Indian Premier League 2024ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿರುವ ಭಾರತೀಯ ಸ್ಪಿನ್ ಮಾಂತ್ರಿಕ ಯುಜ್ವೇಂದ್ರ ಚಹಾಲ್ ಈ ಪಂದ್ಯಾವಳಿಯ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಚಹಲ್ ಐಪಿಎಲ್ 2024 ರಲ್ಲೂ ತಮ್ಮ ಅದ್ಭುತ ಬೌಲಿಂಗ್‌ನಿಂದ ಬ್ಯಾಟ್ಸ್‌ಮನ್‌ಗಳಿಗೆ ಸಾಕಷ್ಟು ತೊಂದರೆ ನೀಡಿದ್ದಾರೆ. ಚಹಲ್ ಐಪಿಎಲ್ 2024 ರ 27 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದು. ಈ ಪಂದ್ಯದಲ್ಲಿ ಒಂದು ವಿಶಿಷ್ಟ ಸಾಧನೆ ಅವರ ಗುರಿಯ ಮೇಲಿದೆ. ಹೌದು ಈ ಪಂದ್ಯದಲ್ಲಿ ಅವರು ಒಂದು ವಿಶಿಷ್ಟ ದ್ವಿಶತಕ ಪೂರೈಸಲು ಕೇವಲ 3 ಹೆಜ್ಜೆ ದೂರದಲ್ಲಿದ್ದಾರೆ. ಇದುವರೆಗೆ ಐಪಿಎಲ್‌ನಲ್ಲಿ ಯಾವುದೇ ಆಟಗಾರ ಇಂತಹ ಸಾಧನೆ ಮಾಡಿಲ್ಲ. 


COMMERCIAL BREAK
SCROLL TO CONTINUE READING

ಚಹಲ್ ನಿಂದ ವಿಶಿಷ್ಟ ಡಬಲ್ ಸೆಂಚ್ಯೂರಿ ನಿರೀಕ್ಷೆ
2013ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಐಪಿಎಲ್‌ನಲ್ಲಿ ಇದುವರೆಗೆ 197 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು 150 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಅವರು 200 ಐಪಿಎಲ್ ವಿಕೆಟ್‌ಗಳನ್ನು ಪೂರೈಸಲು ಕೇವಲ 3 ಹೆಜ್ಜೆ ದೂರದಲ್ಲಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧ ಚಹಾಲ್ ಈ ಸಾಧನೆ ಪೂರ್ಣಗೊಳಿಸುವ ನಿರೀಕ್ಷೆ ಹೊಂದಿದ್ದಾರೆ. 3 ವಿಕೆಟ್ ಕಬಳಿಸುವ ಮೂಲಕ ಐಪಿಎಲ್ ನಲ್ಲಿ 200 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಕೀರ್ತಿಗೆ ಅವರು ಪಾತ್ರರಾಗಲಿದ್ದಾರೆ. ಐಪಿಎಲ್‌ನಲ್ಲಿ ಚಹಲ್ ಹೆಸರಲ್ಲಿ 6 ಬಾರಿ ವಿಕೆಟ್ ಹಾಗೂ 1 ಬಾರಿ 5 ವಿಕೆಟ್ ಫೇಮ್ ಕೂಡ ಇದೆ. 


ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಚಾಹಲ್
ಐಪಿಎಲ್ 2024 ರಲ್ಲಿಯೂ ಕೂಡ ಚಹಾಲ್ ಇದುವರೆಗೆ ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ. ಚಾಹಲ್ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಉಳಿದಿದ್ದಾರೆ. ಜಸ್ಪ್ರೀತ್ ಬುಮ್ರಾ ನಂತರ, ಚಾಹಲ್ ಈ ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ಗಳನ್ನು ಪಡೆಯುವಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಬುಮ್ರಾ ಹಾಗೂ ಚಾಹಲ್ 5 ಪಂದ್ಯಗಳನ್ನಾಡಿದ್ದು ತಲಾ 10 ವಿಕೆಟ್ ಪಡೆದಿದ್ದಾರೆ. ಈ ಅವಧಿಯಲ್ಲಿ, ಬುಮ್ರಾ ಅವರ ಏಕಾನಾಮಿ ರೇಟ್ವು 5.95 ಆಗಿದ್ದರೆ, ಚಹಾಲ್ ಅವರ ಏಕಾನಾಮಿ ರೇಟ್ವು 7.33 ಆಗಿದೆ. ಚಹಾಲ್ ಅವರ ಇದುವರೆಗಿನ ಅತ್ಯುತ್ತಮ ಪ್ರದರ್ಶನವೆಂದರೆ ಅದು 11 ರನ್ ಗಳಿಗೆ 3 ವಿಕೆಟ್ ಪಡೆದಿದ್ದಾಗಿದೆ.


ಇದನ್ನೂ ಓದಿ-IPL 2024: RCB ಯ ದಿಗ್ಗಜ ಆಟಗಾರರ ಪರೀಕ್ಷೆ ತೆಗೆದುಕೊಂಡ Virat, King Kohli ಕುರಿತ ಈ ಸಂಗತಿಗಳು ನಿಮಗೂ ಗೊತ್ತಿರಲಿ!


ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್
ಚಹಾಲ್ ನಂತರ, ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಡ್ವೇನ್ ಬ್ರಾವೋ, ಅವರು ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ ಹಲವು ಸೀಸನ್‌ಗಳನ್ನು ಆಡಿದ್ದಾರೆ. ಬ್ರಾವೋ 2022ರ ಐಪಿಎಲ್‌ವರೆಗೆ 161 ಪಂದ್ಯಗಳನ್ನು ಆಡಿದ್ದು, 183 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ನಂತರದ ಸ್ಥಾನದಲಿ ಭಾರತದ ಸ್ಪಿನ್ನರ್ ಪಿಯೂಷ್ ಚಾವ್ಲಾ ಇದ್ದಾರೆ. ಚಾವ್ಲಾ 185 ಪಂದ್ಯಗಳಲ್ಲಿ 181 ವಿಕೆಟ್ ಪಡೆದಿದ್ದಾರೆ. ನಾಲ್ಕನೇ ಹೆಸರು ಅಮಿತ್ ಮಿಶ್ರಾ. ಅಮಿತ್ ಮಿಶ್ರಾ 161 ಪಂದ್ಯಗಳಲ್ಲಿ 173 ವಿಕೆಟ್ ಪಡೆದಿದ್ದಾರೆ. ಇದೇ ವೇಳೆ ಭುವನೇಶ್ವರ್ ಕುಮಾರ್ ಐದನೇ ಸ್ಥಾನದಲ್ಲಿದ್ದು. ಭುವನೇಶ್ವರ್ ಕುಮಾರ್ 165 ಪಂದ್ಯಗಳಲ್ಲಿ 173 ವಿಕೆಟ್ ಪಡೆದಿದ್ದಾರೆ.


ಇದನ್ನೂ ಓದಿ-'IPL 2025 ರಲ್ಲಿ ಯಲ್ಲೊ ಜರ್ಸಿ ಧರಿಸಲಿದ್ದಾರೆ ರೋಹಿತ್ ಶರ್ಮಾ!' ಇಂಗ್ಲೀಷ್ ಆಟಗಾರನ ಸಂಚಲನ ಮೂಡಿಸುವ ಹೇಳಿಕೆ


ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರಿವರು
ಯುಜ್ವೇಂದ್ರ ಚಹಾಲ್ - 197 ವಿಕೆಟ್
ಡ್ವೇನ್ ಬ್ರಾವೋ - 183 ವಿಕೆಟ್
ಪಿಯೂಷ್ ಚಾವ್ಲಾ - 181 ವಿಕೆಟ್
ಅಮಿತ್ ಮಿಶ್ರಾ - 173 ವಿಕೆಟ್
ಭುವನೇಶ್ವರ್ ಕುಮಾರ್ - 173 ವಿಕೆಟ್


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ