IPL 2023: ಕೃನಾಲ್ ಮಾಡಿದ ಅದೊಂದು ತಪ್ಪಿಗೆ ಸೋಲು ಕಂಡಿತೇ ಲಕ್ನೋ?
MI vs LSG: ಈ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ದೊಡ್ಡ ತಪ್ಪು ಮಾಡಿದ್ದಾರೆ. ಅದೇನೆಂದರೆ ಅವರು ಫಾರ್ಮ್-11 ರಲ್ಲಿ ಕ್ವಿಂಟನ್ ಡಿಕಾಕ್ ಅವರನ್ನು ಸೇರಿಸಿಕೊಂಡಿರಲಿಲ್ಲ. ಅವರ ಸ್ಥಾನದಲ್ಲಿ ಕೈಲ್ ಮೇಯರ್ಸ್ ಬ್ಯಾಟಿಂಗ್ ಮಾಡುವ ಅವಕಾಶ ಪಡೆದರು. ಡಿಕಾಕ್ ಕೇವಲ 4 ಪಂದ್ಯಗಳಲ್ಲಿ 143 ರನ್ ಗಳಿಸಿದರು.
MI vs LSG: IPL 2023ರ ಎಲಿಮಿನೇಟರ್ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಲಕ್ನೋ ಸೂಪರ್ ಜೈಂಟ್ಸ್ ಅನ್ನು 81 ರನ್ ಗಳಿಂದ ಸೋಲಿಸಿದೆ. ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಈ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ 182 ರನ್ ಕಲೆಹಾಕಿತ್ತು. ಇದಕ್ಕೆ ಪತ್ಯುತ್ತರ ನೀಡಲೆಂದು ಕಣಕ್ಕಿಳಿದ ಲಕ್ನೋ ತಂಡ ಕೇವಲ 101 ರನ್ ಗಳಿಸಿ ಆಲೌಟ್ ಆಯಿತು. ಲಖನೌ ನಾಯಕ ಕೃನಾಲ್ ಪಾಂಡ್ಯ ಈ ಪಂದ್ಯದಲ್ಲಿ ಅಂತಹ ಒಂದು ತಪ್ಪು ಮಾಡದೇ ಇದ್ದಿದ್ದರೆ ಬಹುಶಃ ತಂಡ ಇನ್ನೂ ಟ್ರೋಫಿ ಗೆಲ್ಲುವ ಪೈಪೋಟಿಯಲ್ಲಿ ಉಳಿಯುತ್ತಿತ್ತು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಊಟಕ್ಕೆ ಬಂದವ ಗೆಳೆಯನ ಪತ್ನಿಯನ್ನೇ ಪಟಾಯ್ಸಿದ! ಬ್ಯಾಟ್ಸ್’ಮನ್ ಜೀವನ ಬರ್ಬಾದ್ ಮಾಡಿದ್ದೇ ಈ ಆಟಗಾರ!
ಪಾಂಡ್ಯ ಮಾಡಿದ ದೊಡ್ಡ ತಪ್ಪು!
ಈ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ದೊಡ್ಡ ತಪ್ಪು ಮಾಡಿದ್ದಾರೆ. ಅದೇನೆಂದರೆ ಅವರು ಫಾರ್ಮ್-11 ರಲ್ಲಿ ಕ್ವಿಂಟನ್ ಡಿಕಾಕ್ ಅವರನ್ನು ಸೇರಿಸಿಕೊಂಡಿರಲಿಲ್ಲ. ಅವರ ಸ್ಥಾನದಲ್ಲಿ ಕೈಲ್ ಮೇಯರ್ಸ್ ಬ್ಯಾಟಿಂಗ್ ಮಾಡುವ ಅವಕಾಶ ಪಡೆದರು. ಡಿಕಾಕ್ ಕೇವಲ 4 ಪಂದ್ಯಗಳಲ್ಲಿ 143 ರನ್ ಗಳಿಸಿದರು. ಆದರೆ ಮೇಯರ್ಸ್ ಅವರ ಕೊನೆಯ ಐದು ಪಂದ್ಯಗಳಲ್ಲಿ ಗಳಿಸಿದ್ದು ಜಸ್ಟ್ 82 ರನ್. ಹೀಗಿರುವಾಗ ಅವರ ನಿರ್ಧಾರ ತಂಡಕ್ಕೆ ಭಾರವಾಗಿದ್ದು ಸೋಲಿನಿಂದಲೇ ಬೆಲೆ ತೆರಬೇಕಾಯಿತು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಂದ್ಯದ ಸ್ಥಿತಿ ಹೀಗಿತ್ತು…
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ ಗಳಲ್ಲಿ 182 ರನ್ ಗಳಿಸಿತು. ಮುಂಬೈ ಪರವಾಗಿ ಕ್ಯಾಮರೂನ್ ಗ್ರೀನ್ (41), ಸೂರ್ಯಕುಮಾರ್ ಯಾದವ್ (33), ತಿಲಕ್ ವರ್ಮಾ (26) ಮತ್ತು ನೆಹಾಲ್ ವಧೇರಾ (23) ರನ್ ಕೊಡುಗೆ ನೀಡಿದರು. ಇದಕ್ಕೆ ಉತ್ತರ ನೀಡಲೆಂದು ಕಣಕ್ಕಿಳಿದ ಲಕ್ನೋ ಬ್ಯಾಟ್ಸ್ ಮನ್ ಗಳು ಕೇವಲ 101 ರನ್ ಗಳಿಗೆ ಆಲೌಟ್ ಆದರು. ಮುಂಬೈ ವೇಗಿ ಆಕಾಶ್ ಮಧ್ವಲ್ ಅವರ ಮಾರಕ ಬೌಲಿಂಗ್ ಮುಂದೆ ಲಖನೌ ಬ್ಯಾಟ್ಸ್ ಮನ್ ಗಳು ಧೂಳಿಪಟವಾದರು. ಮಧ್ವಲ್ 3.3 ಓವರ್ ಗಳಲ್ಲಿ ಕೇವಲ 5 ರನ್ ನೀಡಿ 5 ವಿಕೆಟ್ ಪಡೆದರು. ಇದು ಅವರ ವೃತ್ತಿಜೀವನದ ಮತ್ತು ಪ್ರಸಕ್ತ ಋತುವಿನಲ್ಲಿ ಯಾರೂ ಮಾಡದ ಅತ್ಯುತ್ತಮ ಸ್ಪೆಲ್ ಆಗಿದೆ.
ಇದನ್ನೂ ಓದಿ: Rain Alert: ಮುಂದಿನ 48 ಗಂಟೆಗಳಲ್ಲಿ ಮತ್ತೆ ವರುಣಾರ್ಭಟ: ಗುಡುಗು ಸಹಿತ ಬಿರುಗಾಳಿಯ ಮುನ್ಸೂಚನೆ
ಕ್ವಾಲಿಫೈಯರ್-2ರಲ್ಲಿ ಗುಜರಾತ್-ಮುಂಬೈ ಹಣಾಹಣಿ:
ಮೇ 26 ರಂದು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕ್ವಾಲಿಫೈಯರ್-2 ನಡೆಯಲಿದ್ದು, ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿವೆ. ಸ್ಪರ್ಧೆಯು ಅತ್ಯಂತ ರೋಚಕವಾಗಿ ನಡೆಯುವ ನಿರೀಕ್ಷೆಯಿದೆ. ಒಂದು ರೀತಿಯಲ್ಲಿ, ಮುಂಬೈ ಇಂಡಿಯನ್ಸ್ ತನ್ನ ಕೊನೆಯ ಎರಡು ಪಂದ್ಯಗಳನ್ನು ಗೆದ್ದಿದೆ. ಮತ್ತೊಂದೆಡೆ, ಹಾರ್ದಿಕ್ ಪಾಂಡ್ಯ ಅವರ ಹಾಲಿ ಚಾಂಪಿಯನ್ ಗುಜರಾತ್ ಮೊದಲ ಕ್ವಾಲಿಫೈಯರ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೈಯಲ್ಲಿ 15 ರನ್ ಗಳಿಂದ ಸೋಲನ್ನು ಎದುರಿಸಬೇಕಾಯಿತು. ಉಭಯ ತಂಡಗಳು ಈ ಪಂದ್ಯವನ್ನು ಗೆದ್ದು ಫೈನಲ್ ಗೆ ಲಗ್ಗೆ ಇಡುವ ನಿರೀಕ್ಷೆಯಲ್ಲಿವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.