RR vs PBKS, IPL 2023: ಮೂರು ಐಪಿಎಲ್ ದಾಖಲೆಗಳು ಉಡೀಸ್
ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಣ ನಡೆದ ಐಪಿಎಲ್ 2023 ರ ಟೂರ್ನಿಯ ಪಂದ್ಯ ರೋಚಕವಾಗಿತ್ತು,ಅಂತಿಮವಾಗಿ ಪಂಜಾಬ್ ತಂಡವು ಐದು ರನ್ ಗಳ ಅಂತರದಿಂದ ರೋಚಕ ಗೆಲುವನ್ನು ಸಾಧಿಸಿತು.
ನವದೆಹಲಿ: ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಣ ನಡೆದ ಐಪಿಎಲ್ 2023 ರ ಟೂರ್ನಿಯ ಪಂದ್ಯ ರೋಚಕವಾಗಿತ್ತು, ಆದರೆ ಅಂತಿಮವಾಗಿ ಪಂಜಾಬ್ ತಂಡವು ಐದು ರನ್ ಗಳ ಅಂತರದಿಂದ ರೋಚಕ ಗೆಲುವನ್ನು ಸಾಧಿಸಿತು.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ರಾಜಸ್ತಾನ ರಾಯಲ್ಸ್ ತಂಡವು ಪಂಜಾಬ್ ತಂಡವನ್ನು ಕನಿಷ್ಠ ಮೊತ್ತಕ್ಕೆ ಕಟ್ಟಿ ಹಾಕಲು ವಿಫಲವಾಯಿತು.ಪಂಜಾಬ್ ತಂಡದ ಪರವಾಗಿ ಶಿಖರ್ ಧವನ್ (86) ಹಾಗೂ ಪ್ರಭ್ಸಿಮ್ರಾನ್ (60) ಅವರ ಭರ್ಜರಿ ಬ್ಯಾಟಿಂಗ್ ನಿಂದಾಗಿ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 197 ರನ್ ಗಳ ಬೃಹತ್ ಮೊತ್ತವನ್ನು ದಾಖಲಿಸಿತು.ಇನ್ನೊಂದೆಡೆ ಪಂಜಾಬ್ ತಂಡವು ನೀಡಿದ 198 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ರಾಜಸ್ತಾನ ರಾಯಲ್ಸ್ ತಂಡವು ಅಂತಿಮವಾಗಿ ಏಳು ವಿಕೆಟ್ ನಷ್ಟಕ್ಕೆ 192 ಗಳಿಸಲಷ್ಟೇ ಶಕ್ತವಾಯಿತು.ರಾಷ್ಟ್ರಪತಿಯಿಂದ ಎಸ್,ಎಲ್ ಭೈರಪ್ಪ, ಸುಧಾಮೂರ್ತಿ ಗೆ ಪದ್ಮಭೂಷಣ ಪ್ರಧಾನ
2) ಡೇವಿಡ್ ವಾರ್ನರ್ ಅವರ ದಾಖಲೆಯನ್ನು ಮುರಿದ ಶಿಖರ್ ಧವನ್
ನಿನ್ನೆಯ ಪಂದ್ಯದ ಮೊದಲು, ಶಿಖರ್ ಧವನ್ ಮತ್ತು ಡೇವಿಡ್ ವಾರ್ನರ್ ಜಂಟಿಯಾಗಿ ಎಡಗೈ ಬ್ಯಾಟ್ಸ್ಮನ್ ಗಳಲ್ಲಿ ಅರ್ಧಶತಕದೊಂದಿಗೆ ಹೆಚ್ಚಿನ ಐಪಿಎಲ್ ಸೀಸನ್‌ಗಳ ದಾಖಲೆಯನ್ನು ಹೊಂದಿದ್ದರು.ಇಬ್ಬರೂ ತಲಾ 14 ಸೀಸನ್‌ಗಳಲ್ಲಿ ಅರ್ಧಶತಕ ಸಿಡಿಸಿದ್ದರು.ಈಗ ಶಿಖರ್ ಧವನ್ 15 ಐಪಿಎಲ್ ನ ಸೀಸನ್ ನಲ್ಲಿ ಅರ್ಧಶತಕ ಸಿಡಿಸಿದ ಎಡಗೈ ಬ್ಯಾಟ್ಸಮನ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.15 ವಿಭಿನ್ನ ಋತುಗಳಲ್ಲಿಈ ಸಾಧನೆ ಮಾಡಿದ ಏಕೈಕ ಬ್ಯಾಟ್ಸಮನ್ ಎನ್ನುವ ಹೆಗ್ಗಳಿಕೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ .
ಇದನ್ನೂ ಓದಿ: ಕಾಂಗ್ರೆಸ್ ಗೆ ಕಪ್ಪುಹಣ ಹೊರಗೆ ಬರುತ್ತದೆ ಎನ್ನುವ ಭಯವಿದೆ: ಸಿಎಂ ಬೊಮ್ಮಾಯಿ
3) ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿದ ಶಿಖರ್ ಧವನ್
ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಶಿಖರ್ ಧವನ್ ತಮ್ಮ 50ನೇ ಐವತ್ತಕ್ಕೂ ಅಧಿಕ ಸ್ಕೋರ್ ದಾಖಲಿಸಿದರು. ಅವರು ತಮ್ಮ 207ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆಯನ್ನು ಮಾಡಿದರು,ಆ ಮೂಲಕ ಈ ಸಾಧನೆ ಮಾಡಿದ ವೇಗದ ಭಾರತೀಯ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ಎನ್ನುವ ಹೆಗ್ಗಳಿಕೆ ವಿರಾಟ್ ಕೊಹ್ಲಿಅವರ ಹೆಸರಿನಲ್ಲಿದೆ.ಅವರು 216 ಇನ್ನಿಂಗ್ಸ್‌ಗಳಲ್ಲಿ ತಮ್ಮ 50ನೇ ಐವತ್ತಕ್ಕೂ ಅಧಿಕ ಸ್ಕೋರ್‌ಗಳನ್ನು ದಾಖಲಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.