ಐಪಿಎಲ್ ಇತಿಹಾಸದಲ್ಲಿ ಮೊದಲ ಮಹಿಳಾ ಹರಾಜುಗಾರ್ತಿಯಾಗಿ ಮಲ್ಲಿಕಾ ಸಾಗರ್ !
IPL 2024 auction : 2024 ರ ಮಿನಿ ಐಪಿಎಲ್ ಪ್ರಕ್ರಿಯೆ ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿದೆ. ಈ ಭಾರಿಯ ಹಾರಜಿನಲ್ಲಿ ಮಹಿಳಾ ಹರಾಜುಗಾರ್ತಿ ಭಾಗಿಯಾಗಲಿದ್ದು, ಇದು ಐಪಿಎಲ್ ಇತಿಹಾಸದಲ್ಲೇ ಮೊಟ್ಟ ಮೊದಲ ಭಾರಿಯಾಗಿದೆ.ಅಷ್ಟೇ ಅಲ್ಲದೇ ಮೊದಲ ಭಾರಿಗೆ ವಿದೇಶದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.
Mallika Sagar : 2024ರ ಐಪಿಲ್ ಮಿನಿ ಹರಾಜಿಗು ಮುನ್ನ ಎಲ್ಲಾ ತಂಡಗಳು ತಮ್ಮ ತಂಡದಲ್ಲಿಉಳಿಸಿಕೊಂಡ ಹಾಗು ಹೊರ ಹೋದ ಆಟಗಾರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.ಅದರಲ್ಲಿ ಅನೇಕ ಪ್ರಮುಖ ಆಟಗಾರು ತಂಡಗಳಿಂದ ಹೊರ ಬಿದ್ದಿದ್ದರು, ಆದರೆ ನಾಳೆ ನಡೆಯುವ ಕಿರುಹಾರಾಜಿನಲ್ಲಿ ಅವರೆಲ್ಲ ಯಾವ ತಂಡವನ್ನು ಸೇರುತ್ತಾರೆ ಎಂದು ಕಾದು ನೋಡಬೇಕಿಡೆ.
2023 ರ ಐಪಿಎಲ್‌ನಲ್ಲಿ ಹರಾಜುಗಾರರಾಗಿದ್ದ ಎಡ್ವರ್ಡ್ಸ್ ಅವರು ಈ ಭಾರಿಯ ಹಾರಾಜುಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ. ಇವರ ಬದಲಿಗೆ 2024ರ ಹರಾಜಿನಲ್ಲಿ ಓರ್ವ ಮಹಿಳಾ ಹರಾಜುಗಾರ್ತಿ ಹರಾಜುಪ್ರಕ್ರಿಯೆಯನ್ನು ನಡೆಸಿಕೊಡುತ್ತಾರೆ.
ಇದನ್ನು ಓದಿ-ವಿರಾಟ್ ಕೊಹ್ಲಿ ಜೆರ್ಸಿ ನಂಬರ್ ಹಿಂದಿದೆ ಒಂದು ರೋಚಕ ಕತೆ...! 18ರ ರಹಸ್ಯ ಗೊತ್ತಾಗಬೇಕಾ ?
2024ರ ಮಿನಿ ಐಪಿಎಲ್ ಪ್ರಕ್ರಿಯೆ ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿದೆ. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಭಾರಿಗೆ ವಿದೇಶದಲ್ಲಿ ನಡೆಯುವ ಹರಾಜು ಪ್ರಕ್ರಿಯೆಯಾಗೆ. ಐಪಿಎಲ್ ನ 16 ವರ್ಷಗಳ ಹರಾಜು ಭಾರತದಲ್ಲಿಯೇ ನಡೆದಿದ್ದು, ಇದು 17ನೇಯ ವರ್ಷದ ಮಿನಿ ಹರಾಜಾಗಿದೆ.
ಐಪಿಎಲ್ ಇತಿಹಾಸದಲ್ಲಿ ಒಟ್ಟು ಇಲ್ಲಿಯ ವರೆಗೆ ಮೂವರೇ ವ್ಯಕ್ತಿಗಳು ಹರಾಜು ಪ್ರಕ್ರಿಯೆಯನ್ನು ನಡೆಸಿಕೊಟ್ಟಿದ್ದಾರೆ. ರಿಚರ್ಡ್ ಮ್ಯಾಡ್ಲಿ 2008 ರಿಂದ 2018 ರವರೆಗೆ ಸುಮಾರು ಹತ್ತು ವರ್ಷಗಳ ಕಾಲ ಐಪಿಎಲ್ ಹರಾಜುಗಳನ್ನು ನಡೆಸಿದ್ದಾರೆ. ಇದರ ನಂತರ 2023ರವರೆಗೆ ಹಗ್ ಎಡ್ವರ್ಡ್ಸ್ ಐಪಿಎಲ್ ಹರಾಜುದಾರರಾಗಿ ಕಾರ್ಯನಿರ್ವಹಿಸಿದ್ದರು. ಇವರು 2022ರ ಹರಾಜಿನ ವೇಳೆಯಲ್ಲಿ ಆರೋಗ್ಯ ಸಮಸ್ಯೆ ಇಂದ ಕುಸಿದು ಬಿದ್ದ ಕಾರಣ ಇವರ ಬದಲಿಗೆ ಚಾರು ಶರ್ಮಾ ಹರಾಜು ಪ್ರಕ್ರಿಯೆ ನಡೆಸಿಕೊಟ್ಟಿದ್ದಾರೆ.
ಇದನ್ನು ಓದಿ-ಬ್ರೂಕ್- ಸಾಲ್ಟ್ ಆಟಕ್ಕೆ ತತ್ತರಿಸಿದ ಕೆರಿಬಿಯನ್ಸ್..! 222ರ ಭಾರಿ ಗುರಿ ಬೆನ್ನಟ್ಟಿದ ಇಂಗ್ಲೆಂಡ್
ಈ ವರ್ಷ ನಾಲ್ಕನೇ ಹಾರಾಜುಗಾರರಾಗಿ ಮಲ್ಲಿಕಾ ಸಾಗರ್ ಕಾಣಿಸಿಕೊಳ್ಳಲಿದ್ದು, ಇವರು ಐಪಿಎಲ್ ಇತಿಹಾಸದಲ್ಲಿಯೇ ಮೊದಲ ಮಹಿಳಾ ಹರಾಜುಗಾರ್ತಿ ಆಗಲಿದ್ದಾರೆ. ಇವರು ಈ ಮೊದಲು ಪ್ರೋ ಕಬಡಿ ಲೀಗ್ ನ ಹರಾಜು ಪ್ರಕ್ರಿಯಯಲ್ಲಿ ಭಾಗವಹಿಸಿದ್ದು ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ನಾಳೆ ನಡೆಯಲಿರು ಮಿನಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.
ಮಿನಿ ಹರಾಜಿನಲ್ಲಿ ಒಟ್ಟು 333 ಆಟಗಾರರು ಭಾಗಿಯಾಗಲಿದ್ದು,ಅದರಲ್ಲಿ 214 ಮಂದಿ ಭಾರತೀಯರಾರಿಚರ್ಡ್ ಮ್ಯಾಡ್ಲಿಗಿದ್ದರೆ. ಮತ್ತುಳಿದ 119 ಮಂದಿ ವಿದೇಶಿ ಆಟಗಾರರಾಗಿದ್ದಾರೆ. ಇದರಲ್ಲಿ ತಂಡದಿಂದ ಕೈ ಬಿಡಲಾದ ಅನೇಕ ಪ್ರಮುಖ ಆಟಗಾರರು ಭಾಗಿಯಾಗಲಿದ್ದು, ಅವರಲ್ಲ ಯಾವ ತಂಡಗಳನ್ನು ಸೇರುತ್ತಾರೆ ಎಂದು ನಾಳೆಯ ಹರಾಜಿನಲ್ಲಿ ತಿಳಿದು ಬರಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ