RCB vs LSG Dream 11 Prediction, IPL 2023: IPL 2023 ರ 16 ನೇ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಮ್ಮ ತವರು ಮೈದಾನದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಅನ್ನು ಎದುರಿಸಲಿದೆ. ಉಭಯ ತಂಡಗಳು ಇಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ 7.30ಕ್ಕೆ ಮುಖಾಮುಖಿಯಾಗಲಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: SRH vs PKB: ಶಿಖರ್ ಧವನ್ 99 ರನ್’ಗಳ ಆಕರ್ಷಕ ಇನ್ನಿಂಗ್ಸ್ ವ್ಯರ್ಥ: ನೆಲಕಚ್ಚಿದ ಪಂಜಾಬ್-ಹೈದರಾಬಾದ್’ಗೆ ಜಯ


ಈ ಋತುವಿನಲ್ಲಿ ಲಕ್ನೋ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದಿದೆ ಮತ್ತು RCB ಇದುವರೆಗೆ ಎರಡು ಪಂದ್ಯಗಳನ್ನು ಆಡಿದೆ. ಆದರೆ ಇಂದಿನ ಲಕ್ನೋ ಮತ್ತು ಬೆಂಗಳೂರು ನಡುವಿನ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಮುಖ್ಯ. ಕೆಎಲ್ ರಾಹುಲ್ ನಾಯಕತ್ವದಲ್ಲಿ ಲಖನೌ ಇದುವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಸಾಧಿಸಿದೆ. ಚೆನ್ನೈ ವಿರುದ್ಧ ತಂಡ ಸೋಲು ಕಂಡಿತ್ತು. ಇದೇ ವೇಳೆ ಆರ್‌ಸಿಬಿ ಒಂದು ಪಂದ್ಯ ಗೆದ್ದಿದ್ದರೆ, ಒಂದು ಪಂದ್ಯದಲ್ಲಿ ತಂಡ ಸೋಲು ಕಂಡಿದೆ.


RCB ಇಂದು ಗೆಲ್ಲುತ್ತದೆಯೇ?


ರಾಯಲ್ ಚಾಲೆಂಜರ್ಸ್ ಬೆಂಗಳೂರು ತವರಿನಲ್ಲಿ ಮತ್ತೆ ಗೆಲುವಿನ ಹಾದಿಗೆ ಮರಳುವ ನಿಟ್ಟಿನಲ್ಲಿ ಮೈದಾನಕ್ಕಿಳಿಯಲಿದೆ. ಕೆಕೆಆರ್ ವಿರುದ್ಧ ಆರ್ ಸಿ ಬಿ ಬಳಗದ ಬ್ಯಾಟಿಂಗ್ ಸಂಪೂರ್ಣ ವಿಫಲವಾಗಿತ್ತು. ಕೊಹ್ಲಿ, ಡುಪ್ಲೆಸಿಸ್ ಮತ್ತು ಮ್ಯಾಕ್ಸ್‌ವೆಲ್ ಕೆಕೆಆರ್ ವಿರುದ್ಧ ಕಡಿಮೆ ಸಮಯದಲ್ಲಿಯೇ ಪೆವಿಲಿಯನ್‌’ಗೆ ಮರಳಿದರು. ಇವರ ಜೊತೆ ದಿನೇಶ್ ಕಾರ್ತಿಕ್ ಮತ್ತು ಶಹಬಾಜ್ ಅಹ್ಮದ್ ಕೂಡ ಬ್ಯಾಟ್‌’ನೊಂದಿಗೆ ವಿಶೇಷವಾದ ಏನನ್ನೂ ತೋರಿಸಲು ಸಾಧ್ಯವಾಗಲಿಲ್ಲ. ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ಮಾತ್ರವಲ್ಲದೆ ಬೆಂಗಳೂರು ಬೌಲರ್’ಗಳು ಕೂಡ ನಿರಾಸೆ ಮೂಡಿಸಿದ್ದರು. ರೀಸ್ ಬಾಸ್ಕೆಟ್ ಬದಲಿಗೆ ವೇಯ್ನ್ ಪಾರ್ನೆಲ್ RCB ಪ್ಲೇಯಿಂಗ್ XI ನಲ್ಲಿ ಅವಕಾಶ ನೀಡಬಹುದು.


ಕಳೆದ ಪಂದ್ಯದಲ್ಲಿ ಲಖನೌ ಅದ್ಭುತ ಪ್ರದರ್ಶನ!


ಮತ್ತೊಂದೆಡೆ, ಲಕ್ನೋ ಸೂಪರ್ ಜೈಂಟ್ಸ್ ಪರ, ಕೈಲ್ ಮೇಯರ್ಸ್ ಇದುವರೆಗೆ ಉತ್ತಮ ಇನ್ನಿಂಗ್ಸ್ ಆಡಿದ್ದಾರೆ. ಕಳೆದ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ನಾಯಕ ರಾಹುಲ್ ಕೂಡ ಉತ್ತಮ ಫಾರ್ಮ್‌’ನಲ್ಲಿ ಕಾಣಿಸಿಕೊಂಡಿದ್ದರು. ಕೃನಾಲ್ ಪಾಂಡ್ಯ ಬೌಲಿಂಗ್ ಮತ್ತು ಬ್ಯಾಟ್ ಎರಡರಿಂದಲೂ ವಿಧ್ವಂಸಕ ಪ್ರದರ್ಶನ ನೀಡಿದ್ದರು. ಇದೇ ವೇಳೆ ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ ಕೂಡ ಹೈದರಾಬಾದ್ ಬ್ಯಾಟ್ಸ್ ಮನ್’ಗಳನ್ನು ತಮ್ಮ ಸ್ಪಿನ್ ಬಲೆಯಲ್ಲಿ ಸಿಲುಕಿಸುವಲ್ಲಿ ಯಶಸ್ವಿಯಾಗಿದ್ದರು. ಈ ಟೂರ್ನಿಯಲ್ಲಿ ಇದುವರೆಗೆ ಲಖನೌ ಪರ ಕೈಲ್ ಮೇಯರ್ಸ್ ಅದ್ಭುತ ಬ್ಯಾಟಿಂಗ್ ಮಾಡಿದ್ದಾರೆ. ನಾಯಕ ರಾಹುಲ್ ಕೂಡ ಹೈದರಾಬಾದ್ ವಿರುದ್ಧ ಉತ್ತಮ ಪ್ರದರ್ಶನ ನೀಡಿ 35 ರನ್ ಗಳಿಸಿದರು. ಕೃನಾಲ್ ಪಾಂಡ್ಯ 23 ಎಸೆತಗಳಲ್ಲಿ 34 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು.


ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ಪ್ಲೇಯಿಂಗ್ 11: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಮೈಕಲ್ ಬ್ರೇಸ್‌ವೆಲ್, ಗ್ಲೆನ್ ಮ್ಯಾಕ್ಸ್‌ವೆಲ್, ಹರ್ಷಲ್ ಪಟೇಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಆಕಾಶದೀಪ್, ಮೊಹಮ್ಮದ್ ಸಿರಾಜ್.


ಇದನ್ನೂ ಓದಿ: IPL 2023: ಚೆನ್ನೈ ಸೂಪರ್ ಕಿಂಗ್ಸ್’ಗೆ ಮಹಾ ಆಘಾತ: ಇಬ್ಬರು ಸ್ಟಾರ್ ಆಟಗಾರರು ತಂಡದಿಂದ ಹೊರಕ್ಕೆ!


ಲಕ್ನೋ ಸೂಪರ್ ಜೈಂಟ್ಸ್ ಸಂಭಾವ್ಯ ಪ್ಲೇಯಿಂಗ್ XI: ಕೈಲ್ ಮೇಯರ್ಸ್, ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಅಮಿತ್ ಮಿಶ್ರಾ, ಯಶ್ ಠಾಕೂರ್, ಜಯದೇವ್ ಉನಾದ್ಕತ್, ರವಿ ಬಿಷ್ಣೋಯ್.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ