RCB vs KKR: ಕೊಲ್ಕತ್ತಾದ ಈಡನ್ ಗಾರ್ಡನ್’ನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ 81 ರನ್’ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದ ಬೆಂಗಳೂರು ಮೊದಲು ಫೀಲ್ಡಿಂಗ್ ಆಯ್ದುಕೊಂಡು ಕೊಲ್ಕತ್ತಾವನ್ನು ಬ್ಯಾಟಿಂಗ್’ಗೆ ಆಹ್ವಾನಿಸಿತು. ಓವರ್ ಮುಕ್ತಾಯದ ವೇಳೆ 7 ವಿಕೆಟ್ ನಷ್ಟಕ್ಕೆ 204 ರನ್ ಕಲೆಹಾಕಿತು ಕೆಕೆಆರ್.


COMMERCIAL BREAK
SCROLL TO CONTINUE READING

ಇದನ್ನೂ ಓದಿ: KKR vs RCB ಟಾಸಿಂಗ್ ವೇಳೆ ನಡೆಯಿತೇ ಮೋಸ? ರೆಫ್ರಿ ನಿರ್ಧಾರಕ್ಕೆ ಕೋಪಗೊಂಡ KKR ನಿತೀಶ್ ರಾಣಾ ಮೈದಾನದಲ್ಲಿ ಮಾಡಿದ್ದೇನು!


ಇನ್ನು ಬೃಹತ್ ಗುರಿ ಬೆನ್ನತ್ತಿದ್ದ ಆರ್ ಸಿ ಬಿ, 17.4 ಓವರ್ ವೇಳೆಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 123 ರನ್ ಕಲೆ ಹಾಕಲಷ್ಟೇ ಶಕ್ತವಾಯಿತು. ಈ ಮೂಲಕ ಕೊಲ್ಕತ್ತಾ ವಿರುದ್ಧ ಬೆಂಗಳೂರು ಹೀನಾಯ ಸೋಲು ಕಂಡಿತು.


ಕೆಕೆಆರ್ ಪರ ಆರ್ ಗುರ್ಬಜ್ 57 (44), ಆರ್ ಸಿಂಗ್ 46 (33), ಶಾರ್ದೂಲ್ ಠಾಕೂರ್ 68 (29) ಭರ್ಜರಿ ಪ್ರದರ್ಶನ ನೀಡಿದರು. ಶಾರ್ದೂಲ್ ಠಾಕೂರ್ ಕೇವಲ 29 ಎಸೆತಗಳಲ್ಲಿ 68 ರನ್ ಕಲೆ ಹಾಕಿದ್ದಾರೆ. ಮತ್ತೊಂದೆಡೆ ಬೌಲಿಂಗ್’ನಲ್ಲಿ ಕೂಡ ಸುಯೇಶ್ ಶರ್ಮಾ 3, ವಿ ಚಕ್ರವರ್ತಿ  4, ಸುನಿಲ್ ನರೈನ್ 2, ಶಾರ್ದೂಲ್ ಠಾಕೂರ್ 1 ವಿಕೆಟ್ ಕಬಳಿಸಿದ್ದಾರೆ.


ಎರಡೂ ತಂಡಗಳ ಪ್ಲೇಯಿಂಗ್-XI


ಕೋಲ್ಕತ್ತಾ ನೈಟ್ ರೈಡರ್ಸ್: ಮನದೀಪ್ ಸಿಂಗ್, ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ಟಿಮ್ ಸೌಥಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ


ಇದನ್ನೂ ಓದಿ:  ಪಂದ್ಯಕ್ಕೂ ಮುನ್ನ ಪುಟ್ಟ ಅಭಿಮಾನಿಗೆ ಆಟೋಗ್ರಾಫ್ ಕೊಟ್ಟ Virat Kohli: ಆ ಕಂದಮ್ಮನ ಖುಷಿಯನ್ನೊಮ್ಮೆ ನೋಡಿ


ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೈಕಲ್ ಬ್ರೇಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಡೇವಿಡ್ ವಿಲ್ಲಿ, ಹರ್ಷಲ್ ಪಟೇಲ್, ಆಕಾಶ್ ದೀಪ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.