KKR vs RCB: IPL 2023ರ 9ನೇ ಪಂದ್ಯ ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯುತ್ತಿದೆ. ಹಲವು ವರ್ಷಗಳ ನಂತರ ಈಡನ್ ಗಾರ್ಡನ್ಸ್’ನಲ್ಲಿ ಐಪಿಎಲ್ ಪಂದ್ಯ ನಡೆಯುತ್ತಿದೆ. ಆದರೆ ಪಂದ್ಯ ಆರಂಭಕ್ಕೂ ಮುನ್ನ ಮೈದಾನದಲ್ಲಿ ರೆಫ್ರಿ ಅವಾಂತರವನ್ನೊಂದು ಮಾಡಿದ್ದಾರೆ. ಟಾಸ್ ವೇಳೆ ಈ ಅವ್ಯವಸ್ಥೆ ನಡೆದಿದೆ. ಇದರಿಂದಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ನಿತೀಶ್ ರಾಣಾ ತೀವ್ರ ಕೋಪಗೊಂಡಿದ್ದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IPL ಮಧ್ಯೆಯೇ ಟೀಂ ಇಂಡಿಯಾದ ಈ ಸ್ಫೋಟಕ ಆರಂಭಿಕ ಆಟಗಾರ ಮೇಲೆ ಕೇಸು ದಾಖಲು!


ಟಾಸ್‌’ಗಾಗಿ ಉಭಯ ತಂಡಗಳ ನಾಯಕರು ಮೈದಾನಕ್ಕೆ ಬಂದಿದ್ದರು. ಆ ವೇಳೆ ನಿತೀಶ್ ರಾಣಾ ನಾಣ್ಯವನ್ನು ಎಸೆದರು. ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಟಾಸ್ ಗೆದ್ದರು. ಆದರೆ ರೆಫರಿ, ನಿತೀಶ್ ಅಂದರೆ ಕೋಲ್ಕತ್ತಾ ಟಾಸ್ ಗೆದ್ದಿತು ಎಂದು ಹೇಳಿದರು. ಆಗ ಫಾಫ್ ಡು ಪ್ಲೆಸಿಸ್, “ನಾನು ಹೆಡ್ ಕಾಲ್ ಮಾಡಿದ್ದೇನೆ” ಎಂದು ಹೇಳಿದರು. ಆದರೆ, ಕೋಲ್ಕತ್ತಾ ನಾಯಕ ನಿತೀಶ್ ರಾಣಾಗೆ ಈ ಗೊಂದಲ ಇಷ್ಟವಿರಲಿಲ್ಲ. ಅವರ ಮುಖದಲ್ಲಿ ಅಸಮಾಧಾನ ಎದ್ದು ಕಾಣುತ್ತಿತ್ತು. ಈ ಮಧ್ಯೆ ಫಾಫ್ ಡು ಪ್ಲೆಸಿಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು.


RR vs PBKS, IPL 2023: ಮೂರು ಐಪಿಎಲ್ ದಾಖಲೆಗಳು ಉಡೀಸ್


ಸದ್ಯ ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೀಲ್ಡಿಂಗ್ ಆಯ್ದುಕೊಂಡಿದೆ. ಬ್ಯಾಟಿಂಗ್ ಮಾಡುತ್ತಿರುವ ಕೊಲ್ಕತ್ತಾ 14.5 ಓವರ್’ನಲ್ಲಿ 5 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿದೆ. ಕೊಲ್ಕತ್ತಾ ಪರ ಆರ್ ಗುರ್ಬಜ್ 57 ರನ್ ಬಾರಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.