SRH vs RCB Match big Turning Point: ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಸನ್‌ ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್‌ ಗಳಿಂದ ಸೋಲಿಸಿದೆ. ಮೊದಲ ವಿಕೆಟ್‌ ಗೆ 172 ರನ್‌ಗಳ ಬೃಹತ್ ಜೊತೆಯಾಟವನ್ನು ಆಡಿದ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ಈ ಗೆಲುವಿನ ದೊಡ್ಡ ಹೀರೋಗಳು ಎಂದು ಬಿಂಬಿತರಾದರು.  ಅಷ್ಟೇ ಅಲ್ಲದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಇನ್ನೊಂದು ಪಂದ್ಯವನ್ನು ಗೆದ್ದರೆ ಪ್ಲೇ ಆಫ್‌  ಪ್ರವೇಶ ಪಡೆಯುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಒಂದು ಲಕ್ಷ ಮೌಲ್ಯದ ಫೋನ್ ಅನ್ನು ಕೇವಲ 22 ಸಾವಿರ ರೂ.ಗೆ ಖರೀದಿಸಿ! Samsung ಮೊಬೈಲ್ ಮೇಲೆ ಭಾರೀ ಡಿಸ್ಕೌಂಟ್ 


ಆದರೆ ಅದೊಂದು ಎಸೆತ ಟರ್ನಿಂಗ್ ಪಾಂಯಿಂಟ್ ಥರ ಕೆಲಸ ಮಾಡಿತ್ತು. ಇದಾದ ಬಳಿಕ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡು ಪ್ಲೆಸಿಸ್, ಸನ್‌ ರೈಸರ್ಸ್ ಹೈದರಾಬಾದ್ ಬೌಲರ್‌ ಗಳ ವಿರುದ್ಧ ಸ್ಪೋಟಕ ಬ್ಯಾಟಿಂಗ್ ಮಾಡಿದ್ದರು.


ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನಿಂಗ್ಸ್‌ ನ 9 ನೇ ಓವರ್‌ ನ ಐದನೇ ಎಸೆತದಲ್ಲಿ ನಾಯಕ ಫಾಫ್ ಡು ಪ್ಲೆಸಿಸ್ ದೊಡ್ಡ ಲೈಫ್ ಲೈನ್ ಪಡೆದರು. ಫಾಫ್ 41 ರನ್ ಗಳಿಸಿ ಕ್ರೀಸ್‌ ನಲ್ಲಿದ್ದರು. ಸನ್ ರೈಸರ್ಸ್ ಹೈದರಾಬಾದ್ ತಂಡದ ಬೌಲರ್ ನಿತೀಶ್ ರೆಡ್ಡಿ ಅವರು 9ನೇ ಓವರ್ ನ ಐದನೇ ಎಸೆತವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಗೆ ಎಸೆದರು. ಈ ಎಸೆತದಲ್ಲಿ ಫಾಫ್ ಡು ಪ್ಲೆಸಿಸ್ ಸೂಪರ್ ಶಾಟ್ ಎಸೆದರು. ಅದನ್ನು ಮಯಾಂಕ್ ದಾಗರ್ ಕ್ಯಾಚ್ ಹಿಡಿದರು. ಆದರೆ ಅಂಪೈರ್ ಅದನ್ನು ನೋ ಬಾಲ್ ಎಂದು ಘೋಷಿಸಿದ್ದು, ಪಂದ್ಯ ಮಹತ್ವದ ತಿರುವು ಪಡೆದುಕೊಂಡಿತು.


ಫಾಫ್ ಡು ಪ್ಲೆಸಿಸ್ ಅವರ ತಲೆಯ ಸಮೀಪ ಬರುತ್ತಿದ್ದ ಈ ಓವರ್‌ ನಲ್ಲಿ ಸನ್‌ ರೈಸರ್ಸ್ ಹೈದರಾಬಾದ್ ಬೌಲರ್ ನಿತೀಶ್ ರೆಡ್ಡಿ ಎರಡನೇ ಬೌನ್ಸರ್ ಬಾಲ್ ಎಸೆದರು. ನಿಯಮದ ಪ್ರಕಾರ, ಅಂಪೈರ್ ಈ ಬಾಲ್ ಅನ್ನು ನೋ ಬಾಲ್ ಎಂದು ಘೋಷಿಸಿ, ಫಾಫ್ ಡು ಪ್ಲೆಸಿಸ್‌ ಗೆ ಜೀವ ನೀಡಿದರು. ಇದಾದ ಬಳಿಕ ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಫ್ ಡು ಪ್ಲೆಸಿಸ್ ಸನ್ ರೈಸರ್ಸ್ ಹೈದರಾಬಾದ್ ತಂಡದ ಬೌಲರ್ ಗಳನ್ನು ಬ್ಯಾಟಿಂಗ್ ಮೂಲಕ ಬೆಂಡೆತ್ತಿದ್ದಾರೆ.  


ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ಮೊದಲ ವಿಕೆಟ್‌ ಗೆ 172 ರನ್ ಗಳ ಜೊತೆಯಾಟ ನಡೆಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಗೆಲುವನ್ನು ನಿರ್ಧರಿಸಿದರು. ಆ ನೋ ಬಾಲ್‌ ನಲ್ಲಿ ಫಾಫ್ ಡು ಪ್ಲೆಸಿಸ್ ಜೀವದಾನ ಪಡೆಯದಿದ್ದರೆ ಪಂದ್ಯದ ಫಲಿತಾಂಶವೇ ಬೇರೆಯಾಗಬಹುದಿತ್ತು.


ಕೊಹ್ಲಿ (100) ಮತ್ತು ಡು ಪ್ಲೆಸಿಸ್ (71) ಅವರ ಮೊದಲ ವಿಕೆಟ್‌ ಗೆ 172 ರನ್‌ ಗಳ ಜೊತೆಯಾಟವನ್ನು ಹಂಚಿಕೊಳ್ಳುವ ಮೂಲಕ ಆರ್‌ಸಿಬಿ 187 ರನ್‌ ಗಳ ಗುರಿಯನ್ನು ಮುಟ್ಟಿತ್ತು. ಕೊಹ್ಲಿ ಮತ್ತು ಡುಪ್ಲೆಸಿಸ್ ಅವರ ಈ ಜೊತೆಯಾಟವು ಪ್ರಸಕ್ತ ಋತುವಿನಲ್ಲಿ ಅತಿ ಹೆಚ್ಚು ರನ್’ಗಳ ಜೊತೆಯಾಟವಾಗಿದೆ. ಇಬ್ಬರೂ ಏಪ್ರಿಲ್ 2 ರಂದು ಮುಂಬೈ ಇಂಡಿಯನ್ಸ್ ವಿರುದ್ಧ 148 ರನ್ ಜೊತೆಯಾಟವಾಡಿದ್ದರು, ಈಗ ತಮ್ಮದೇ ಆದ ದಾಖಲೆಯನ್ನು ಮುರಿದಿದ್ದಾರೆ.


ಇದನ್ನೂ ಓದಿ: ಸಿಇಟಿ ದಿನವೇ ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಪ್ರಮಾಣ ವಚನ: ವಿದ್ಯಾರ್ಥಿಗಳಿಗೆ ಟ್ರಾಫಿಕ್‌ ಭೀತಿ


ಸದ್ಯ ಈ ಗೆಲುವಿನೊಂದಿಗೆ ಆರ್‌’ಸಿಬಿ 13 ಪಂದ್ಯಗಳಲ್ಲಿ 14 ಅಂಕ ಗಳಿಸಿದ್ದು, ತಂಡ ನಾಲ್ಕನೇ ಸ್ಥಾನಕ್ಕೆ ತಲುಪಿದೆ. ಸನ್ ರೈಸರ್ಸ್ ತಂಡ ಈಗಾಗಲೇ ಪ್ಲೇ ಆಫ್ ರೇಸ್ ನಿಂದ ಹೊರಬಿದ್ದಿದೆ. ಈ ತಂಡ 13 ಪಂದ್ಯಗಳಲ್ಲಿ ಕೇವಲ ಎಂಟು ಅಂಕ ಗಳಿಸಿ ಕೊನೆಯ ಸ್ಥಾನದಲ್ಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ