ನವದೆಹಲಿ: ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ರೀಡಾ ಪಂದ್ಯಾವಳಿಗಳಲ್ಲಿ ಒಂದಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಅಪಾರ ಅಭಿಮಾನಿಗಳನ್ನು ಹೊಂದಿದೆ.ಈಗ ಇದನ್ನು ವಿಶ್ವದ ಪ್ರತಿಯೊಬ್ಬ ಕ್ರಿಕೆಟಿಗರು ಪಂದ್ಯಾವಳಿಯಲ್ಲಿ ನೋಡಲು ಇಚ್ಚಿಸುತ್ತಾರೆ.ಈ ಹಿನ್ನೆಲೆಯಲ್ಲಿ ಈಗ ಅದು ಜಾಗತಿಕವಾಗಿ ಶ್ರೀಮಂತ್ ಲೀಗ್ ಆಗಿ ಬೆಳೆದಿದೆ.


COMMERCIAL BREAK
SCROLL TO CONTINUE READING

ಈಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅವರು ತಾವು ಪ್ರೀತಿಸುವ ಕ್ರೀಡೆಯು ತುಂಬಾ ವಿಕಸನಗೊಳ್ಳುವುದನ್ನು ನೋಡಲು ನಿಜವಾಗಿಯೂ ಸಂತೋಷವಾಗಿದೆ ಎಂದು ಹೇಳಿದ್ದಾರೆ, ಅಷ್ಟೇ ಅಲ್ಲದೆ ಐಪಿಎಲ್ ಇಂಗ್ಲಿಷ್ ಪ್ರೀಮಿಯರ್ ಲೀಗ್ (ಇಪಿಎಲ್) ಗಿಂತ ಹೆಚ್ಚಿನ ಆದಾಯವನ್ನು ಗಳಿಸುತ್ತದೆ ಎಂದು ಹೇಳಿದ್ದಾರೆ.


'ನನ್ನಂತಹ ಆಟಗಾರರು ಕೆಲವು ಶತಕಗಳನ್ನು ಗಳಿಸಿದ ಮತ್ತು ಈಗ ಕೋಟಿಗಳನ್ನು ಗಳಿಸುವ ಸಾಮರ್ಥ್ಯವನ್ನು ಹೊಂದಿರುವ ಆಟವು ವಿಕಸನಗೊಳ್ಳುವುದನ್ನು ನಾನು ನೋಡಿದ್ದೇನೆ.ಈಗ ದೇಶಿಯ ಐಪಿಎಲ್ ಟೂರ್ನಿಯು ಇಂಗ್ಲಿಷ್ ಪ್ರೀಮಿಯರ್ ಲೀಗ್‌ಗಿಂತ ಹೆಚ್ಚಿನ ಆದಾಯವನ್ನು ಗಳಿಸುತ್ತಿರುವುದು ನಿಜಕ್ಕೂ ನನಗೆ ಸಂತಸವನ್ನುಂಟು ಮಾಡಿದೆ" ಎಂದು ಗಂಗೂಲಿ ಹೇಳಿದ್ದಾರೆ.


ಇದನ್ನು ಓದಿ: Horoscope Today: ಈ ರಾಶಿಯವರಿಗೆ ಧನಲಾಭದ ಜೊತೆಗೆ ಯಶಸ್ಸು ಸಿಗಲಿದೆ


ಈ ಸಂದರ್ಭದಲ್ಲಿ, ಗಂಗೂಲಿ ಅವರಿಗೆ ತಮ್ಮ ನಾಯಕತ್ವದ ಶೈಲಿಯ ಬಗ್ಗೆಯೂ ಕೇಳಲಾಯಿತು. ಇದೇ ವೇಳೆ ಮಾತನಾಡಿದ ಅವರು, 'ನಾಯಕತ್ವವು ನನಗೆ ಮೈದಾನದಲ್ಲಿ ತಂಡವನ್ನು ಮುನ್ನಡೆಸುವಂತದದ್ದು, ಹಾಗಾಗಿ ಅದು ಸಚಿನ್ ಆಗಿರಲಿ ಅಜರ್ ಅಥವಾ ದ್ರಾವಿಡ್ ಅವರಾಗಿರಲಿ ಅವರೊಂದಿಗೆ ಸ್ಪರ್ಧಿಸುವುದರ ಬದಲಾಗಿ, ನಾಯಕನಾಗಿ ಸಹಕರಿಸುವ ಮೂಲಕ ಜವಾಬ್ದಾರಿಯನ್ನು ಹಂಚಿಕೊಂಡಿದ್ದೇನೆ' ಎಂದು ಅವರು ಹೇಳಿದರು.


ಇದೆ ವೇಳೆ ನಾಯಕನಾಗುವುದು ಮತ್ತು ಬಿಸಿಸಿಐ ನೇತೃತ್ವ ವಹಿಸುವುದರ ನಡುವೆ ಇರುವ ವ್ಯತ್ಯಾಸದ ಬಗ್ಗೆ ಕೇಳಿದಾಗ, ಇದಕ್ಕೆ ಉತ್ತರಿಸಿದ ಸೌರವ್ ಗಂಗೂಲಿ 'ಸಾಮಾನ್ಯ ವಿಷಯವೆಂದರೆ ವ್ಯಕ್ತಿಗಳನ್ನು ನಿರ್ವಹಿಸುವುದು ಎಂದು ನಾನು ನಂಬುತ್ತೇನೆ. ಈ ದೇಶವು ಯುವ ಆಟಗಾರರಿಂದ ಹಿಡಿದು ಯುವ ಕಾರ್ಪೊರೇಟ್ ಉದ್ಯೋಗಿಗಳವರೆಗೆ ಅಸಾಧಾರಣ ಪ್ರತಿಭೆಯನ್ನು ಹೊಂದಿದೆ.ನೀವು ಒಂದು ವೇಳೆ ಯಶಸ್ವಿ ತಂಡದ ನಾಯಕನಾಗಬೇಕಾದರೆ ನಮ್ಮ ಸಹ ಆಟಗಾರರು ಉತ್ತಮ ಆಟಗಾರರಾಗಲು ನೀವು ಅವರನ್ನು ಗೌರವಿಸಬೇಕು ' ಎಂದು ಅವರು ಹೇಳಿದರು.


ಇದನ್ನು ಓದಿ: Covid-19: : ಓಮಿಕ್ರಾನ್‌ನ ಉಪ-ರೂಪಾಂತರಗಳಾದ BA.4, BA.5 ಎಷ್ಟು ಅಪಾಯಕಾರಿ?


ಸೌರವ್ ಗಂಗೂಲಿ ಅವರು 113 ಟೆಸ್ಟ್ ಮತ್ತು 311 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.