Dwayne Bravo-Kieran Pollard Friendship: ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ ಡ್ವೇನ್ ಬ್ರಾವೋ ಮತ್ತು ಕೀರಾನ್ ಪೊಲಾರ್ಡ್ ದೈತ್ಯರು ಎಂದೇ ಹೇಳಲಾಗುತ್ತದೆ. ಈ ಜೋಡಿ ಕ್ರಿಕೆಟ್ ಕ್ರೀಸ್’ನಲ್ಲಿದ್ದರೆ ಕಿತ್ತಾಟ, ಗೇಲಿ, ತಮಾಷೆ ಇದ್ದಿದ್ದೇ. ಅದೇ ಪೆವಿಲಿಯನ್ ನಲ್ಲಿ ಅವರಿಬ್ಬರು ಜನುಮ ಜನುಮದ ಗೆಳೆಯರು ಎಂಬಂತೆ ವರ್ತಿಸುತ್ತಿರುತ್ತಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: FD Rate: ಜಸ್ಟ್ 2 ದಿನದಲ್ಲಿ… 112 ವರ್ಷ ಹಳೆಯ ಈ ಬ್ಯಾಂಕ್’ನಿಂದ ಹಿರಿಯ ನಾಗರಿಕರಿಗೆ ಸಿಗಲಿದೆ ಊಹೆಗೂ ನಿಲುಕದ ಬೊಂಬಾಟ್ ಗಿಫ್ಟ್!


ಡ್ವೇನ್ ಬ್ರಾವೋ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಐಪಿಎಲ್’ನಲ್ಲಿ ಆಟವಾಡಿದ್ದರೆ, ಕೀರಾನ್ ಪೊಲಾರ್ಡ್ ಪೊಲಾರ್ಡ್ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದರು. ಆದರೆ ಇವರಿಬ್ಬರು ರಾಷ್ಟ್ರೀಯ ತಂಡ ಮಾತ್ರ ಒಂದೇ. ಪೊಲಾರ್ಡ್ 13 ಸೀಸನ್’ಗಳಲ್ಲಿ ಮುಂಬೈನ್ನು ಪ್ರತಿನಿಧಿಸಿದ್ದರು. ಆದರೆ ನವೆಂಬರ್ 2022 ರಂದು ನಿವೃತ್ತಿಯಾಗುವ ನಿರ್ಧಾರವನ್ನು ಮಾಡಿದರು. ಸದ್ಯ ಐಪಿಎಲ್ 2023ರಲ್ಲಿ MI ಗೆ ಬ್ಯಾಟಿಂಗ್ ಕೋಚ್ ಆಗಿದ್ದಾರೆ.


ಡಿಜೆ ಬ್ರಾವೋ ತಮ್ಮ ಮೊದಲ ಮೂರು ವರ್ಷಗಳನ್ನು ಮುಂಬೈ ಇಂಡಿಯನ್ಸ್‌ನೊಂದಿಗೆ ಕಳೆದರು. ಬಳಿಕ 2011 ರಿಂದ ಅವರ ನಿವೃತ್ತಿಯವರೆಗೂ CSKಯ ಅವಿಭಾಜ್ಯ ಅಂಗವಾಗಿದ್ದರು. ಆದರೆ 2016 ರಲ್ಲಿ ಮಾತ್ರ ಅವರು ಗುಜರಾತ್ ಲಯನ್ಸ್‌ಗಾಗಿ ಆಡಿದ್ದರು.


ಬ್ರಾವೋ ಪ್ರಸ್ತುತ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ವಿಂಡೀಸ್ ಆಲ್‌’ರೌಂಡರ್ 161 ಐಪಿಎಲ್ ಪಂದ್ಯಗಳಲ್ಲಿ 23.83 ರ ಅದ್ಭುತ ಸರಾಸರಿಯಲ್ಲಿ ಮತ್ತು 17.04 ರ ಬೆರಗುಗೊಳಿಸುವ ಸ್ಟ್ರೈಕ್ ರೇಟ್‌ನಲ್ಲಿ 183 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಔಟ್‌ಫೀಲ್ಡ್‌’ನಲ್ಲಿ ಸುರಕ್ಷಿತ ಫೀಲ್ಡರ್ ಎಂದು ಸಾಬೀತುಪಡಿಸಿದ್ದು, ಐಪಿಎಲ್‌’ನಲ್ಲಿ 80 ಕ್ಯಾಚ್‌ಗಳನ್ನು ಹಿಡಿದಿದ್ದಾರೆ.


ಪೊಲಾರ್ಡ್, ಬ್ರಾವೋಗೆ ಹೋಲಿಸಿದರೆ, ಬ್ಯಾಟಿಂಗ್ ಆಲ್ ರೌಂಡರ್ ಆಗಿದ್ದರು. 171 IPL ಇನ್ನಿಂಗ್ಸ್‌ಗಳಲ್ಲಿ, ಪೊಲಾರ್ಡ್ 28.67 ರ ಸರಾಸರಿಯಲ್ಲಿ 3,412 ರನ್ ಗಳಿಸಿದರು. 147.32 ರ ಅದ್ಭುತ ಸ್ಟ್ರೈಕ್ ರೇಟ್‌ಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಫ್ರಾಂಚೈಸಿಗಾಗಿ ಏಕಾಂಗಿಯಾಗಿ ಅನೇಕ ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ.


ಇದನ್ನೂ ಓದಿ:   Good Signs: ಈ ಶುಭ ಸಂಕೇತಗಳು ಶನಿದೇವನ ಕೃಪೆಯಿದೆ ಎಂಬುದರ ಸೂಚಕ: ದಿಢೀರ್ ಧನಪ್ರಾಪ್ತಿಗೈಯುವನು ಛಾಯಾಪುತ್ರ!


ಈ ಇಬ್ಬರು ಆಟಗಾರರನ್ನು ಕ್ರಿಕೆಟ್ ಲೋಕದ ಕುಚುಕುಗಳೆಂದು ಪರಿಗಣಿಸಲಾಗಿದೆ, ಇವರ ಚೇಷ್ಟೆ, ಗಲಾಟೆಯ ವಿಡಿಯೋಗಳು ಇಂದಿಗೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.