ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 23 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಉಂಡ ಮನೆಗೆ ಕನ್ನ ಹಾಕಿದ್ದ ಲೇಡಿ ಸೇರಿ ಮೂವರು ಐನಾತಿಗಳ ಬಂಧನ


ಮೊದಲು ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬೆಂಗಳೂರು ತಂಡವನ್ನು 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 174 ರನ್ ಗಳಿಗೆ ಕಟ್ಟಿ ಹಾಕಿತು.ಬ್ಯಾಟ್ಸಮನ್ ಗಳ ಸ್ವರ್ಗ ಎಂದೇ ಖ್ಯಾತಿ ಆಗಿರುವ ಚಿನ್ನಸ್ವಾಮಿಯಲ್ಲಿ ಆರಂಭದಲ್ಲಿ 200 ಅಧಿಕ ರನ್ ಗಳ ಸುರಿಮಳೆ ಸುರಿಯಬಹುದು ಎಂದು ನಿರೀಕ್ಷಿಸಲಾಗಿತ್ತು.ಆದರೆ ಡೆಲ್ಲಿ ತಂಡದ ಕರಾರುವಕ್ಕಾದ ಬೌಲಿಂಗ್ ನಿಂದ 174 ರನ್ ಗಳ ಸವಾಲಿನ ಮೊತ್ತವನ್ನು ಆರ್ಸಿಬಿ ಗಳಿಸಿತು.


Karnataka election 2023: ಮತ್ತೆ ಐವರು ಅಭ್ಯರ್ಥಿಗಳನ್ನು ಘೋಷಿಸಿದ ಎಚ್.ಡಿ.ಕುಮಾರಸ್ವಾಮಿ


ಬೆಂಗಳೂರು ತಂಡದ ಪರವಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ನಾಯಕ ವಿರಾಟ್ ಕೊಹ್ಲಿ 34 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಒಂದು ಭರ್ಜರಿ ಸಿಕ್ಸರ್ ನೆರವಿನಿಂದಾಗಿ 50 ರನ್ ಗಳಿಸಿದರು. ತಂಡದ ಮೊತ್ತ 10.1 ಓವರ್ ಗಳಲ್ಲಿ 89 ರನ್ ಗಳಾಗಿದ್ದ ಪುಲ್ ಟಾಸ್ ಬಂದಂತಹ ಎಸೆತವನ್ನು ಸಿಕ್ಸರ್ ಬಾರಿಸಲು ಹೋಗಿ ಬೌಂಡರಿಯಲ್ಲಿ ಯಶ್ ದುಲ್ ಗೆ ಕ್ಯಾಚ್ ನೀಡಿ 50 ರನ್ ಗಳಿಗೆ  ವಿಕೆಟ್ ಒಪ್ಪಿಸಿದರು.ತದನಂತರ ಬಂದಂತಹ ಯಾವ ಆಟಗಾರನು ಬೃಹತ್ ಮೊತ್ತ ಗಳಿಸದೆ ಇದ್ದರೂ ಕೂಡ ತಂಡವು 174 ರನ್ ಗಳ ಸವಾಲಿನ ಮೊತ್ತವನ್ನು ಗಳಿಸುವಲ್ಲಿ ಯಶಸ್ವಿಯಾಯಿತು.


ಮಿಚೆಲ್ ಮಾರ್ಷ್,ಯಶ್ ದುಲ್ ಹಾಗೂ ಡೇವಿಡ್ ವಾರ್ನರ್ ಅವರ ವಿಕೆಟ್ ಗಳನ್ನು ಕಳೆದುಕೊಳ್ಳುವುದರ ಮೂಲಕ ಭಾರಿ ಹಿನ್ನೆಡೆಯನ್ನು ಅನುಭವಿಸಿತು.ಈ ಹಂತದಲ್ಲಿ ಮನೀಶ್ ಪಾಂಡೆ 38 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದಾಗಿ 50 ರನ್ ಗಳಿಸಿದರು.ಆದರೆ ನಂತರ ಮಾರಕ ಬೌಲಿಂಗ್ ದಾಳಿಯಿಂದ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಆರ್ಸಿಬಿ ತಂಡವು ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 151 ರನ್ ಗಳಿಗೆ ಕಟ್ಟಿ ಹಾಕಿತು .ಆ ಮೂಲಕ ದೆಹಲಿ ತಂಡವು 23 ರನ್ ಗಳ ಅಂತರದಲ್ಲಿ ಸೋಲನ್ನು ಅನುಭವಿಸಿತು.ಆರ್ಬಿಸಿ ಪರವಾಗಿ ವಿಜಯಕುಮಾರ್ ವೈಶಾಕ್ ಮೂರು ಹಾಗೂ ಸಿರಾಜ್ ಎರಡು ವಿಕೆಟ್ ಗಳನ್ನು ಕಬಳಿಸಿ ಗಮನ ಸೆಳೆದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.