Team India: ಐಪಿಎಲ್ 2023 ರ 40 ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಹಣಾಹಣಿ ನಡೆದಿದೆ. ಈ ಸೀಸನ್ ನಲ್ಲಿ ಇದುವರೆಗೆ ಆಡಿದ ಎಲ್ಲಾ ಪಂದ್ಯಗಳಲ್ಲಿ ಸೋತ ಇಬ್ಬರು ಆಟಗಾರರ ಕ್ರಿಕೆಟ್ ಜೀವನ ಕೊನೆಯಾಗುವ ಹಂತಕ್ಕೆ ಬಂದು ನಿಂತಿದೆ.


COMMERCIAL BREAK
SCROLL TO CONTINUE READING

ಈ ಪಂದ್ಯದಲ್ಲಿ ಇಬ್ಬರೂ ಆಟಗಾರರು ತಮ್ಮ ತಮ್ಮ ಫ್ರಾಂಚೈಸಿಗಳನ್ನು ನಿರಾಸೆಗೊಳಿಸಿದ್ದಾರೆ. ಹೀಗಿರುವಾಗ ಅವರ ಅಂತಾರಾಷ್ಟ್ರೀಯ ವೃತ್ತಿಜೀವನದ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ. ಐಪಿಎಲ್‌ ನಲ್ಲಿ ಫ್ಲಾಪ್ ಪ್ರದರ್ಶನದ ನಂತರ ಈ ಆಟಗಾರರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗುವುದು ತುಂಬಾ ಕಷ್ಟ ಎಂದನಿಸುತ್ತದೆ.


ಇದನ್ನೂ ಓದಿ: Rohit Sharma: IPLನಿಂದ ಅರ್ಧಕ್ಕೆ ಹೊರ ಹೋಗುತ್ತಾರಾ ರೋಹಿತ್ ಶರ್ಮಾ! ಕೋಚ್ ಹೇಳಿದ್ದೇನು ಗೊತ್ತಾ?


ಈ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಗಾಗಿ ಆಡುತ್ತಿರುವ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ ಅವರ ವೃತ್ತಿಜೀವನವು ಬಹುತೇಕ ಮುಗಿದಿದೆ. ಕಳೆದ ಹಲವು ವರ್ಷಗಳಿಂದ ಅವರು ಟೀಂ ಇಂಡಿಯಾದಿಂದ ಹೊರಗುಳಿಯುತ್ತಿದ್ದಾರೆ. ಹೀಗಿರುವಾಗ ಈ ಋತುವಿನಲ್ಲಿ ಅವರ ನಿರಂತರ ಫ್ಲಾಪ್ ಪರ್ಫಾರ್ಮೆನ್ಸ್ ಕೂಡ ಟೀಮ್ ಮ್ಯಾನೇಜ್ ಮೆಂಟ್ ಗೆ ದೊಡ್ಡ ತೊಡಕಾಗಿದೆ. ಮನೀಶ್ ಪಾಂಡೆ ಇದುವರೆಗೆ ಆಡಿರುವ 6 ಪಂದ್ಯಗಳಲ್ಲಿ ಕೇವಲ 132 ರನ್ ಗಳಿಸಿದ್ದಾರೆ. ಸರಾಸರಿ 22.00 ಇದ್ದು, ಗರಿಷ್ಠ ಸ್ಕೋರ್ 50 ರನ್. ಆಡಿದ ಈ ಪಂದ್ಯದಲ್ಲಿ ಅವರು ಕೇವಲ 1 ರನ್ ಗಳಿಸಿ ಔಟಾಗಿದ್ದಾರೆ.


ಇನ್ನೊಂದೆಡೆ ಇದೇ ಪಂದ್ಯದಲ್ಲಿ ಸನ್‌ ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಮಯಾಂಕ್ ಅಗರ್ವಾಲ್ ಈ ಋತುವಿನಲ್ಲಿ ತಮ್ಮ ಬ್ಯಾಟಿಂಗ್‌ ನಿಂದ ಎಲ್ಲರನ್ನೂ ನಿರಾಸೆಗೊಳಿಸಿದ್ದಾರೆ. ಈ ಪಂದ್ಯದಲ್ಲಿ ಅವರು ಗಳಿಸಿದ್ದು ಕೇವಲ 5 ರನ್. ಇದುವರೆಗೆ ಆಡಿದ 8 ಪಂದ್ಯಗಳಲ್ಲಿ 169 ರನ್‌ ಗಳು ಅವರ ಬ್ಯಾಟ್‌ನಿಂದ ಹೊರಬಂದಿವೆ. ಸರಾಸರಿ 21.13 ರನ್ ಆಗಿದ್ದು, ಗರಿಷ್ಠ ಸ್ಕೋರ್ 49 ರನ್. ಮಯಾಂಕ್ ಬಹಳ ಸಮಯದಿಂದ ಟೀಮ್ ಇಂಡಿಯಾದಿಂದ ಹೊರಗುಳಿಯುತ್ತಿದ್ದಾರೆ, ಇದೀಗ ಮತ್ತೆ ಈ ಫ್ಲಾಪ್ ಪ್ರದರ್ಶನದೊಂದಿಗೆ ಅವರು ತಂಡಕ್ಕೆ ಮರಳಲು ಸಾಧ್ಯವಾಗುವುದು ಭಾರೀ ಕಷ್ಟ ಎಂದನಿಸುತ್ತದೆ.


ಇದನ್ನೂ ಓದಿ: ಸುಡಾನ್ ಸಮರದಿಂದ ಪೆಪ್ಸಿ-ಕೋಕ್ ಪೂರೈಕೆಗೆ ಅಡಚಣೆ; ನಿತ್ಯೋಪಯೋಗಿ ಉತ್ಪನ್ನಗಳಲ್ಲೂ ಕೊರತೆ!


ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಏಡನ್ ಮಾರ್ಕ್ರಾಮ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ತಂಡ ನಿಗದಿತ 20 ಓವರ್‌ ಗಳಲ್ಲಿ 6 ವಿಕೆಟ್‌ ಗೆ 197 ರನ್ ಗಳಿಸಿತು. ಇದಾದ ಬಳಿಕ ಡೆಲ್ಲಿ ತಂಡ 6 ವಿಕೆಟ್‌ ಗೆ 188 ರನ್ ಗಳಿಸಿ 9 ರನ್‌ ಗಳಿಂದ ಸೋಲನುಭವಿಸಿತು. ಪ್ರಸಕ್ತ ಋತುವಿನಲ್ಲಿ 8 ಪಂದ್ಯಗಳಲ್ಲಿ ದೆಹಲಿಯ ಆರನೇ ಸೋಲು ಇದಾಗಿದೆ. ಮತ್ತೊಂದೆಡೆ ಹೈದರಾಬಾದ್ 8 ಪಂದ್ಯಗಳಲ್ಲಿ ಮೂರನೇ ಗೆಲುವು ದಾಖಲಿಸಿದ್ದು, 6 ಅಂಕಗಳನ್ನು ಹೊಂದಿದೆ. 10 ತಂಡಗಳ ಪಟ್ಟಿಯಲ್ಲಿ ಡೆಲ್ಲಿ ಕೊನೆಯ ಸ್ಥಾನದಲ್ಲಿದೆ. ಹೈದರಾಬಾದ್ ಎರಡು ಸ್ಥಾನ ಮೇಲಿದ್ದು 8ನೇ ಸ್ಥಾನದಲ್ಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ