IPL 2023: ಈ ಯುವ ಆಟಗಾರನಿಗೆ ಮೋಸ ಮಾಡಿದ್ರಾ ಎಂ ಎಸ್ ಧೋನಿ?
Indian Premier League, CSK Team: ಅನುಭವಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK), ಈ ಋತುವಿನಲ್ಲಿ ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಿದೆ. ಈ ಪೈಕಿ ಎರಡರಲ್ಲಿ ಗೆದ್ದರೆ ಎರಡರಲ್ಲಿ ಸೋತಿದೆ. ಈ ತಂಡದ ಆಟಗಾರನೊಬ್ಬ ತನ್ನ ಮೊದಲ ಪಂದ್ಯದಲ್ಲೇ 3 ವಿಕೆಟ್ ಪಡೆದಿದ್ದಾನೆ.
Indian Premier League, CSK Team: ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ವಿಶ್ವದ ಅತ್ಯಂತ ಪ್ರತಿಷ್ಠಿತ ಕ್ರಿಕೆಟ್ ಲೀಗ್ ಎಂದು ಪರಿಗಣಿಸಲಾಗಿದೆ. ಈ ಲೀಗ್ ಅನೇಕ ಆಟಗಾರರ ವೃತ್ತಿಜೀವನವನ್ನು ಉನ್ನತ ಮಟ್ಟಕ್ಕೆ ಕೊಂಡೊಂಯ್ದಿದೆ. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಬಹುಮಾನ ಪಡೆದ ಅನೇಕ ಆಟಗಾರರಿದ್ದಾರೆ. ಈ ಮಧ್ಯೆ ಸಿ ಎಸ್ ಕೆ ತಂಡದ ಓರ್ವ ಆಟಗಾರನನ್ನು ತಂಡದಿಂದ ಕೈ ಬಿಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಇದನ್ನೂ ಓದಿ: ವಿರಾಟ್-ರೋಹಿತ್ ಹಿಂದಿಕ್ಕಿ ಇತಿಹಾಸ ಬರೆದ MS Dhoni: ಯಾರಿಂದಲೂ ಟಚ್ ಮಾಡೋಕಾಗಲ್ಲ ಅನ್ಸುತ್ತೆ ಈ ದಾಖಲೆ!
ಅನುಭವಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK), ಈ ಋತುವಿನಲ್ಲಿ ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಿದೆ. ಈ ಪೈಕಿ ಎರಡರಲ್ಲಿ ಗೆದ್ದರೆ ಎರಡರಲ್ಲಿ ಸೋತಿದೆ. ಈ ತಂಡದ ಆಟಗಾರನೊಬ್ಬ ತನ್ನ ಮೊದಲ ಪಂದ್ಯದಲ್ಲೇ 3 ವಿಕೆಟ್ ಪಡೆದಿದ್ದಾನೆ. ಇಷ್ಟೆಲ್ಲಾ ಆದರೂ ಧೋನಿ ಅವರಿಗೆ ಎಲ್ಲಾ ಪಂದ್ಯಗಳಲ್ಲಿ ಅವಕಾಶ ನೀಡುತ್ತಿಲ್ಲ. ಈ ಬಲಗೈ ಮಧ್ಯಮ ವೇಗಿಯು ಋತುವಿನ ಆರಂಭಿಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ CSK ತಂಡದ ಪ್ಲೇಯಿಂಗ್-11 ರಲ್ಲಿ ಕಾಣಿಸಿಕೊಂಡಿದ್ದರು.
CSK ನಾಯಕ ಧೋನಿ, 20 ವರ್ಷದ ರಾಜವರ್ಧನ್ ಹ್ಯಾಂಗರ್‌ಗೆಕರ್ ಅವರನ್ನು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಪ್ಲೇಯಿಂಗ್-11 ರಲ್ಲಿ ಸೇರಿಸಿಕೊಂಡಿದ್ದರು. ರಾಜವರ್ಧನ್ ಭಾರತದ ಅಂಡರ್-19 ತಂಡದ ಭಾಗವಾಗಿದ್ದಾರೆ. ಬಲಗೈ ಮಧ್ಯಮ ವೇಗದ ಬೌಲರ್ ಆಗಿರುವ ಇವರು ಸಖತ್ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ.
ಇನ್ನು ಇದಾದ ನಂತರ, ಲಕ್ನೋ ಸೂಪರ್ ಜೈಂಟ್ಸ್ (ಎಲ್ ಎಸ್ ಜಿ) ವಿರುದ್ಧದ ಪಂದ್ಯದಲ್ಲಿ ರಾಜವರ್ಧನ್ ಅವರನ್ನು ಫೀಲ್ಡಿಂಗ್ ಇಳಿಸಲಾಯಿತು. ಆದರೆ ಅವರಿಗೆ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: CSK vs RR ಪಂದ್ಯದಲ್ಲಿ ಅಂಪೈರ್ ವಿರುದ್ಧ ಗಂಭೀರ ಆರೋಪ ಮಾಡಿದ ಅಶ್ವಿನ್! ಹುಟ್ಟಿಕೊಂಡ ಹೊಸ ವಿವಾದ ಏನು?
ರಾಜವರ್ಧನ್ ಅವರು ಬುಧವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸ್ಥಾನ ಪಡೆದಿರಲಿಲ್ಲ. ಬ್ಯಾಟಿಂಗ್ ಆಲ್‌ರೌಂಡರ್ ಆಗಿದ್ದು, ಅವಕಾಶ ಸಿಕ್ಕರೆ ಬ್ಯಾಟ್’ನಲ್ಲೂ ಅದ್ಭುತಗಳನ್ನು ತೋರಿಸಬಹುದು. ಇನ್ನೂ ಒಂದು ವಿಷಯವೆಂದರೆ ಚೆನ್ನೈ ತಂಡದಲ್ಲಿ ಸಾಕಷ್ಟು ಅನುಭವಿ ಆಟಗಾರರಿದ್ದು, ಇಂತಹ ಪರಿಸ್ಥಿತಿಯಲ್ಲಿ ರಾಜವರ್ಧನ್ ಆಗಮನದಿಂದ ತಂಡದಲ್ಲಿ ವೈವಿಧ್ಯತೆ ಮೂಡಿದೆ. ಅವರು ಇದುವರೆಗೆ 10 ಟಿ20 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 8 ವಿಕೆಟ್‌ಗಳನ್ನು ಪಡೆದಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.