MI vs SRH: ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಸೀಸನ್’ನ 25ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಸನ್‌ ರೈಸರ್ಸ್ ಹೈದರಾಬಾದ್ ತಂಡದ ನಡುವೆ ನಡೆದಿದ್ದು, ಈ ಹಣಾಹಣಿಯಲ್ಲಿ ಗೆಲುವು ಕಂಡಿದೆ. ಆತಿಥೇಯ ಸನ್‌ ರೈಸರ್ಸ್ ಹೈದರಾಬಾದ್ ತಂಡವನ್ನು ಮುಂಬೈ ತಂಡ 14 ರನ್‌’ಗಳಿಂದ ಸೋಲಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Photos: ಬೆಸ್ಟ್ ಫ್ರೆಂಡ್ ಜೊತೆ ಸಲಿಂಗ ಮದುವೆಯಾದ 4 ವಿಶ್ವಕಪ್ ಗೆದ್ದ ಸ್ಟಾರ್ ಕ್ರಿಕೆಟ್ ಆಟಗಾರ್ತಿ!


ಕ್ಯಾಮರೂನ್ ಗ್ರೀನ್ ಸಮಯೋಚಿತ ಅರ್ಧಶತಕದ ನೆರವಿನ ಜೊತೆ ಮುಂಬೈ ಇಂಡಿಯನ್ಸ್‌ 5 ವಿಕೆಟ್ ನಷ್ಟಕ್ಕೆ 192 ರನ್ ಕಲೆ ಹಾಕಿತು. ಆ ಬಳಿಕ ಬಂದ ಆತಿಥೇಯ ತಂಡ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುತ್ತಲೇ ಇತ್ತು. ಬಳಿಕ 19.5 ಓವರ್‌ಆಗುವಷ್ಟರಲ್ಲಿ 178 ರನ್ ಕಲೆ ಹಾಕಿ ಆಲೌಟ್ ಆಯಿತು. ಇದಕ್ಕೂ ಮೊದಲು ಗ್ರೀನ್ 40 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸ್ ಮೂಲಕ ಅಜೇಯ 64 ರನ್ ಗಳಿಸಿದರು. ಇಶಾನ್ ಕಿಶನ್ (38) ಮತ್ತು ತಿಲಕ್ ವರ್ಮಾ (37) ಕೂಡ ಅಮೂಲ್ಯ ಕೊಡುಗೆ ನೀಡಿದರು.


ಇದನ್ನೂ ಓದಿ: Akhand Samrajya Yoga: ಅಖಂಡ ಸಾಮ್ರಾಜ್ಯ ಯೋಗದಿಂದ 1 ವರ್ಷ ಬದಲಾಗೋದಿಲ್ಲ ಈ ರಾಶಿಯವರ ಅದೃಷ್ಟ! ಹೋದಲ್ಲೆಲ್ಲಾ ಧನಪ್ರಾಪ್ತಿ ಖಚಿತ!


ಅಂತಿಮ ಓವರ್‌ನಲ್ಲಿ ಅರ್ಜುನ್ ತೆಂಡೂಲ್ಕರ್‌ ಆಟ:


ಎಸ್ ಆರ್ ಹೆಚ್  ಗೆಲುವಿಗೆ 20 ರನ್‌’ಗಳ ಅಗತ್ಯವಿತ್ತು. ಆಗ ಮುಂಬೈ ಪರ ಬೌಲಿಂಗ್’ಗೆ ಬಂದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್‌ ಡೆತ್ ಓವರ್’ನಲ್ಲಿ 4 ರನ್ ಬಿಟ್ಟುಕೊಟ್ಟು ಒಂದು ವಿಕೆಟ್ ಪಡೆದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.