R Ashwin allegation against umpire: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ಇಬ್ಬನಿ ಬೀಳುತ್ತಿತ್ತು. ಹೀಗಾಗಿ ಅಂಪೈರ್‌’ಗಳು ತಾವಾಗಿಯೇ ಚೆಂಡನ್ನು ಬದಲಾಯಿಸಲು ನಿರ್ಧರಿಸಿದ್ದರು ಎಂದು ರಾಜಸ್ಥಾನ್ ರಾಯಲ್ಸ್ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಬುಧವಾರ ರಾತ್ರಿ ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಪಂದ್ಯದ ವೇಳೆ ಸಾಕಷ್ಟು ಇಬ್ಬನಿ ಬಿದ್ದಿದ್ದು, ಈ ಕಾರಣದಿಂದ ಸ್ವತಃ ಅಂಪೈರ್‌’ಗಳೇ ಎರಡನೇ ಇನ್ನಿಂಗ್ಸ್‌ನಲ್ಲಿ ಚೆಂಡನ್ನು ಬದಲಾಯಿಸಿದ್ದು ಅಶ್ವಿನ್‌’ಗೆ ಅಚ್ಚರಿ ಮೂಡಿಸಿದೆ. ಈ ಪಂದ್ಯದಲ್ಲಿ ಆಫ್ ಸ್ಪಿನ್ನರ್ 25 ರನ್‌ಗಳಿಗೆ ಎರಡು ವಿಕೆಟ್ ಪಡೆದರು. ಈ ಪಂದ್ಯವನ್ನು ರಾಜಸ್ಥಾನ ಮೂರು ರನ್‌ಗಳಿಂದ ಗೆದ್ದುಕೊಂಡಿತು.


ಇದನ್ನೂ ಓದಿ: CSK vs RR: ರಾಜಸ್ಥಾನ ವಿರುದ್ಧ ತವರಿನಲ್ಲಿ ಸೋತ ಚೆನ್ನೈ: ರೋಚಕ ಪಂದ್ಯದ ಬಳಿಕ ಬ್ಯಾಟ್ಸ್’ಮನ್’ಗಳ ಬಗ್ಗೆ ಧೋನಿ ಹೇಳಿದ್ದೇನು?


ಅಂಪೈರ್ ವಿರುದ್ಧ ಅಶ್ವಿನ್ ಗಂಭೀರ ಆರೋಪ!


ತುಂಬಾ ಇಬ್ಬನಿ ಇದ್ದಾಗಲೂ ಅಂಪೈರ್‌’ಗಳು ಚೆಂಡನ್ನು ಬದಲಾಯಿಸಿದನ್ನು ಹಿಂದೆಂದೂ ನೋಡಿರಲಿಲ್ಲ. ಆದರೆ ಈ ಘಟನೆ ಅಚ್ಚರಿ ಮೂಡಿಸಿದೆ. ಇದು ಹಿಂದೆಂದೂ ಸಂಭವಿಸಿರಲಿಲ್ಲ ಮತ್ತು ನನಗೆ ಆಶ್ಚರ್ಯವಾಯಿತು. ನಿಜ ಹೇಳಬೇಕೆಂದರೆ, ಐಪಿಎಲ್‌ನಲ್ಲಿ ಈ ಬಾರಿಯ ಮೈದಾನದಲ್ಲಿ ತೆಗೆದುಕೊಂಡ ಕೆಲವು ನಿರ್ಧಾರಗಳು ನನಗೆ ಸ್ವಲ್ಪ ಆಶ್ಚರ್ಯವನ್ನುಂಟುಮಾಡಿದೆ” ಎಂದರು. ಮಾತು ಮುಂದುವರೆಸಿದ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಅಶ್ವಿನ್, "ನನಗೆ ಆಶ್ಚರ್ಯವಾಗಿದೆ ಎಂದು ಹೇಳಲು ಕಾರಣವಿದೆ. ಹೀಗೆ ಮಾಡಿದರೆ ಒಳ್ಳೆಯ ಅಥವಾ ಕೆಟ್ಟ ಫಲಿತಾಂಶಗಳು ಬರಬಹುದು. ಅದಕ್ಕಾಗಿಯೇ ನಾವು ಸ್ವಲ್ಪ ಸಮತೋಲನದಿಂದ ಆಡಬೇಕಾಗಿದೆ” ಎಂದರು.  


ಅಶ್ವಿನ್, “ನಮ್ಮ ತಂಡ ಬೌಲಿಂಗ್ ಮಾಡುತ್ತಿದ್ದು, ಚೆಂಡನ್ನು ಬದಲಾಯಿಸಲು ನಾವು ಹೇಳಲಿಲ್ಲ, ಆದರೆ ಅಂಪೈರ್‌’ಗಳು ತಾವಾಗಿಯೇ ಚೆಂಡನ್ನು ಬದಲಾಯಿಸಿದರು. ನಾನು ಅಂಪೈರ್‌’ಗೆ ಕೇಳಿದಾಗ, ಅವರು ಹಾಗೆ ಮಾಡಬಹುದು ಎಂದರು. ಅದಕ್ಕೆ ನಾನು ಅಂದುಕೊಂಡೆ, ಇಬ್ಬನಿ ಇದ್ದಾಗಲೆಲ್ಲಾ ಬಾಲ್’ನ್ನು ಬದಲಾಯಿಸಬಹುದೇನೋ ಎಂದು. ಆದರೆ, ನೀವು ಏನು ಮಾಡಲು ಬಯಸುತ್ತೀರೋ ಅದನ್ನು ನೀವು ಮಾಡಬಹುದು. ಆದರೆ ನೀವು ಮಾನದಂಡವನ್ನು ತಿಳಿಸುವುದು ಮತ್ತು ಅರಿತುಕೊಳ್ಳುವುದು ಸೂಕ್ತ” ಎಂದು ಕಟುವಾಗಿ ನುಡಿದಿದ್ದಾರೆ.


ಇದನ್ನೂ ಓದಿ: ವಿರಾಟ್-ರೋಹಿತ್ ಹಿಂದಿಕ್ಕಿ ಇತಿಹಾಸ ಬರೆದ MS Dhoni: ಯಾರಿಂದಲೂ ಟಚ್ ಮಾಡೋಕಾಗಲ್ಲ ಅನ್ಸುತ್ತೆ ಈ ದಾಖಲೆ!


ರಾಜಸ್ಥಾನ ರಾಯಲ್ಸ್‌’ನ ಸ್ಪಿನ್ನರ್ ಅಶ್ವಿನ್, ತಮ್ಮ ಆಟವನ್ನು ಪೂರ್ಣವಾಗಿ ಆನಂದಿಸುತ್ತಿದ್ದಾರೆ ಎಂದು ಹೇಳಿದರು. “ನಾನು ಬೌಲಿಂಗ್ ಮಾಡುವ ವಿಧಾನವನ್ನು ಸಂಪೂರ್ಣವಾಗಿ ಆನಂದಿಸುತ್ತಿದ್ದೇನೆ. ಯಾವುದರ ಬಗ್ಗೆಯೂ ಹೆಚ್ಚು ಯೋಚಿಸುವುದಿಲ್ಲ. ಪಂದ್ಯದ ವಿವಿಧ ಹಂತಗಳಲ್ಲಿ ಬೌಲಿಂಗ್ ಮಾಡುವ ನನ್ನಂತಹ ಆಟಗಾರನು ವಿವಿಧ ವೇಗಗಳಲ್ಲಿ ಮತ್ತು ವಿಭಿನ್ನ ದಿಕ್ಕುಗಳಲ್ಲಿ ಬೌಲ್ ಮಾಡಲು ಸಿದ್ಧರಾಗಿರಬೇಕು” ಎಂದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.