ ಆಟಗಾರ ಸುರೇಶ್ ರೈನಾ ಉತ್ತರ ನೀಡಿದ್ದು.. "ನನಗೆ ಅದರ ಬಗ್ಗೆ ಯಾವುದೇ ಕಲ್ಪನೆ ಇಲ್ಲ. ಆದರೆ ಅವರು ನಿಜವಾಗಿಯೂ ಕಷ್ಟಪಟ್ಟು ತಯಾರಿ ನಡೆಸುತ್ತಿದ್ದಾರೆ.. ಅವರನ್ನು ಯೆಲ್ಲೋ ಜೆರ್ಸಿಯಲ್ಲಿ ನೋಡಲು ಅಭಿಮಾನಿಗಳು ಕಾತುರರಾಗಿರುತ್ತಾರೆ.. ಅಲ್ಲದೇ ಧೋನಿ ಕ್ರಿಕೆಟ್‌ ಲೋಕಕ್ಕೆ ಅಪಾರ ಕೊಡುಗೆನ್ನು ನೀಡಿದ್ದಾರೆ.. ಹಾಗೆ ನೋಡಿದರೆ 2023 ಧೋನಿಯವರ ಕೊನೆಯ ಐಪಿಎಲ್ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು.. ಆದರೆ ಅಪಾರ ಸಂಖ್ಯೆಯ ಬೆಂಬಲಿಗರು.. ಹಾಗೂ ಅಭಿಮಾನಿಳ ಪ್ರೀತಿಯನ್ನು ಪಡೆದ ಅವರು ನಿವೃತ್ತಿಯನ್ನು ಘೋಷಿಸಲಿಲ್ಲ" ಎಂದಿದ್ದಾರೆ.. 


ಇದನ್ನೂ ಓದಿ:  BCCI ಒಪ್ಪಂದ ಪಟ್ಟಿ ಪಕ್ರಟ: ಕೇಂದ್ರ ಗುತ್ತಿಗೆಯಿಂದ ಹೊರಬಿದ್ದ ಶ್ರೇಯಸ್, ಇಶಾನ್!


ಇನ್ನು IPL 2024 ಮಾರ್ಚ್ 22 ರಂದು ಪ್ರಾರಂಭವಾಗಲಿದ್ದು.. ಟೂರ್ನಿಯ 14 ದಿನಗಳ ವೇಳಾಪಟ್ಟಿ ಈಗಾಗಲೇ ಬಿಡುಗಡೆಯಾಗಿದೆ.. ಉಳಿದ ಅರ್ಧದಷ್ಟು ವೇಳಾಪಟ್ಟಿಯನ್ನು ಭಾರತದ ಸಾರ್ವತ್ರಿಕ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಬಿಡುಗಡೆ ಮಾಡಲಾಗುತ್ತದೆ. 


ಇದೆಲ್ಲದರ ಮಧ್ಯೆ ಈ ಬಾರಿಯ ಐಪಿಎಲ್‌ನಿಂದಲೇ ಎಂ ಎಸ್‌ ಧೋನಿ ನಿವೃತ್ತಿ ಹೊಂದಲು ಮುಂದಾಗಿದ್ದಾರೆ ಎಂಬ ಮಾತುಗಳು ಸಂಬಂಧಪಟ್ಟ ವಲಯದಲ್ಲಿ ಕೇಳಿಬರುತ್ತಿದ್ದು.. ಇದು ನಿಜವಾಗಿದ್ದರೇ ಈ ಬಾರಿಯ ಐಪಿಎಲ್ ಪ್ರಶಸ್ತಿ ಗೆಲ್ಲುವ ಮೂಲಕ ಧೋನಿಗೆ ಅದ್ಧೂರಿ ವಿದಾಯ ನೀಡುವ ನಿರೀಕ್ಷೆಯಲ್ಲಿ ಚೆನ್ನೈ ತಂಡವಿದೆ. 


ಇದನ್ನೂ ಓದಿ:  BCCI ಒಪ್ಪಂದ ಪಟ್ಟಿ ಪಕ್ರಟ: ಕೇಂದ್ರ ಗುತ್ತಿಗೆಯಿಂದ ಹೊರಬಿದ್ದ ಶ್ರೇಯಸ್, ಇಶಾನ್!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ