IPL: ಒಂದು ವಿಕೆಟ್ ಕಬಳಿಸಲು 2 ವರ್ಷ ತೆಗೆದುಕೊಂಡ ಈ ಕ್ರಿಕೆಟಿಗ! ಈತನಿಗಾಗಿ 14 ಕೋಟಿ ಖರ್ಚು ಮಾಡಿತ್ತು ಫ್ರಾಂಚೈಸಿ
CSK vs MI IPL 2023: ಚೆನ್ನೈ ಸೂಪರ್ ಕಿಂಗ್ಸ್ ವೇಗದ ಬೌಲರ್ ದೀಪಕ್ ಚಹಾರ್ ಐಪಿಎಲ್ ನಲ್ಲಿ ಅಂತಿಮವಾಗಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್ 2023 ರ 49 ನೇ ಪಂದ್ಯದಲ್ಲಿ ದೀಪಕ್ ಚಹಾರ್ ಅದ್ಭುತ ಬೌಲಿಂಗ್ ಮಾಡಿದರು. ಈ ಪಂದ್ಯದಲ್ಲಿ 3 ಓವರ್ ಬೌಲ್ ಮಾಡಿದ ಅವರು 18 ರನ್ ನೀಡಿ 2 ವಿಕೆಟ್ ಪಡೆದರು. ಇದಕ್ಕೂ ಮೊದಲು, ಐಪಿಎಲ್ 2021 ರ ಫೈನಲ್ ನಲ್ಲಿ ದೀಪಕ್ ಚಹಾರ್ ಒಂದು ವಿಕೆಟ್ ಪಡೆದಿದ್ದರು.
CSK vs MI IPL 2023: IPL 2023 (IPL 2023) ರ 49 ನೇ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ (CSK vs MI) ನಡುವೆ ನಡೆಯಿತು. ಈ ಪಂದ್ಯದಲ್ಲಿ, ಬೌಲರ್ ಒಬ್ಬ ಕಡೆಗೂ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ. 2 ವರ್ಷಗಳ ಕಾಲ ಐಪಿಎಲ್‌ನಲ್ಲಿ ಒಂದೇ ಒಂದು ಯಶಸ್ಸನ್ನೂ ಪಡೆದಿರಲಿಲ್ಲ ಈ ಆಟಗಾರ. ಐಪಿಎಲ್ 2023 ರ ಆರಂಭಿಕ ಪಂದ್ಯಗಳಲ್ಲಿ ಈ ಆಟಗಾರ ಸಂಪೂರ್ಣ ವಿಫಲರಾಗಿದ್ದರು. ಇದಾದ ಬಳಿಕ ಗಾಯದ ಸಮಸ್ಯೆಯಿಂದ ಈ ಆಟಗಾರನನ್ನು ತಂಡದಿಂದ ಹೊರಗಿಡಲಾಗಿತ್ತು. ಈ ಆಟಗಾರನನ್ನು ಹರಾಜಿನಲ್ಲಿ 14 ಕೋಟಿ ರೂ.ಗೆ ಖರೀದಿಸಲಾಗಿದೆ.
ಇದನ್ನೂ ಓದಿ: Today Gold Price: ಜೀವಮಾನದಲ್ಲಿ ಇಷ್ಟೊಂದು ಕಡಿಮೆಯಾಗಿರಲಿಲ್ಲ ಚಿನ್ನದ ಬೆಲೆ! 10 ಗ್ರಾಂ ಬಂಗಾರದ ಬೆಲೆ ಎಷ್ಟಿದೆ ಗೊತ್ತಾ?
ಚೆನ್ನೈ ಸೂಪರ್ ಕಿಂಗ್ಸ್ ವೇಗದ ಬೌಲರ್ ದೀಪಕ್ ಚಹಾರ್ ಐಪಿಎಲ್ ನಲ್ಲಿ ಅಂತಿಮವಾಗಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್ 2023 ರ 49 ನೇ ಪಂದ್ಯದಲ್ಲಿ ದೀಪಕ್ ಚಹಾರ್ ಅದ್ಭುತ ಬೌಲಿಂಗ್ ಮಾಡಿದರು. ಈ ಪಂದ್ಯದಲ್ಲಿ 3 ಓವರ್ ಬೌಲ್ ಮಾಡಿದ ಅವರು 18 ರನ್ ನೀಡಿ 2 ವಿಕೆಟ್ ಪಡೆದರು. ಇದಕ್ಕೂ ಮೊದಲು, ಐಪಿಎಲ್ 2021 ರ ಫೈನಲ್ ನಲ್ಲಿ ದೀಪಕ್ ಚಹಾರ್ ಒಂದು ವಿಕೆಟ್ ಪಡೆದಿದ್ದರು.
IPL 2023 ಇದುವರೆಗಿನ ಪ್ರದರ್ಶನ
ದೀಪಕ್ ಚಹಾರ್ ಇಂಡಿಯನ್ ಪ್ರೀಮಿಯರ್ ಲೀಗ್ 2023 (ಐಪಿಎಲ್ 2023) ನಲ್ಲಿ ಇದುವರೆಗೆ ಒಟ್ಟು 5 ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳಲ್ಲಿ ದೀಪಕ್ ಚಾಹರ್ 9.56 ಎಕಾನಮಿಯೊಂದಿಗೆ ರನ್ ವ್ಯಯಿಸಿ 2 ವಿಕೆಟ್ ಪಡೆದಿದ್ದಾರೆ. ಇನ್ನೊಂದೆಡೆ ಚಹಾರ್ ಐಪಿಎಲ್ ನಲ್ಲಿ ಒಟ್ಟು 68 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 61 ವಿಕೆಟ್ ಒಟ್ಟಾರೆ ವಿಕೆಟ್ ಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ: IPL 2023: ರಾಜಸ್ಥಾನಕ್ಕೆ ಬ್ಯಾಕ್ ಟು ಬ್ಯಾಕ್ ಸೋಲು: ಸೋಲಿಗೆ ನಿಖರ ಕಾರಣ ಹೇಳಿದ್ರು ನಾಯಕ ಸಂಜು ಸಾಮ್ಸನ್!
2022 ರ ಐಪಿಎಲ್ ಹರಾಜಿನಲ್ಲಿ ದೀಪಕ್ ಚಹಾರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 14 ಕೋಟಿ ರೂ ಖರ್ಚು ಮಾಡಿ ಖರೀದಿಸಿತು. ಆದರೆ ಫೆಬ್ರವರಿ 2022 ರಲ್ಲಿ, ಅವರು ಬೆನ್ನುನೋವಿಗೆ ಒಳಗಾಗಿದ್ದರು, ಇದರಿಂದಾಗಿ ಅವರು 6 ತಿಂಗಳ ಕಾಲ ಕ್ರಿಕೆಟ್ ನಿಂದ ದೂರವಿದ್ದರು ಮತ್ತು ಐಪಿಎಲ್ 2022 ರ ಭಾಗವಾಗಲಿಲ್ಲ. ಬಳಿಕ ಐಪಿಎಲ್ 2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಉಳಿಸಿಕೊಂಡಿದೆ. ಆದರೆ ಗಾಯದಿಂದಾಗಿ ಮತ್ತೆ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.