“ನಾನು ಎಂಥಾ ಆಟಗಾರನೆಂದು ಯಾರಿಗೂ ಸ್ಪಷ್ಟನೆ ಕೊಡುವ ಅವಶ್ಯಕತೆಯಿಲ್ಲ”- ಟ್ರೋಲರ್ಸ್ ವಿರುದ್ಧ ವಿರಾಟ್ ವಾಗ್ದಾಳಿ
Virat Kohli Statement: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮಹತ್ವದ ಐಪಿಎಲ್ ಪಂದ್ಯಕ್ಕೂ ಮುನ್ನ ಟ್ರೋಲ್’ಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ತೀವ್ರವಾಗಿ ನಿಂದಿಸಿದ್ದಾರೆ. “ನನಗೆ ಯಾರಿಂದಲೂ ಒಪ್ಪಿಗೆ ಅಗತ್ಯವಿಲ್ಲ. ಅಥವಾ ಪಂದ್ಯಗಳನ್ನು ಹೇಗೆ ಗೆಲ್ಲಬೇಕು ಎಂದು ಯಾರನ್ನೂ ಕೇಳಬೇಕಿಲ್ಲ” ಎಂದು ಹೇಳಿದ್ದಾರೆ.
Virat Kohli Statement: ವಿರಾಟ್ ಕೊಹ್ಲಿ ಬ್ಯಾಟಿಂಗ್ ತಂತ್ರ ಅಥವಾ ಪ್ರತಿಭೆಯ ಬಗ್ಗೆ ಕೆಲ ಚರ್ಚೆಗಳು ನಡೆದಾಗಲೆಲ್ಲಾ, ಈ ದಿಗ್ಗಜ ತಮ್ಮ ಬ್ಯಾಟ್’ನಿಂದ ತಕ್ಕ ಉತ್ತರವನ್ನು ನೀಡಿರೋದನ್ನು ಅನೇಕ ಬಾರಿ ಕಂಡಿದ್ದೇವೆ. ಇತ್ತೀಚೆಗೆಯಷ್ಟೇ ತಮ್ಮ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಬಗ್ಗೆ ಟ್ರೋಲ್’ಗೆ ಗುರಿಯಾಗಿದ್ದ ವಿರಾಟ್ ಕೊಹ್ಲಿ ಎಲ್ಲರ ಬಾಯಿ ಮುಚ್ಚಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮಹತ್ವದ ಐಪಿಎಲ್ ಪಂದ್ಯಕ್ಕೂ ಮುನ್ನ ಟ್ರೋಲ್’ಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ತೀವ್ರವಾಗಿ ನಿಂದಿಸಿದ್ದಾರೆ. “ನನಗೆ ಯಾರಿಂದಲೂ ಒಪ್ಪಿಗೆ ಅಗತ್ಯವಿಲ್ಲ. ಅಥವಾ ಪಂದ್ಯಗಳನ್ನು ಹೇಗೆ ಗೆಲ್ಲಬೇಕು ಎಂದು ಯಾರನ್ನೂ ಕೇಳಬೇಕಿಲ್ಲ” ಎಂದು ಹೇಳಿದ್ದಾರೆ.
ಐಪಿಎಲ್ 2024ರ ಟಾಪ್ ರನ್ ಸ್ಕೋರರ್ ವಿರಾಟ್ ಕೊಹ್ಲಿ ಟ್ರೋಲರ್ಸ್ ವಿರುದ್ಧ ವಾಗ್ದಾಳಿ ನಡೆಸಿದರು. “ನಾನು ಪ್ರತಿಕ್ರಿಯಿಸುವ ಅಗತ್ಯವಿಲ್ಲ. ನಾನು ಈ ನೆಲದ ಮೇಲೆ ಏನು ಮಾಡಬಹುದೆಂದು ನನಗೆ ತಿಳಿದಿದೆ. ಅದಕ್ಕಾಗಿ ನಾನು ಎಂತಹ ಆಟಗಾರ, ನನ್ನ ಸಾಮರ್ಥ್ಯ ಏನು ಎಂದು ಯಾರೂ ಹೇಳುವ ಅಗತ್ಯವಿಲ್ಲ. ಪಂದ್ಯ ಗೆಲ್ಲುವುದು ಹೇಗೆ ಎಂದು ನಾನು ಯಾರನ್ನೂ ಕೇಳಿಲ್ಲ. ಸನ್ನಿವೇಶಗಳನ್ನು ಗಮನಿಸುವುದರ ಮೂಲಕ ಮತ್ತು ವಿಫಲಗೊಳ್ಳುವ ಮೂಲಕ ನಾನು ನನ್ನಿಂದ ಕಲಿತಿದ್ದೇನೆ” ಎಂದು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: “ಇದು ಕೊನೆಯ ಬಾರಿ…”- ಪಂದ್ಯ ಆರಂಭಕ್ಕೂ ಮುನ್ನ ಧೋನಿ ನಿವೃತ್ತಿ ಬಗ್ಗೆ ವಿರಾಟ್ ಕೊಹ್ಲಿ ಹೇಳಿಕೆ
ಧೋನಿ ಬಗ್ಗೆ ಹೇಳಿಕೆ
ಧೋನಿ ಬಗ್ಗೆ ಹೇಳಿಕೆ ನೀಡಿದ ಅವರು, “ನಾನು ಯಾವಾಗಲೂ ಹೇಳುತ್ತೇನೆ… ಒಬ್ಬನ ಮಾತುಗಳನ್ನು ಕೇಳಿಸುವುದು, ಆ ಕ್ಷಣದಲ್ಲಿ ಬದುಕುವುದು ತುಂಬಾ ವಿಭಿನ್ನ. ಅಂದಹಾಗೆ, 20 ಓವರ್’ಗಳವರೆಗೆ ಪಂದ್ಯವನ್ನು ಏಕೆ ತೆಗೆದುಕೊಳ್ಳುತ್ತಿದ್ದಾರೆ ಅಥವಾ 50 ಓವರ್‌ಗಳವರೆಗೆ ಏಕೆ ಪಂದ್ಯವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಮಹಿ ಭಾಯ್ ಬಗ್ಗೆ ಅನೇಕರು ಹೇಳುತ್ತಿದ್ದರು. ಆದರೆ ಆ ವ್ಯಕ್ತಿ ಎಷ್ಟು ಪಂದ್ಯಗಳನ್ನು ಫಿನಿಶಿಂಗ್ ಮಾಡಿದ್ದಾರೆ? ಅಂದಹಾಗೆ ನಾನು ಏನು ಮಾಡುತ್ತಿದ್ದೇನೆ ಎಂದು ತಿಳಿದಿರುವ ಏಕೈಕ ವ್ಯಕ್ತಿ ಅವರು. ಏನು ಮಾಡಿದರೆ ಗೆಲ್ಲುತ್ತದೆ ಎಂದು ಯಾರಿಗೂ ಗೊತ್ತಿರಲ್ಲ, ಆದರೆ ಮಹಿಗೆ ಗೊತ್ತು, ಅದಕ್ಕೆ ಅವರು ಗೆಲ್ಲುತ್ತಾರೆ. ಕೊನೆಯ ಓವರ್’ವರೆಗೆ ಪಂದ್ಯವನ್ನು ತೆಗೆದುಕೊಂಡರೆ ನಾನೇ ಗೆಲ್ಲುತ್ತೇನೆ ಎಂಬುದು ಅವರಿಗೆ ಗೊತ್ತು” ಎಂದು ಕೊಹ್ಲಿ ಧೋನಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ