Team India Cricketers: ಐಪಿಎಲ್ 2023ರ ಸ್ಫೋಟಕ ಸೀಸನ್ ಮುಗಿದಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐದನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಗೆದ್ದಿಕೊಂಡಿದೆ. ಆದರೆ ಐಪಿಎಲ್ 2023 ರ ಋತುವಿನ ಅಂತ್ಯದೊಂದಿಗೆ, ಟೀಮ್ ಇಂಡಿಯಾದ 3 ಕ್ರಿಕೆಟಿಗರ ಐಪಿಎಲ್ ವೃತ್ತಿಜೀವನವು ಬಹುತೇಕ ಮುಗಿದಿದೆ ಎಂದು ಪರಿಗಣಿಸಲಾಗಿದೆ. ಈ ಸೀಸನ್ ನಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣ 3 ಆಟಗಾರರನ್ನು ಯಾವುದೇ ತಂಡವು ಮತ್ತೊಮ್ಮೆ ಖರೀದಿಸಲು ಅಥವಾ ತನ್ನ ತಂಡದಲ್ಲೇ ಉಳಿಸಿಕೊಳ್ಳಲು ಹಿಂದೇಟು ಹಾಕುವ ಸಾಧ್ಯತೆ ಇದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Kichcha Sudeepa: ಕಿಚ್ಚ ಸುದೀಪ್ ಮುಂದಿನ Bigboss ಸೀಸನ್ ನಲ್ಲಿ ನಿರೂಪಣೆ ಮಾಡ್ತಾರಾ?


ಮನೀಶ್ ಪಾಂಡೆ


ಅಂತರಾಷ್ಟ್ರೀಯ ಕ್ರಿಕೆಟ್‌ ನಂತೆ ಮನೀಶ್ ಪಾಂಡೆ ಅವರ ಐಪಿಎಲ್ ವೃತ್ತಿಜೀವನವೂ ಕೊನೆಗೊಳ್ಳುವ ಹಂತ ತಲುಪಿದೆ. ಐಪಿಎಲ್ 2023 ರಲ್ಲಿ, ಮನೀಶ್ ಪಾಂಡೆ 10 ಪಂದ್ಯಗಳಲ್ಲಿ 17.78 ರ ಅತ್ಯಂತ ಕಳಪೆ ಸರಾಸರಿಯಲ್ಲಿ ಕೇವಲ 160 ರನ್ ಗಳಿಸಲು ಸಾಧ್ಯವಾಯಿತು. ಪಾಂಡೆ ತಂಡದಲ್ಲಿದ್ದರೂ, ಇಲ್ಲದಿದ್ದರೂ ದೆಹಲಿ ಕ್ಯಾಪಿಟಲ್ಸ್‌ಗೆ  ಯಾವುದೇ ಪ್ರಯೋಜನ ಕಂಡುಬಂದಿರಲಿಲ್ಲ. ಬಹುಶಃ ಈ ವರ್ಷ ಅವರು ತಮ್ಮ ಕೊನೆಯ ಐಪಿಎಲ್ ಋತುವನ್ನು ಆಡಿದ್ದಾರೆ ಎನ್ನಲಾಗುತ್ತಿದೆ.


ಮನ್ದೀಪ್ ಸಿಂಗ್:


ಮಂದೀಪ್ ಸಿಂಗ್ ಐಪಿಎಲ್ 2023 ರಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಬ್ಯಾಟ್ಸ್‌ಮನ್. ಐಪಿಎಲ್ 2023 ರಲ್ಲಿ, ಮನ್‌ದೀಪ್ ಸಿಂಗ್ 3 ಪಂದ್ಯಗಳಲ್ಲಿ 4.67 ರ ಅತ್ಯಂತ ಕಳಪೆ ಸರಾಸರಿಯಲ್ಲಿ ಕೇವಲ 14 ರನ್ ಗಳಿಸಲು ಸಾಧ್ಯವಾಯಿತು. ಐಪಿಎಲ್ 2023 ರಲ್ಲಿ ಯಾವುದೇ ಬ್ಯಾಟ್ಸ್‌ಮನ್ ಅಷ್ಟು ಕಳಪೆ ಪ್ರದರ್ಶನ ನೀಡಿರಲಿಲ್ಲ. 31ರ ಹರೆಯದ ಈ ಬ್ಯಾಟ್ಸ್‌ ಮನ್ ಗೆ ಐಪಿಎಲ್‌ನಲ್ಲಿ ಸಾಕಷ್ಟು ಅವಕಾಶಗಳು ಬಂದಿದ್ದರೂ ಸಹ, ಅದನ್ನು ಅವರು ಕೆಟ್ಟದಾಗಿ ವ್ಯರ್ಥ ಮಾಡಿದ್ದಾರೆ. ಐಪಿಎಲ್ 2023 ರಲ್ಲಿ ಈ ಫ್ಲಾಪ್ ಶೋ ನಂತರ, ಮಂದೀಪ್ ಸಿಂಗ್ ಅವರ ಐಪಿಎಲ್ ವೃತ್ತಿಜೀವನವು ಈ ಋತುವಿನಲ್ಲಿ ಕೊನೆಗೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: ಕುಂದಾಪುರದ ಕಲರ್ಫುಲ್ ಫಿಶ್ ಮೇಘ ಶೆಟ್ಟಿ ಅತೀ ಶೀಘ್ರದಲ್ಲಿ ನೀಡಲಿದ್ದಾರೆ ಸಿಹಿಸುದ್ದಿ..!


ಮಯಾಂಕ್ ಅಗರ್ವಾಲ್:


ಐಪಿಎಲ್ 2023 ರಲ್ಲಿ ಫ್ಲಾಪ್ ಶೋ ನಂತರ, ಮಯಾಂಕ್ ಅಗರ್ವಾಲ್ ಅವರ ಐಪಿಎಲ್ ವೃತ್ತಿಜೀವನವು ಈ ಋತುವಿನಲ್ಲಿ ಕೊನೆಗೊಳ್ಳುವಂತಿದೆ. ಮಯಾಂಕ್ ಅಗರ್ವಾಲ್ ಅವರ ಕಳಪೆ ಪ್ರದರ್ಶನದಿಂದಾಗಿ ಟೀಂ ಇಂಡಿಯಾದಿಂದ ಈ ಹಿಂದೆ ಅವರನ್ನು ಕೈಬಿಡಲಾಯಿತು. ಅಗರ್ವಾಲ್ ಐಪಿಎಲ್ ನ 10 ಪಂದ್ಯಗಳಲ್ಲಿ 27.00 ರ ಅತ್ಯಂತ ಕಳಪೆ ಸರಾಸರಿಯಲ್ಲಿ ಕೇವಲ 270 ರನ್ ಗಳಿಸಲು ಸಾಧ್ಯವಾಯಿತು. ಇವರು ಈ ಬಾರಿ ಸನ್‌ ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಆಡಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ