IPL 2024 MS Dhoni: ಕ್ರಿಕೆಟ್ ಜಗತ್ತಿನಲ್ಲಿ ಸಚಿನ್ ತೆಂಡೂಲ್ಕರ್ (Sachin Tendulkar) ಅವರಂತೆ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸುವ ಮತ್ತೊಬ್ಬ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ(Mahendra Singh Dhoni). ಕ್ರಿಕೆಟ್ ಮೈದಾನದಲ್ಲಿ ವಯಸ್ಸಿಗೂ ಕ್ರೀಡೆಗೂ ಸಂಬಂಧಿವಿಲ್ಲ ಎಂದು ನಿರಂತರವಾಗಿ ಸಾಬೀತುಪಡಿಸುತ್ತಿರುವ ಎಂ.ಎಸ್. ಧೋನಿ ವರ್ಷದಿಂದ ವರ್ಷಕ್ಕೆ ಹೊಸ ಎತ್ತರಕ್ಕೆ ಏರುತ್ತಿದ್ದಾರೆ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಇನ್ನೂ ಸಹ ಯಾವುದೇ ಸುದೀರ್ಘ ಇನ್ನಿಂಗ್ಸ್‌ಗಳನ್ನು ಆಡದ, ಆದಾಗ್ಯೂ, ಕೊನೆಯ ಓವರ್‌ಗಳಲ್ಲಿ ಬ್ಯಾಟಿಂಗ್‌ಗೆ ಬರುವ ಧೋನಿ ತಮ್ಮ ಫಿನಿಶಿಂಗ್ ಟಚ್ ಮೂಲಕವೇ ತಂಡಕ್ಕೆ ಆಸರೆಯಾಗಿ ನಿಂತಿದ್ದಾರೆ. ನಿನ್ನೆ ನಡೆದ ಐ‌ಪಿ‌ಎಲ್ ಪಂದ್ಯದಲ್ಲಿಯೂ ಧೋನಿ  ಕೊನೆಯ 4 ಎಸೆತಗಳಲ್ಲಿ 20 ರನ್‌ಗಳನ್ನು ಗಳಿಸಿ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದ್ದಾರೆ. 


COMMERCIAL BREAK
SCROLL TO CONTINUE READING

ಈ ಐ‌ಪಿ‌ಎಲ್  ಲೀಗ್‌ನಲ್ಲಿ ಎಂ.ಎಸ್. ಧೋನಿ (MS Dhoni) ಪಂದ್ಯದ ಕೊನೆಯ ಓವರ್‌ನಲ್ಲಿ ಗಳಿಸಿದ ರನ್‌ಗಳ ಅಂಕಿಅಂಶಗಳನ್ನು ಗಮನಿಸಿದರೆ ಖಂಡಿತವಾಗಿಯೂ ಯಾರಿಗಾದರೂ ಆಶ್ಚರ್ಯವಾಗದೆ ಇರದು.  ಐಪಿಎಲ್‌ನ 20ನೇ ಓವರ್‌ನಲ್ಲಿ ಧೋನಿ ಇದುವರೆಗೆ  309 ಎಸೆತಗಳಲ್ಲಿ 51 ಬೌಂಡರಿ ಮತ್ತು 64 ಸಿಕ್ಸರ್‌ಗಳನ್ನು ಒಳಗೊಂಡಂತೆ 244.66 ಸ್ಟ್ರೈಕ್ ರೇಟ್‌ನಲ್ಲಿ   756 ರನ್  ಕಲೆಹಾಕಿದ್ದಾರೆ.  


ಇದನ್ನೂ ಓದಿ- RCB vs SRH, IPL 2024: ಹೈದರಾಬಾದ್‌ ವಿರುದ್ಧ RCBಗೆ ಗೆಲ್ಲಲೇಬೇಕಾದ ಒತ್ತಡ!


ಐಪಿಎಲ್‌ನ 20ನೇ ಓವರ್‌ನಲ್ಲಿ ಬ್ಯಾಟಿಂಗ್ ವೇಗವನ್ನು ದ್ವಿಗುಣಗೊಳಿಸುವ ಎಂಎಸ್ ಧೋನಿ: 
42ವರ್ಷ ವಯಸ್ಸಿನ ಮಹೇಂದ್ರ ಸಿಂಗ್ ಧೋನಿ   (Mahendra Singh Dhoni) ಈ ಲೀಗ್‌ನಲ್ಲಿ 256 ಪಂದ್ಯಗಳಲ್ಲಿ 222 ಬಾರಿ ಬ್ಯಾಟಿಂಗ್‌ಗೆ ಇಳಿದಿದ್ದು 5141 ರನ್ ಗಳಿಸಿದ್ದಾರೆ. ಅದರಲ್ಲಿ ಅವರು 20 ನೇ ಓವರ್‌ನಲ್ಲಿ 756 ರನ್ ಗಳಿಸಿದ್ದಾರೆ. ಎಂ. ಎಸ್. ಧೋನಿ, ಅವರ ಎಲ್ಲಾ ಇನ್ನಿಂಗ್ಸ್‌ಗಳ ಒಟ್ಟು ಸ್ಟ್ರೈಕ್ ರೇಟ್ 136.58 ಆಗಿದೆ, ಇದರಲ್ಲಿ 353 ಬೌಂಡರಿಗಳು ಮತ್ತು 245 ಸಿಕ್ಸರ್‌ಗಳು ಸೇರಿವೆ. ಆದರೆ ಧೋನಿ ಯಾವುದೇ ಇನ್ನಿಂಗ್ಸ್‌ನ 20 ನೇ ಓವರ್‌ನವರೆಗೆ ಇದ್ದಾಗ ಅವರ ಸ್ಕೋರ್‌ನ ವೇಗವು ಬಹುತೇಕ ದ್ವಿಗುಣಗೊಳ್ಳುತ್ತದೆ.


ಈ ಋತುವಿನಲ್ಲಿ  340 ದಾಟಿದ ಸ್ಟ್ರೈಕ್ ರೇಟ್: 
ಐ‌ಪಿ‌ಎಲ್ (IPL) ಈ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಎಂ.ಎಸ್. ಧೋನಿ ಯಾವುದೇ ಶತಕ ಗಳಿಸಿಲ್ಲ. ಆದಾಗ್ಯೂ, ಈ ಋತುವಿನಲ್ಲಿ, 20 ನೇ ಓವರ್‌ನಲ್ಲಿ ರನ್ ಗಳಿಸುವ ಅವರ ಸಾಮರ್ಥ್ಯದಲ್ಲಿ ವಿಭಿನ್ನತೆ ಗೋಚರಿಸಿದ್ದು ಮಹಾ ಕದನದಲ್ಲಿ ಎದುರಾಳಿ ತಂಡಕ್ಕೆ ದುಃಸ್ವಪ್ನವಾಗಿ ಕಾಡುತ್ತಿದ್ದಾರೆ. 


ಇದನ್ನೂ ಓದಿ- IPL 2024: ಧೋನಿ ಎಂದರೆ ಬರಿ ಆಟವಲ್ಲ ಕಣಾ..ಅದೊಂದು ಹೃದ್ಯ ಸ್ಪರ್ಶ ಕಾವ್ಯ...!


ಈ ಋತುವಿನಲ್ಲಿ, ಎಂ.ಎಸ್. ಧೋನಿ,  4 ಬಾರಿ ಬ್ಯಾಟ್ ಮಾಡಿದ್ದಾರೆ ಮತ್ತು ಇದುವರೆಗೆ 20 ನೇ ಓವರ್‌ನಲ್ಲಿ 12 ಎಸೆತಗಳಲ್ಲಿ 41 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 2 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಋತುವಿನಲ್ಲಿ 20ನೇ ಓವರ್‌ನಲ್ಲಿ ಅವರ ಸ್ಟ್ರೈಕ್ ರೇಟ್ 341.66 ಆಗಿದೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.