CSK vs DC: ಡೆಲ್ಲಿ ವಿರುದ್ಧ ಗೆದ್ದರೂ ಈ ರೀತಿ ಹೇಳಿಕೆ ನೀಡಿದ ಎಂಎಸ್ ಧೋನಿ! ಯಾಕೆ ಇಂಥಾ ಮಾತು?
IPL 2023 News, MS Dhoni: ಮಹೇಂದ್ರ ಸಿಂಗ್ ಧೋನಿ, “ಈ ಪಿಚ್‌ನಲ್ಲಿ ಕೆಲವು ಶಾಟ್ ಗಳನ್ನು ಆಡಬಾರದಿತ್ತು. ಮೊಯಿನ್ ಮತ್ತು ಜಡೇಜಾಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿದ್ದು ಒಳ್ಳೆಯ ಸಂಗತಿ. ಎಲ್ಲರೂ ಬ್ಯಾಟಿಂಗ್ ಅಭ್ಯಾಸ ಮಾಡಿಕೊಂಡಿದ್ದಾರೆ. ಕೆಲವು ಬೌಂಡರಿ ಮತ್ತು ಸಿಕ್ಸರ್ ಗಳನ್ನು ಹೊಡೆಯುವುದು ನನ್ನ ಕೆಲಸ ಎಂದು ಹೇಳಿದ್ದಾರೆ.
IPL 2023 News, MS Dhoni: ಡೆಲ್ಲಿ ಕ್ಯಾಪಿಟಲ್ಸ್ ಅನ್ನು 27 ರನ್ ಗಳಿಂದ ಸೋಲಿಸಿ ಐಪಿಎಲ್ ಪ್ಲೇಆಫ್ ನತ್ತ ಮುಂದಿನ ಹೆಜ್ಜೆ ಇಟ್ಟರೂ, ತಮ್ಮ ತಂಡ ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗಿದೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ. ಎಂಟು ವಿಕೆಟ್ ನಷ್ಟಕ್ಕೆ ಚೆನ್ನೈ 167 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಡೆಲ್ಲಿ ತಂಡ ಎಂಟು ವಿಕೆಟ್ ಕಳೆದುಕೊಂಡು ಓವರ್ ಅಂತ್ಯಕ್ಕೆ 140 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದನ್ನೂ ಓದಿ: Today Horoscope: ಇಂದು ಈ ರಾಶಿಯವರಿಗೆ ಸಕಲ ಕಾರ್ಯಸಿದ್ಧಿ; ಸಂತೃಪ್ತಿ ಅರಸಿ ಬರುವುದು!
ಪಂದ್ಯದ ಬಳಿಕ ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ, “ದ್ವಿತೀಯಾರ್ಧದಲ್ಲಿ ಬೌಲಿಂಗ್ ಸಾಕಷ್ಟು ತಿರುವು ಪಡೆಯುತ್ತಿತ್ತು. ನಮ್ಮ ಸ್ಪಿನ್ನರ್ ಗಳು ಸೀಮ್ ನ ಸಂಪೂರ್ಣ ಲಾಭ ಪಡೆದಿದ್ದರು. ಬೌಲರ್ ಗಳು ಕೇವಲ ವಿಕೆಟ್ ಕಬಳಿಸುವುದರ ಬಗ್ಗೆ ಗಮನಿಸದೆ, ಅತ್ಯುತ್ತಮ ಬೌಲ್ ಮಾಡಬೇಕೆಂದು ನಾನು ಭಾವಿಸುತ್ತೇನೆ. ಬ್ಯಾಟಿಂಗ್ ಘಟಕದಲ್ಲಿ ನಾವು ಉತ್ತಮ ಪ್ರದರ್ಶನ ನೀಡಬಹುದಿತ್ತು” ಎಂದು ಹೇಳಿದ್ದಾರೆ.
ಚೆನ್ನೈ ಗೆಲುವಿನ ದೊಡ್ಡ ತಿರುವು!
ಮಾತು ಮುಂದುವರೆಸಿದ ಮಹೇಂದ್ರ ಸಿಂಗ್ ಧೋನಿ, “ಈ ಪಿಚ್‌ನಲ್ಲಿ ಕೆಲವು ಶಾಟ್ ಗಳನ್ನು ಆಡಬಾರದಿತ್ತು. ಮೊಯಿನ್ ಮತ್ತು ಜಡೇಜಾಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿದ್ದು ಒಳ್ಳೆಯ ಸಂಗತಿ. ಎಲ್ಲರೂ ಬ್ಯಾಟಿಂಗ್ ಅಭ್ಯಾಸ ಮಾಡಿಕೊಂಡಿದ್ದಾರೆ. ಕೆಲವು ಬೌಂಡರಿ ಮತ್ತು ಸಿಕ್ಸರ್ ಗಳನ್ನು ಹೊಡೆಯುವುದು ನನ್ನ ಕೆಲಸ. ನಾನು ಆಡುವ ಪ್ರತೀ ಬಾಲ್ ನಲ್ಲಿ ಉತ್ತಮ ಕೊಡುಗೆ ನೀಡಬೇಕು ಎನ್ನುವುದು ನನಗೆ ಸಂತೋಷ ನೀಡುತ್ತದೆ” ಎಂದು ಹೇಳಿದ್ದಾರೆ.
ಪ್ಲೇಆಫ್‌ನ ಹೊಸ್ತಿಲಲ್ಲಿ ಚೆನ್ನೈ!
ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ಕೌಶಲ್ಯಪೂರ್ಣ ನಾಯಕತ್ವದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು 27 ರನ್ ಗಳಿಂದ ಸೋಲಿಸುವ ಮೂಲಕ ಐಪಿಎಲ್ ಪ್ಲೇಆಫ್‌ನತ್ತ ಮುಂದಿನ ಹೆಜ್ಜೆ ಇಟ್ಟಿದೆ. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಎಂಟು ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು, ಇದರಲ್ಲಿ ಧೋನಿ ಒಂಬತ್ತು ಎಸೆತಗಳಲ್ಲಿ 20 ರನ್ ಗಳ ಕೊಡುಗೆ ನೀಡಿದರು. ಇದಕ್ಕೆ ಉತ್ತರವಾಗಿ ಕಣಕ್ಕಿಳಿದ ಡೆಲ್ಲಿ ತಂಡ ಎಂಟು ವಿಕೆಟ್ ಕಳೆದುಕೊಂಡು 140 ರನ್ ಗಳಿಸಲಷ್ಟೇ ಶಕ್ತವಾಯಿತು. ತನ್ನ ಇಡೀ ಇನ್ನಿಂಗ್ಸ್ ನಲ್ಲಿ ಹತ್ತು ಬೌಂಡರಿಗಳನ್ನು ಸಹ ಹೊಡೆಯಲು ಸಾಧ್ಯವಾಗಲಿಲ್ಲ. ಕೇವಲ ಏಳು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಈ ತಂಡ ಬಾರಿಸಿತ್ತು.
ಇದನ್ನೂ ಓದಿ: Rain: ರಾಜ್ಯದ ವಿವಿಧೆಡೆ ಮುಂದುವರಿದ ಮಿಂಚು-ಗುಡುಗು ಸಹಿತ ಭಾರೀ ಮಳೆ; ಯೆಲ್ಲೋ ಅಲರ್ಟ್ ಘೋಷಣೆ!
ಡೆಲ್ಲಿಯ ಪ್ಲೇ-ಆಫ್ ಕನಸು ಬಹುತೇಕ ಖತಂ!
ನಾಲ್ಕನೇ ಓವರ್ ಆಡುವಷ್ಟರಲ್ಲಿ ದೆಹಲಿಯ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ವಾರ್ನರ್ (0), ಫಿಲ್ ಸಾಲ್ಟ್ (17) ಮತ್ತು ಮಿಚೆಲ್ ಮಾರ್ಷ್ (ಐದು) ಪೆವಿಲಿಯನ್ ಸೇರಿದ್ದರು. ಈ ಗೆಲುವಿನೊಂದಿಗೆ ಚೆನ್ನೈ 15 ಅಂಕ ಗಳಿಸಿದ್ದು, ಉಳಿದೆರಡು ಪಂದ್ಯಗಳಲ್ಲಿ ಒಂದನ್ನು ಗೆದ್ದರೆ ಸಾಕು ಪ್ಲೇ ಆಫ್ ಎಂಟ್ರಿ ಕೊಡೋದು ಕನ್ಫರ್ಮ್. ಡೆಲ್ಲಿ 11 ಪಂದ್ಯಗಳಲ್ಲಿ ಕೇವಲ ಎಂಟು ಅಂಕಗಳನ್ನು ಪಡೆದಿದೆ. ಈ ಮೂಲಕ ತಂಡದ ಪ್ಲೇ ಆಫ್ ಭರವಸೆ ಬಹುತೇಕ ಮುಗಿದಿದೆ. ಚೆನ್ನೈ ಪರ ಮತಿಶ ಪತಿರಾನ ನಾಲ್ಕು ಓವರ್ ಗಳಲ್ಲಿ 37 ರನ್ ನೀಡಿ ಮೂರು ವಿಕೆಟ್ ಪಡೆದಿದ್ದಾರೆ. ರವೀಂದ್ರ ಜಡೇಜಾ ನಾಲ್ಕು ಓವರ್ ಗಳಲ್ಲಿ ಕೇವಲ 19 ರನ್ ನೀಡಿ ಒಂದು ವಿಕೆಟ್ ಪಡೆದರೆ, ಮೊಯಿನ್ ಅಲಿ ನಾಲ್ಕು ಓವರ್ ಗಳಲ್ಲಿ ಕೇವಲ 16 ರನ್ ನೀಡಿದ್ದಾರೆ. ಮನೀಷ್ ಪಾಂಡೆ ಮತ್ತು ರಿಲೆ ರೊಸೊವ್ ಅವರು ಮಧ್ಯಮ ಓವರ್ ಗಳಲ್ಲಿ ಡೆಲ್ಲಿಗೆ 59 ರನ್ ಕೊಡುಗೆ ನೀಡಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.