RCB ತ್ರಿಮೂರ್ತಿಗಳ ‘ರಾಯಲ್’ ಅರ್ಧಶತಕದಾಟ: IPL ಇತಿಹಾಸದಲ್ಲಿ ಯಾರೂ ನಿರ್ಮಿಸದ ದಾಖಲೆ ಬರೆದ ಬೆಂಗಳೂರು
RCB vs LSG: ಕ್ರೀಸ್’ಗೆ ಬಂದ ಮೂವರು ಆಟಗಾರರು ಭರ್ಜರಿ ಆಟವಾಡಿದ್ದಾರೆ. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್’ವೆಲ್ ಮತ್ತು ಫಾಫ್ ಡು ಪ್ಲೆಸಿಸ್ ಮೂವರೂ ಸಹ 50ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಸಿಕ್ಸ್, ಫೋರ್’ಗಳ ಅಬ್ಬರಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ನಡುಗಿದೆ. ಅಷ್ಟೇ ಅಲ್ಲ ಕೇವಲ 48 ಎಸೆತಕ್ಕೆ 108 ರನ್’ಗಳ ಭರ್ಜರಿ ಜೊತೆಯಾಟವನ್ನು ಮ್ಯಾಕ್ಸ್’ವೆಲ್ ಮತ್ತು ಡು ಪ್ಲೆಸಿಸ್ ಆಡಿದ್ದಾರೆ.
RCB vs LSG, IPL 2023: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಖ್ನೋ ಸೂಪರ್ ಜೈಂಟ್ಸ್ ನಡುವೆ ಬಿರುಸಿನ ಪೈಪೋಟಿ ನಡೆಯುತ್ತಿದೆ. ಟಾಸ್ ಗೆದ್ದ ಲಕ್ನೋ ಮೊದಲು ಬ್ಯಾಟಿಂಗ್ ಮಾಡಲು ಬೆಂಗಳೂರು ತಂಡವನ್ನು ಆಹ್ವಾನಿಸಿತು. ಆದರೆ ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದೇ ತಡ ಬ್ಯಾಟಿಂಗ್ ಮೂಲಕ ಎದುರಾಳಿಯನ್ನು ಚಚ್ಚಲು ಮುಂದಾಯಿತು ಆರ್ ಸಿ ಬಿ.
ಇದನ್ನೂ ಓದಿ: Poor Look of Billionaires: ಅಂಬಾನಿ, ಟ್ರಂಪ್, ಬಿಲ್ ಗೇಟ್ಸ್ ಕಡುಬಡವರಾಗಿದ್ರೆ ಹೇಗೆ ಕಾಣಿಸ್ಬೋದು? ಈ ಫೋಟೋಸ್ ನೋಡಿ
ಕ್ರೀಸ್’ಗೆ ಬಂದ ಮೂವರು ಆಟಗಾರರು ಭರ್ಜರಿ ಆಟವಾಡಿದ್ದಾರೆ. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್’ವೆಲ್ ಮತ್ತು ಫಾಫ್ ಡು ಪ್ಲೆಸಿಸ್ ಮೂವರೂ ಸಹ 50ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಸಿಕ್ಸ್, ಫೋರ್’ಗಳ ಅಬ್ಬರಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ನಡುಗಿದೆ. ಅಷ್ಟೇ ಅಲ್ಲ ಕೇವಲ 48 ಎಸೆತಕ್ಕೆ 108 ರನ್’ಗಳ ಭರ್ಜರಿ ಜೊತೆಯಾಟವನ್ನು ಮ್ಯಾಕ್ಸ್’ವೆಲ್ ಮತ್ತು ಡು ಪ್ಲೆಸಿಸ್ ಆಡಿದ್ದಾರೆ.
ಈ ಪಂದ್ಯದಲ್ಲಿ 12 ಫೋರ್ ಮತ್ತು 15 ಸಿಕ್ಸರ್’ಗಳನ್ನು ಈ ಮೂವರು ಆಟಗಾರರು ಬಾರಿಸಿದ್ದಾರೆ. ಬೆಂಗಳೂರು ಪರ ಬ್ಯಾಟ್ ಬೀಸಿದ ವಿರಾಟ್ ಕೊಹ್ಲಿ 44 ಎಸೆತಕ್ಕೆ 61 ರನ್, ಗ್ಲೈನ್ ಮ್ಯಾಕ್ಸ್ ವೆಲ್ 29 ಎಸೆತಕ್ಕೆ 59 ರನ್, ಫಾಫ್ ಡುಪ್ಲೆಸಿಸ್ 46 ಎಸೆತಕ್ಕೆ 79 ರನ್ ಮತ್ತು ದಿನೇಶ್ ಕಾರ್ತಿಕ್ 1 ಎಸೆತದಲ್ಲಿ 1 ರನ್ ಕಲೆ ಹಾಕಿದ್ದಾರೆ. ಒಟ್ಟಾರೆಯಾಗಿ 20 ಓವರ್’ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡ ಆರ್ ಸಿ ಬಿ 212 ರನ್ ಕಲೆ ಹಾಕಿದೆ.
ಐಪಿಎಲ್’ನಲ್ಲಿ ಕೊಹ್ಲಿಯ ಎರಡನೇ ಅರ್ಧಶತಕ:
.ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕೊಹ್ಲಿ 44 ಎಸೆತಗಳಲ್ಲಿ 61 ರನ್ ಗಳಿಸಿದ್ದಾರೆ. ಈ ಬಾರಿಯ ಐಪಿಎಲ್’ನಲ್ಲಿ ಇದು ಅವರ ಎರಡನೇ ಅರ್ಧಶತಕವಾಗಿದೆ. ಈ ಇನ್ನಿಂಗ್ಸ್’ನಲ್ಲಿ ಕೊಹ್ಲಿ 4 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಆದರೆ, ಅಮಿತ್ ಮಿಶ್ರಾ ಎಸೆತದಲ್ಲಿ ಸ್ಟೊಯಿನಿಸ್’ಗೆ ಕ್ಯಾಚಿತ್ತು ಔಟಾದರು. ಈ ಋತುವಿನ ಮೊದಲ ಪಂದ್ಯದಿಂದಲೂ ಕೊಹ್ಲಿ ಉತ್ತಮ ಫಾರ್ಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ತಂಡದ ಮೊದಲ ಪಂದ್ಯದಲ್ಲಿ ಅವರು 82 ರನ್‌ಗಳ ಅಜೇಯ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದರು.
ಇದನ್ನೂ ಓದಿ: Relationship Tips: ದೈಹಿಕ ಸಂಬಂಧ ಬೆಳೆಸುವಾಗ ಪುರುಷರು ಈ ಕೆಲಸಗಳನ್ನು ಮಾಡಲೇಬಾರದು…!
ಸದ್ಯ ಫೀಲ್ಡಿಂಗ್ ನಡೆಸುತ್ತಿರುವ ಬೆಂಗಳೂರು, ಲೀಗ್’ನ ಪ್ರಮುಖ ಪಂದ್ಯವನ್ನು ಗೆಲ್ಲುತ್ತಾ ಎಂದು ಕಾದುನೋಡಬೇಕಿದೆ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.