IPL 2023: ಮೈದಾನದಲ್ಲಿಯೇ ಭುವಿ ಕಾಲಿಗೆ ಬಿದ್ದ ಡೇವಿಡ್ ವಾರ್ನರ್! ಯಾಕೆ ಗೊತ್ತಾ? ಈ ವಿಡಿಯೋ ನೋಡಿ
IPL 2023: ಸೋಮವಾರ ಹೈದರಾಬಾದ್’ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ತನ್ನ ಹಳೆಯ ಐಪಿಎಲ್ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ಹಠಾತ್ ತಮ್ಮ ಹಳೆಯ ಸಹ ಆಟಗಾರ ಭುವನೇಶ್ವರ್ ಕುಮಾರ್ ಅವರ ಪಾದಗಳನ್ನು ಮುಟ್ಟಿದ್ದಾರೆ.
IPL 2023: ಹೈದರಾಬಾದ್’ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸನ್’ರೈಸರ್ಸ್ ಹೈದರಾಬಾದ್ ತಂಡವನ್ನು 7 ರನ್’ಗಳಿಂದ ಸೋಲಿಸಿದೆ. ಈ ಪಂದ್ಯ ಆರಂಭಕ್ಕೂ ಮುನ್ನ ಮೈದಾನದಲ್ಲಿ ಘಟನೆಯೊಂದು ನಡೆದಿದ್ದು ಅಭಿಮಾನಿಗಳ ಮನಗೆದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಎಲ್ಲರೂ ಭಾವುಕರಾಗಿದ್ದಾರೆ. ತನ್ನ ಹಳೆಯ ಐಪಿಎಲ್ ತಂಡ ಸನ್’ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ, ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ಈ ರೀತಿ ವರ್ತಿಸಿದ್ದು, ವಿಡಿಯೋ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ: IPL 2023: ಸೋತರೂ ಇತಿಹಾಸ ಸೃಷ್ಟಿಸಿದ ಕೆಎಲ್ ರಾಹುಲ್! ದಿಗ್ಗಜರ ಮಣಿಸಿ ಈ ವಿಷಯದಲ್ಲಿ ನಂಬರ್-1 ಸ್ಥಾನಕ್ಕೇರಿದ ಕನ್ನಡಿಗ
ಸೋಮವಾರ ಹೈದರಾಬಾದ್’ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ತನ್ನ ಹಳೆಯ ಐಪಿಎಲ್ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ಹಠಾತ್ ತಮ್ಮ ಹಳೆಯ ಸಹ ಆಟಗಾರ ಭುವನೇಶ್ವರ್ ಕುಮಾರ್ ಅವರ ಪಾದಗಳನ್ನು ಮುಟ್ಟಿದ್ದಾರೆ. ಡೇವಿಡ್ ವಾರ್ನರ್ ಸನ್’ರೈಸರ್ಸ್ ಹೈದರಾಬಾದ್’ನ ಮಾಜಿ ನಾಯಕ ಮತ್ತು ಅವರು ತಮ್ಮ ನಾಯಕತ್ವದಲ್ಲಿ ಈ ತಂಡಕ್ಕೆ 2016 ಪ್ರಶಸ್ತಿಯನ್ನು ಗೆದ್ದುಕೊಟ್ಟಿದ್ದರು. ಸನ್ ರೈಸರ್ಸ್ ಹೈದರಾಬಾದ್ ಪರ ಡೇವಿಡ್ ವಾರ್ನರ್ ಮತ್ತು ಭುವನೇಶ್ವರ್ ಕುಮಾರ್ ಜೊತೆಯಾಗಿ ಐಪಿಎಲ್ ಆಡಿದ್ದಾರೆ.
W,W,W,W..9 ವರ್ಷದಿಂದ ಟೀಂ ಇಂಡಿಯಾದಿಂದ ಔಟ್! ಆದ್ರೆ ಇಂದು ಗುಜರಾತ್ ಗೆಲುವಿಗೆ ಕಾರಣವಾಗಿದ್ದು ಅದೇ ಆಟಗಾರ
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಸನ್ ರೈಸರ್ಸ್ 9 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತ್ತು. ಡೆಲ್ಲಿ ಪರ ಅಕ್ಷರ್ ನಾಲ್ಕು ಓವರ್’ಗಳಲ್ಲಿ 21 ರನ್ ನೀಡಿ 2 ವಿಕೆಟ್ ಹಾಗೂ ಕುಲದೀಪ್ ಒಂದೇ ಓವರ್’ನಲ್ಲಿ 22 ರನ್ ನೀಡಿ ಒಂದು ವಿಕೆಟ್ ಕಬಳಿಸಿ ಹೈದರಾಬಾದ್ ತಂಡದ ಸಂಕಷ್ಟವನ್ನು ಹೆಚ್ಚಿಸಿದರು. ಸ್ಪಿನ್ನರ್’ಗಳ ಹೊರತಾಗಿ, ಕೊನೆಯ ಓವರ್’ನಲ್ಲಿ 13 ರನ್’ಗಳನ್ನು ರಕ್ಷಿಸಿದ ವೇಗದ ಬೌಲರ್ ಮುಖೇಶ್ ಕುಮಾರ್ ಮತ್ತು ಅನುಭವಿ ಇಶಾಂತ್ ಶರ್ಮಾ ಅವರನ್ನು ವಾರ್ನರ್ ಶ್ಲಾಘಿಸಿದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.