IPL 2023, Virat Kohli Statement on RCB Match: ಐಪಿಎಲ್‌ ನಲ್ಲಿ ಬುಧವಾರ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ 21 ರನ್‌ ಗಳ ಸೋಲಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ ಸಿ ಬಿ) ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಆಟಗಾರರು ಮೈದಾನದಲ್ಲಿ ಸಾಕಷ್ಟು ತಪ್ಪುಗಳನ್ನು ಎಸಗಿದ್ದಾರೆ ಮತ್ತು ಎದುರಾಳಿ ತಂಡಕ್ಕೆ ಗೆಲುವನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬುದಾಗಿ ಹೇಳಿಕೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Mangal Gochar 2023: ಈ ರಾಶಿಯವರ ಭಾಗ್ಯದ ಬಾಗಿಲು ತೆರೆದ ಮಂಗಳ: ಮುಂದಿನ 45 ದಿನ ಹೆಜ್ಜೆ ಹೆಜ್ಜೆಗೂ ಜಯ; ದಿಢೀರ್ ಧನಲಾಭ


ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನೀಡಿದ್ದ 201 ರನ್‌ ಗಳ ಗುರಿಯನ್ನು ಬೆನ್ನಟ್ಟಿದ ಆರ್‌ ಸಿ ಬಿ ತಂಡ ಕೊಹ್ಲಿ (37 ಎಸೆತಗಳಲ್ಲಿ 54 ರನ್, 6 ಬೌಂಡರಿ) ಅರ್ಧಶತಕದ ಹೊರತಾಗಿ ಎಂಟು ವಿಕೆಟ್‌ ನಷ್ಟಕ್ಕೆ ಕೇವಲ 179 ರನ್ ಗಳಿಸಲಷ್ಟೇ ಶಕ್ತವಾಯಿತು. ಇವರಲ್ಲದೆ ಮಹಿಪಾಲ್ ಲೊಮ್ರೋರ್ (34) ಮತ್ತು ದಿನೇಶ್ ಕಾರ್ತಿಕ್ (22) ಮಾತ್ರ 20 ರನ್ ಗಡಿ ದಾಟಲು ಸಾಧ್ಯವಾಯಿತು.


ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್), ಲೆಗ್ ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ (3/27) ಮತ್ತು ಸುಯಶ್ ಶರ್ಮಾ (2/30) ಒಟ್ಟಾರೆಯಾಗಿ ಐದು ವಿಕೆಟ್ ಗಳನ್ನು ಕಬಳಿಸಿದ್ದಾರೆ. ಆಂಡ್ರೆ ರಸೆಲ್ (29ಕ್ಕೆ 2) ಎರಡು ವಿಕೆಟ್ ಪಡೆದಿದ್ದಾರೆ. ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಬ್ಯಾಟಿಂಗ್ ವಿಚಾರ ಮಾತನಾಡುವುದಾದರೆ,  ಜೇಸನ್ ರಾಯ್ (29 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 4 ಬೌಂಡರಿ ಒಳಗೊಂಡಂತೆ 56 ರನ್) ಮತ್ತು ನಾಯಕ ನಿತೀಶ್ ರಾಣಾ (21 ಎಸೆತಗಳಲ್ಲಿ 4 ಸಿಕ್ಸರ್, 3 ಬೌಂಡರಿ ಒಳಗೊಂಡಂತೆ 48 ರನ್) ಅವರ ಅರ್ಧಶತಕದಿಂದ ಐದು ವಿಕೆಟ್‌ ನಷ್ಟಕ್ಕೆ 200 ರನ್ ಗಳಿಸಿತ್ತು.


ಇನ್ನು ಪಂದ್ಯದ ನಂತರ ಮಾತನಾಡಿದ ಕೊಹ್ಲಿ, “ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾವು ಅವರಿಗೆ ಪಂದ್ಯವನ್ನು ಉಡುಗೊರೆಯಾಗಿ ನೀಡಿದ್ದೇವೆ. ನಾವು ಸೋಲಲು ಅರ್ಹರು. ನಾವು ಸಾಕಷ್ಟು ವೃತ್ತಿಪರವಾಗಿ ಆಡಲಿಲ್ಲ. ಉತ್ತಮವಾಗಿ ಬೌಲಿಂಗ್ ಮಾಡಿದ್ದೇವೆ ಆದರೆ ಫೀಲ್ಡಿಂಗ್ ಗುಣಮಟ್ಟದಿಂದ ಕೂಡಿರಲಿಲ್ಲ. ಒಟ್ಟಾರೆಯಾಗಿ ಎದುರಾಳಿ ತಂಡಕ್ಕೆ ಈ ಗೆಲುವನ್ನು ಉಚಿತ ಉಡುಗೊರೆಯಂತೆ ನೀಡಿದ್ದೇವೆ. RCB ಫೀಲ್ಡರ್‌ಗಳು ನೈಟ್ ರೈಡರ್ಸ್ ನಾಯಕ ರಾಣಾಗೆ ಎರಡು ಲೈಫ್ ಲೈನ್ ನೀಡಿದರು. ರಾಯ್ ಕ್ಯಾಚ್ ಅನ್ನು ಕೂಡ ಕೈಬಿಟ್ಟರು” ಎಂದು ಅಸಮಾಧಾನ ಹೊರಹಾಕಿದ್ದಾರೆ.


ಇದನ್ನೂ ಓದಿ:  Hair Care: ಮೊಟ್ಟೆ ಜೊತೆ 2 ಚಮಚ ಈ ಎಣ್ಣೆಯನ್ನು ಮಿಕ್ಸ್ ಮಾಡಿ ತಲೆಗೆ ಹಚ್ಚಿ: ತಕ್ಷಣವೇ ಕೂದಲು ಆಗುತ್ತೆ ಶೈನ್!


“ಮೈದಾನದಲ್ಲಿ ಎರಡು ಅವಕಾಶಗಳನ್ನು ಕಳೆದುಕೊಂಡಿದ್ದೇವೆ, ಆದ್ದರಿಂದ 25 ರಿಂದ 30 ರನ್‌ ಗಳನ್ನು ವ್ಯರ್ಥವಾಯ್ತು ಎಂದು ಕೊಹ್ಲಿ ಹೇಳಿದ್ದಾರೆ. ಬ್ಯಾಟಿಂಗ್ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ನಂತರ ನಾವು ನಾಲ್ಕೈದು ವಿಕೆಟ್‌ ಗಳನ್ನು ಸುಲಭವಾಗಿ ಕಳೆದುಕೊಳ್ಳಬೇಕಾಯಿತು. ಆ ವಿಕೆಟ್ ಗಳು ಔಟ್ ಆಗುವಂತಹದ ಬಾಲ್ ಆಗಿರಲಿಲ್ಲ. ಆದರೂ ಪೆವಿಲಿಯನ್ ಸೇರುವಂತಾಯಿತು. ಇನ್ನು ಉತ್ತಮ ಪಾರ್ಟ್’ನರ್ಶಿಪ್ ಕೂಡ ಪಡೆಯಲು ಸಾಧ್ಯವಾಗಲಿಲ್ಲ” ಎಂದು ಕೋಪದಿಂದ ಮಾತನಾಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.