MI vs KKR: ಐಪಿಎಲ್-2023ರ 22ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮಧ್ಯೆ ನಡೆದಿದೆ. ಆದರೆ ಈ ವೇಳೆ ಇಬ್ಬರು ಆಟಗಾರರು ವಾಗ್ವಾದ ನಡೆಸಿಕೊಂಡಿದ್ದು, ಪರಿಸ್ಥಿತಿ ಕೊಂಚ ಬಿಗಡಾಯಿಸಿತ್ತು. ಮುಂಬೈ ಆಟಗಾರನೊಂದಿಗೆ ಕೆಕೆಆರ್ ನಾಯಕ ನಿತೀಶ್ ರಾಣಾ ತೀವ್ರ ವಾಗ್ವಾದಕ್ಕಿಳಿದಿದ್ದರು. ಕಡೆಗೆ ಮುಂಬೈ ತಂಡದ ನಾಯಕತ್ವವನ್ನು ನಿಭಾಯಿಸುತ್ತಿದ್ದ ಸೂರ್ಯಕುಮಾರ್ ಯಾದವ್ ಮಧ್ಯಪ್ರವೇಶಿಸಬೇಕಾಯಿತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Kedar yoga: 500 ವರ್ಷಗಳ ಬಳಿಕ ‘ಕೇದಾರ ಯೋಗ’: ಈ ರಾಶಿಯವರ ಸಾಮಾಜಿಕ ಪ್ರತಿಷ್ಠೆ ಹೆಚ್ಚಳ, ದಿಢೀರ್ ಧನಪ್ರಾಪ್ತಿ!


ಟಾಸ್ ಸೋತ ಕೋಲ್ಕತ್ತಾ ತಂಡ ಬ್ಯಾಟಿಂಗ್‌’ಗೆ ಇಳಿದಿತ್ತು. ಇನಿಂಗ್ಸ್‌’ನ 9ನೇ ಓವರ್‌’ನ ಮೊದಲ ಎಸೆತದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನಾಯಕ ನಿತೀಶ್ ರಾಣಾ ಅವರು ಹೃತಿಕ್ ಶೋಕೀನ್ ಎಸೆತಕ್ಕೆ ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸಿದರು. ಆದರೆ ಚೆಂಡು ಸರಿಯಾಗಿ ಬ್ಯಾಟ್‌’ಗೆ ತಾಗದ ಕಾರಣ ಸಾಧ್ಯವಾಗಲಿಲ್ಲ. ಬದಲಿ ಆಟಗಾರ ರಮಣದೀಪ್ ಸಿಂಗ್ ಚೆಂಡನ್ನು ಹಿಡಿದರು. ಇದಾದ ನಂತರ ಹೃತಿಕ್, ನಿತೀಶ್ ರಾಣಾಗೆ ಏನೋ ಹೇಳಿದ್ದಾರೆ. ಇದೇ ವಿಚಾರಕ್ಕೆ ಇವರಿಬ್ಬರ ಮಧ್ಯೆ ವಾದ ಪ್ರಾರಂಭವಾಗಿದೆ.


ಮೊದಲು ಸನ್ನೆ, ನಂತರ ನಿಂದನೆ!


ಮುಂಬೈ ಸ್ಪಿನ್ನರ್ ಹೃತಿಕ್ ಶೋಕೀನ್ ನಿತೀಶ್ ರಾಣಾ ಕಡೆ ನೋಡಿ ಸನ್ನೆ ಮಾಡಿದ್ದಾರೆ. ಆ ಬಳಿಕ ನಿತೀಶ್ ಕೋಪದಿಂದ ವಾದಕ್ಕಿಳಿದಿದ್ದಾರೆ. ಘಟನೆ ತೀವ್ರತೆ ಪಡೆಯುತ್ತಿದ್ದಂತೆ, ಮುಂಬೈನ ಹಾಲಿ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಪಿಯೂಷ್ ಚಾವ್ಲಾ ಮಧ್ಯಪ್ರವೇಶಿಸಿ ಪರಿಸ್ಥಿತಿ ಸುಧಾರಿಸಿದ್ದಾರೆ.


MS Dhoni: ಕ್ಯಾಪ್ಟನ್ ಕೂಲ್ ಎಂಎಸ್ ಧೋನಿಗೆ ಕಿಸ್ ಕೊಟ್ಟ ಈ ಸ್ಟಾರ್ ನಟಿಯ ಅತ್ತೆ! ಫೋಟೋ ನೋಡಿ


ಶತಕ ಬಾರಿಸಿದ ವೆಂಕಟೇಶ್:


ಮುಂಬೈ ವಿರುದ್ಧದ ಈ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್‌’ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 185 ರನ್ ಗಳಿಸಿದೆ. ಅದರಲ್ಲೂ ತಂಡದ ಆರಂಭಿಕ ಆಟಗಾರ ವೆಂಕಟೇಶ್ ಅಯ್ಯರ್ 51 ಎಸೆತಗಳಲ್ಲಿ 6 ಬೌಂಡರಿ ಹಾಗೂ 9 ಸಿಕ್ಸರ್‌’ಗಳ ನೆರವಿನಿಂದ 104 ರನ್ ಗಳಿಸಿ ಅಮೋಘ ಶತಕ ಸಿಡಿಸಿದ್ದಾರೆ. ಇನ್ನುಳಿದಂತೆ ಆಂಡ್ರೆ ರಸೆಲ್ 11 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಔಟಾಗದೆ 21 ರನ್ ಕಲೆ ಹಾಕಿದ್ದಾರೆ. ಮುಂಬೈ ಪರ ಹೃತಿಕ್ ಶೋಕೀನ್ 2 ವಿಕೆಟ್ ಪಡೆದರೆ, ಕ್ಯಾಮರೂನ್ ಗ್ರೀನ್, ಡುವಾನ್ ಜಾನ್ಸನ್, ಪಿಯೂಷ್ ಚಾವ್ಲಾ ಮತ್ತು ರಿಲೆ ಮೆರೆಡಿತ್ ತಲಾ 1 ವಿಕೆಟ್ ಕಬಳಿಸಿದ್ದಾರೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.