MS Dhoni Records, CSK vs RR: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಹಾಗೂ ಅನುಭವಿ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಇಂದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್-2023 ಪಂದ್ಯದಲ್ಲಿ ಟಾಸ್ ಗೆದ್ದ ತಕ್ಷಣ ಧೋನಿ ತಮ್ಮದೇ ಆದ ದೊಡ್ಡ ದಾಖಲೆಯನ್ನು ಸಾಧಿಸಿದರು. ಟಾಸ್ ಗೆದ್ದ ಧೋನಿ ಮೊದಲು ರಾಜಸ್ಥಾನವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಸಹ ಹಿಂದಿಕ್ಕಿ ಈ ದಾಖಲೆ ಬರೆದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ICC: ಸತತ ವೈಫಲ್ಯವಿದ್ದರೂ ಸೂರ್ಯಕುಮಾರ್’ಗೆ ICC ಕೊಡ್ತು ಗುಡ್’ನ್ಯೂಸ್! ಏನದು ಗೊತ್ತಾ?


ತಮ್ಮ ನಾಯಕತ್ವದಲ್ಲಿ ಭಾರತಕ್ಕೆ 2 ವಿಶ್ವಕಪ್ ಗೆದ್ದುಕೊಟ್ಟ ಧೋನಿ, ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಮೂಲಕ ದೊಡ್ಡ ದಾಖಲೆಯನ್ನು ಸಾಧಿಸಿದರು. 200 ನೇ ಬಾರಿಗೆ CSK ನಾಯಕನಾಗಿ ಪಂದ್ಯವನ್ನು ಮುನ್ನಡೆಸುವ ಕೀರ್ತಿಗೆ ಮಾಹಿ ಪಾತ್ರರಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಒಂದು ತಂಡದ ಹಲವು ಪಂದ್ಯಗಳಿಗೆ ನಾಯಕತ್ವ ವಹಿಸಿದ ಏಕೈಕ ಆಟಗಾರ ಧೋನಿಯಾಗಿದ್ದಾರೆ. ಇನ್ನು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು ಎಂದು ಅವರನ್ನು ಪರಿಗಣಿಸಲ್ಪಟ್ಟಿದ್ದಾರೆ. ಅವರ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 4 ಬಾರಿ ಟ್ರೋಫಿ ಗೆದ್ದಿದೆ.


213 ಪಂದ್ಯಗಳಲ್ಲಿ ನಾಯಕತ್ವ!


41 ವರ್ಷದ ಮಹೇಂದ್ರ ಸಿಂಗ್ ಧೋನಿ (ಎಂಎಸ್ ಧೋನಿ) ಐಪಿಎಲ್‌ನಲ್ಲಿ ಇದುವರೆಗೆ 214 ಪಂದ್ಯಗಳಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ರೈಸಿಂಗ್ ಪುಣೆ ಸೂಪರ್‌ ಜೈಂಟ್ಸ್ (ಆರ್‌ಪಿಎಸ್) ತಂಡದ ನಾಯಕರಾಗಿ 14 ಬಾರಿ ಮತ್ತು 200 ಬಾರಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಈ ಎರಡು ತಂಡಗಳನ್ನು ಒಳಗೊಂಡಂತೆ ಧೋನಿ 87 ಪಂದ್ಯಗಳನ್ನು ಗೆದ್ದಿದ್ದಾರೆ. ನಾಯಕನಾಗಿ ಅವರ ಗೆಲುವಿನ ಶೇಕಡಾವಾರು 58.96 ಆಗಿದೆ, ಇದು ಇತರ ನಾಯಕರಿಗಿಂತ ಹೆಚ್ಚು. ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ, ಅವರ ಗೆಲುವಿನ ಶೇಕಡಾವಾರು 56.16 ಆಗಿದೆ.


ಇದನ್ನೂ ಓದಿ: Team India: ಟೀಂ ಇಂಡಿಯಾದಿಂದ 11 ವರ್ಷ ಹೊರಗಿದ್ದ ಈ ಆಟಗಾರನಿಂದಲೇ ಖುಲಾಯಿಸಿತು ರೋಹಿತ್ ಶರ್ಮಾ ಅದೃಷ್ಟ!


ಐಪಿಎಲ್‌ನಲ್ಲಿ ನಾಯಕತ್ವದ ವಿಷಯದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಧೋನಿಗಿಂತ ಬಹಳ ಹಿಂದೆ ಇದ್ದಾರೆ. ರೋಹಿತ್ ಶರ್ಮಾ ಇದುವರೆಗೆ 146 ಐಪಿಎಲ್ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 140 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, 64 ರಲ್ಲಿ ಗೆದ್ದು 69 ರಲ್ಲಿ ಸೋತಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.