Indian Premier League 2024: ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಶನಿವಾರ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಆಂಡ್ರೆ ರಸೆಲ್ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದಾರೆ. ಪರಿಣಾಮ ಕೋಲ್ಕತ್ತಾ ನೈಟ್‌ ರೈಡರ್ಸ್‌ ಬೃಹತ್‌ ಮೊತ್ತ ಪೇರಿಸಿ 4 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಆಂಡ್ರೆ ರಸೆಲ್ 25 ಎಸೆತಗಳಲ್ಲಿ 3 ಬೌಂಡರಿ ಮತ್ತು 7 ಸಿಕ್ಸರ್‌ಗಳೊಂದಿಗೆ ಅಜೇಯ 64 ರನ್ ಗಳಿಸಿದರು. 256 ಸ್ಟ್ರೈಕ್‌ರೇಟ್‌ನಲ್ಲಿ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದರು.  


COMMERCIAL BREAK
SCROLL TO CONTINUE READING

ಒಂದು ಹಂತದಲ್ಲಿ ಕೋಲ್ಕತ್ತಾ ತಂಡವು 15 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು ಕೇವಲ 123 ರನ್ ಗಳಿಸಿತ್ತು. ರಿಂಕು ಸಿಂಗ್ ಜೊತೆಗೂಡಿ ಏಳನೇ ವಿಕೆಟ್‌ಗೆ ರಸೆಲ್ 81 ರನ್‌ಗಳ ಜೊತೆಯಾಟ ನೀಡಿದರು. ಪರಿಣಾಮ ಕೆಕೆಆರ್‌ 208 ರನ್‌ಗಳ ಬೃಹತ್‌ ಮೊತ್ತ ಪೇರಿಸಲು ಸಾಧ್ಯವಾಯಿತು. ಐಪಿಎಲ್‌ನಲ್ಲಿ ರಸೆಲ್ 1‌,325 ಎಸೆತಗಳಲ್ಲಿ 153 ಬೌಂಡರಿ ಮತ್ತು 200 ಸಿಕ್ಸರ್‌ಗಳನ್ನು ಒಳಗೊಂಡಂತೆ ಒಟ್ಟಾರೆ 2,326 ರನ್ ಗಳಿಸಿದ ಸಾಧನೆ ಮಾಡಿದರು. 


ಇದನ್ನೂ ಓದಿ: 208 ಬೃಹತ್ ಮೊತ್ತದ ರನ್ ಸಾಧಿಸಿದ ಕೆಕೆಆರ್ : ಗೆಲುವಿನ ಗುರಿಯನ್ನು ತಲುಪುವ ಭರದಲ್ಲಿ ಹೈದರಬಾದ್


ಹೈದರಾಬಾದ್‌ ೨೦ ಓವರ್‌ಗಳಲ್ಲಿ ೭ ವಿಕೆಟ್‌ ಕಳೆದುಕೊಂಡು ೨೦೪ ರನ್‌ ಗಳಿಸಲಷ್ಟೇ ಶಕ್ತವಾಯಿತು.


ಇದನ್ನೂ ಓದಿ: KKR Vs SRH : 208ರನ್ ಗಳ ಭರ್ಜರಿ ಮೊತ್ತದೊಂದಿಗೆ, ಭರ್ಜರಿ 4 ರನ್ ಅಂತರದಿಂದ ಗೆಲುವು ಸಾಧಿಸಿದ ಕೆಕೆಆರ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ