IPL 2023 : ಐಪಿಎಲ್ ಪ್ರೇಮಿಗಳಿಗೊಂದು ಶಾಕಿಂಗ್ ಸುದ್ದಿ.  IPL 2023ರ ಟೂರ್ನಮೆಂಟ್ ನಿಂದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅರ್ಧದಿಂದಲೇ ನಿರ್ಗಮಿಸಬಹುದು ಎನ್ನಲಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ನ ಅಂತಿಮ ಪಂದ್ಯವು ಜೂನ್ 7 ರಿಂದ ಜೂನ್ 11 ರವರೆಗೆ ಇಂಗ್ಲೆಂಡ್‌ನ ಕೆನ್ನಿಂಗ್ಟನ್ ಓವಲ್ (ಲಂಡನ್) ಮೈದಾನದಲ್ಲಿ ನಡೆಯಲಿದೆ.  ಇದಕ್ಕಾಗಿ ಶಿವಸುಂದರ್ ದಾಸ್ ನೇತೃತ್ವದ ಆಯ್ಕೆ ಸಮಿತಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ಗೆ ಭಾರತ ತಂಡದ ಆಯ್ಕೆಯನ್ನು ಶೀಘ್ರವೇ ಮಾಡಲಿದೆ. 


COMMERCIAL BREAK
SCROLL TO CONTINUE READING

ಅರ್ಧದಲ್ಲಿಯೇ ನಿರ್ಗಮಿಸಲಿರುವ ರೋಹಿತ್ ಮತ್ತು ವಿರಾಟ್  :
ಟೀಂ ಇಂಡಿಯಾದ ಕೆಲವು ಟೆಸ್ಟ್ ಕ್ರಿಕೆಟಿಗರೊಂದಿಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮೇ 23 ಅಥವಾ 24 ರಂದು ಲಂಡನ್‌ಗೆ ತೆರಳಲಿದ್ದಾರೆ. ಬಿಸಿಸಿಐ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ,   'ರಾಹುಲ್ ದ್ರಾವಿಡ್ ಮೇ ಕೊನೆಯ ವಾರದಲ್ಲಿ ಅಂದರೆ ಮೇ 23 ಅಥವಾ 24 ಕ್ಕೆ  ಲಂಡನ್‌ಗೆ ತೆರಳಲಿದ್ದಾರೆ. ಕೆಲವು ಟೆಸ್ಟ್ ಕ್ರಿಕೆಟಿಗರು ತಮ್ಮ IPL ತಂಡದ ಬದ್ಧತೆಗಳನ್ನು ಪೂರ್ಣಗೊಳಿಸಿದ ನಂತರ ಲಂಡನ್ ಗೆ ತೆರಳಲಿದ್ದಾರೆ. ಕೆಲವು ಟೆಸ್ಟ್ ಕ್ರಿಕೆಟಿಗರು ತಮ್ಮ ಐಪಿಎಲ್ ಅಭಿಯಾನ ಮುಗಿಯುತ್ತಿದ್ದಂತೆ ದ್ರಾವಿಡ್ ಜೊತೆ ಹೋಗುತ್ತಾರೆ. ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಐಪಿಎಲ್ 2023 ರ ಪ್ಲೇಆಫ್ ತಲುಪದಿದ್ದರೆ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಹೆಸರು ಕೂಡಾ ಈ ಪಟ್ಟಿ ಸೇರಲಿದೆ. 


ಇದನ್ನೂ ಓದಿ : RCB: ಫಾಫ್ ಸಿಕ್ಸ್’ಗೆ ಸ್ಟೇಡಿಯಂನಿಂದ ಹೊರಬಿತ್ತು ಬಾಲ್: 115 ಮೀ ಉದ್ದದ ಸಿಕ್ಸ್ ಕಂಡು ವಿರಾಟ್ ಮಾಡಿದ್ದೇನು ಗೊತ್ತಾ?


ಅಜಿಂಕ್ಯ ರಹಾನೆಗೆ ಸುವರ್ಣಾವಕಾಶ :  
ಡ್ಯಾಶಿಂಗ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದು ಟೀಮ್ ಇಂಡಿಯಾ ಸಂಕಷ್ಟವನ್ನು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಅಜಿಂಕ್ಯ ರಹಾನೆ ಸ್ಥಾನ ಪಡೆಯುವ ಸಾಧ್ಯತೆ ಇದೆ. ಸೂರ್ಯಕುಮಾರ್ ಯಾದವ್ ಗೆ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಆಡಲು ಸಾಕಷ್ಟು ಅನುಭವವಿಲ್ಲದ ಕಾರಣ, ಆಯ್ಕೆದಾರರು WTC ಫೈನಲ್‌ಗೆ ಅಜಿಂಕ್ಯ ರಹಾನೆಗೆ ಅವಕಾಶ ನೀಡಬಹುದು. ಕೆಎಲ್ ರಾಹುಲ್ ರೋಹಿತ್ ಶರ್ಮಾ ಜೊತೆ  ಓಪನಿಂಗ್ ಮಾಡಲು ಸಿದ್ಧತೆ  ನಡೆಸಿದ್ದಾರೆ.  ಮಧ್ಯಮ ಕ್ರಮಾಂಕದಲ್ಲಿ ಶುಭಮಾನ್ ಗಿಲ್ ಫೀಲ್ಡಿಗೆ ಇಳಿಯಬೇಕಾಗುತ್ತದೆ. ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ಅಲ್ಲದೆ ಶಾರ್ದೂಲ್ ಠಾಕೂರ್ ಕೂಡ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.  


ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಭಾರತದ 16 ಸದಸ್ಯರ ತಂಡ ಹೀಗಿರಬಹುದು : 
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕೆಎಸ್ ಭರತ್, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಜಯದೇವ್ ಉನದ್ದ್ವತ್ . 


ಇದನ್ನೂ ಓದಿ : RCB ತ್ರಿಮೂರ್ತಿಗಳ ‘ರಾಯಲ್’ ಅರ್ಧಶತಕದಾಟ: IPL ಇತಿಹಾಸದಲ್ಲಿ ಯಾರೂ ನಿರ್ಮಿಸದ ದಾಖಲೆ ಬರೆದ ಬೆಂಗಳೂರು


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.