Criminal Case against Indian Cricketer: ಇಂಡಿಯನ್ ಪ್ರೀಮಿಯರ್ ಲೀಗ್ (IPL-2023) ನ 16 ನೇ ಸೀಸನ್ ಸದ್ಯ ನಡೆಯುತ್ತಿದೆ. ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ (RR vs PBKS) ನಡುವಿನ ಪಂದ್ಯದ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್‌’ಗೆ ಸಂಬಂಧಿಸಿದ ದೊಡ್ಡ ಸುದ್ದಿಯೊಂದು ಮುನ್ನೆಲೆಗೆ ಬಂದಿತ್ತು. ಟೀಮ್ ಇಂಡಿಯಾದಿಂದ ಹೊರಗುಳಿದ ಸ್ಫೋಟಕ ಆರಂಭಿಕ ಆಟಗಾರನೊಬ್ಬ ಮಾಡೆಲ್‌’ಗೆ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯಬೇಕಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಐಪಿಎಲ್ ನಿಂದ ರಜತ್ ಪಟೆದಾರ್ ಔಟ್


ಟೀಂ ಇಂಡಿಯಾದಿಂದ ಹೊರಗುಳಿಯುತ್ತಿರುವ ಸ್ಫೋಟಕ ಆರಂಭಿಕ ಆಟಗಾರ ಪೃಥ್ವಿ ಶಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಮಾಧ್ಯಮದ ಪ್ರಭಾವಿ ಮತ್ತು ರೂಪದರ್ಶಿ ಸಪ್ನಾ ಗಿಲ್ ಈ 23 ವರ್ಷದ ಬ್ಯಾಟ್ಸ್‌ಮನ್ ವಿರುದ್ಧ ಕಿರುಕುಳದ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಫೆಬ್ರವರಿಯಲ್ಲಿ, ಸಪ್ನಾ ಗಿಲ್ ಮತ್ತು ಪೃಥ್ವಿ ಶಾ ಅವರ ಸ್ನೇಹಿತರ ನಡುವೆ ಗಲಾಟೆ ನಡೆದಿತ್ತು.


ಇತ್ತೀಚೆಗೆ ಮುಂಬೈನ ಕ್ಲಬ್‌’ನ ಹೊರಗೆ ಪೃಥ್ವಿ ಶಾ, ಅವರ ಸ್ನೇಹಿತ ಮತ್ತು ಸಪ್ನಾ ಗಿಲ್ ಅವರ ಸಹಚರರು ಪರಸ್ಪರ ಜಗಳ ನಡೆಸಿದ್ದರು. ಇದಾದ ನಂತರ ಸಪ್ನಾ ಗಿಲ್, ಪೃಥ್ವಿ ಶಾ ಮತ್ತು ಆತನ ಸ್ನೇಹಿತರು ತನಗೆ ಕಿರುಕುಳ ನೀಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದೀಗ ಪೃಥ್ವಿ ಶಾ ವಿರುದ್ಧ ಪ್ರಕರಣ ದಾಖಲಿಸುವಂತೆ ಸಪ್ನಾ ಗಿಲ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಏಪ್ರಿಲ್ 17 ರಂದು ನ್ಯಾಯಾಲಯದಲ್ಲಿ ಈ ಕುರಿತು ವಿಚಾರಣೆ ನಡೆಯಲಿದೆ.


ಪೃಥ್ವಿ ಶಾ ಅವರಲ್ಲದೆ, ಸಪ್ನಾ ಗಿಲ್ ಅವರ ಸ್ನೇಹಿತ ಆಶಿಶ್ ಸುರೇಂದ್ರ ಯಾದವ್ ವಿರುದ್ಧವೂ ದೂರು ದಾಖಲಿಸಿದ್ದಾರೆ. ಸಪ್ನಾ ಗಿಲ್’ಗೆ ಬ್ಯಾಟ್‌ನಿಂದ ಹೊಡೆದಿರುವುದು, ಕಿರುಕುಳ ನೀಡಿರುವುದು ಸೇರಿದಂತೆ ಹಲವು ಸೆಕ್ಷನ್‌’ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅವರು ಐಪಿಸಿ ಸೆಕ್ಷನ್ 354, 509, 324 ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರು ದಾಖಲಿಸಿಕೊಳ್ಳುವಾಗ ಸಪ್ನಾ ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ಪ್ರಮಾಣಪತ್ರವನ್ನೂ ಸಲ್ಲಿಸಿದ್ದು, ಅದರಲ್ಲಿ ಲೈಂಗಿಕ ದೌರ್ಜನ್ಯದ ಉಲ್ಲೇಖವಿದೆ. ಪೃಥ್ವಿ ಶಾ ಪ್ರಸ್ತುತ ಐಪಿಎಲ್‌’ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದಾರೆ. ಇದುವರೆಗೆ 2 ಪಂದ್ಯಗಳನ್ನಾಡಿದ್ದು, 19 ರನ್ ಗಳಿಸಿದ್ದಾರೆ.


ಇದನ್ನೂ ಓದಿ: RR vs PBKS, IPL 2023: ಮೂರು ಐಪಿಎಲ್ ದಾಖಲೆಗಳು ಉಡೀಸ್


ಕಳೆದ ಎರಡು ವರ್ಷಗಳಿಂದ ಪೃಥ್ವಿ ಶಾ ಭಾರತ ಕ್ರಿಕೆಟ್ ತಂಡದಿಂದ ಹೊರಗುಳಿಯುತ್ತಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 5 ಟೆಸ್ಟ್, 6 ODI ಮತ್ತು ಒಂದು T20 ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದಾರೆ. ಪೃಥ್ವಿ ಟೆಸ್ಟ್‌ನಲ್ಲಿ ಒಂದು ಶತಕ ಮತ್ತು 2 ಅರ್ಧಶತಕಗಳ ಸಹಾಯದಿಂದ ಒಟ್ಟು 339 ರನ್ ಗಳಿಸಿದ್ದಾರೆ. ಆದರೆ ODIಗಳಲ್ಲಿ ವಿಫಲರಾಗಿದ್ದಾರೆ. 31.5 ಸರಾಸರಿಯಲ್ಲಿ ಕೇವಲ 189 ರನ್ ಗಳಿಸಿದ್ದಾರೆ. ಜುಲೈ 2021 ರಲ್ಲಿ ಶ್ರೀಲಂಕಾ ವಿರುದ್ಧ ಆಡಿದ ಏಕೈಕ ಟಿ 20 ಪಂದ್ಯದಲ್ಲಿ ಅವರು ಕೇವಲ ಒಂದು ರನ್ ಗಳಿಸಲು ಸಾಧ್ಯವಾಯಿತು


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.