IPL 2023: ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಜಗತ್ತಿನಲ್ಲಿ ಭರದಿಂದ ಸಾಗುತ್ತಿದೆ. ಈ ಶ್ರೀಮಂತ ಕ್ರಿಕೆಟ್ ಲೀಗ್‌’ನಲ್ಲಿ ಪ್ರತೀದಿನ ರೋಚಕತೆ ಮನೆ ಮಾಡಿದೆ. ಈ ಮಧ್ಯೆ, ವಿಶ್ವಕಪ್ 2023ಕ್ಕೂ ಮುನ್ನ ಆಯ್ಕೆದಾರರು KKRನ ವೇಗದ ಬ್ಯಾಟ್ಸ್’ಮನ್’ನ್ನು ಟೀಂ ಇಂಡಿಯಾಗೆ ಸೇರ್ಪಡೆಗೊಳಿಸುವ ಸಾಧ್ಯತೆ ಹೆಚ್ಚಿದೆ. ಈ ಬ್ಯಾಟ್ಸ್‌ಮನ್ ಟೀಮ್ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅವರಂತೆ ಮಾರಕ ಬ್ಯಾಟಿಂಗ್‌’ನಲ್ಲಿ ಪರಿಣತಿ ಹೊಂದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Watch: ಮೈದಾನದಲ್ಲಿಯೇ ಸಹ ಆಟಗಾರನ ವಿರುದ್ಧ ಕೂಗಾಡಿದ ವಿವಾದಕ್ಕೆ ಸಿಕ್ಕಿಹಾಕಿಕೊಂಡ ಪಾಂಡ್ಯ!


ಟೀಂ ಇಂಡಿಯಾದಲ್ಲಿ ಸ್ಥಾನ ಖಚಿತ!


ಐಪಿಎಲ್ 2023ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿರುವ ವೆಂಕಟೇಶ್ ಅಯ್ಯರ್ ಇದುವರೆಗಿನ ಪಂದ್ಯಗಳಲ್ಲಿ ಅದ್ಭುತ ಸೃಷ್ಟಿಸಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ 83 ರನ್‌’ಗಳ ಬಿರುಸಿನ ಇನ್ನಿಂಗ್ಸ್ ಆಡಿದ್ದರು. ಇದಾದ ಬಳಿಕ ಭಾನುವಾರ (ಏಪ್ರಿಲ್ 16) ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ 49 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. (51 ಎಸೆತಗಳಲ್ಲಿ 104 ರನ್‌)


ವೆಂಕಟೇಶ್ ಅಯ್ಯರ್, ಭಾರತ ತಂಡದ ಎಲ್ಲಾ ಮಾದರಿಯ ಕ್ರಿಕೆಟ್’ಗಳಲ್ಲಿ ಕೇವಲ 11 ಪಂದ್ಯಗಳನ್ನು ಆಡಿದ್ದಾರೆ. ಟಿ20 ಕ್ರಿಕೆಟ್‌’ನಲ್ಲಿ 9 ಪಂದ್ಯಗಳನ್ನು ಆಡಿರುವ ಅವರು 133 ರನ್ ಗಳಿಸಿದ್ದಾರೆ. ಇದರಲ್ಲಿ ಅವರ ಗರಿಷ್ಠ ಸ್ಕೋರ್ 35 ರನ್ ಆಗಿದೆ. ಇನ್ನು ಏಕದಿನದಲ್ಲಿ 2 ಪಂದ್ಯಗಳನ್ನು ಆಡುವ ಅವಕಾಶ ಸಿಕ್ಕಿದ್ದು, 24 ರನ್ ಗಳಿಸಿದ್ದಾರೆ. ಫೆಬ್ರವರಿ 2022 ರಲ್ಲಿ ಅಯ್ಯರ್ ತಮ್ಮ ಕೊನೆಯ ಪಂದ್ಯವನ್ನು ಟೀಂ ಇಂಡಿಯಾಗಾಗಿ ಆಡಿದ್ದರು.


ಇದನ್ನೂ ಓದಿ: Pakistan: ಪಾಕಿಸ್ತಾನದಲ್ಲಿ ಬದುಕುವುದು ಜೈಲಿನಲ್ಲಿ ಇದ್ದಂತೆ..! ಹಿರಿಯ ಕ್ರಿಕೆಟಿಗನಿಂದಲೇ ಗಂಭೀರ ಆರೋಪ!


ಐಪಿಎಲ್‌ನಲ್ಲಿ ಇದುವರೆಗಿನ ಅಂಕಿಅಂಶಗಳು:


ಐಪಿಎಲ್ 2023 ರಲ್ಲಿ, ಅಯ್ಯರ್ ಇದುವರೆಗೆ 234 ರನ್‌ ಬಾರಿಸಿದ್ದಾರೆ. ಇದರಲ್ಲಿ ಮುಂಬೈ ವಿರುದ್ಧದ ಶತಕವೂ ಸೇರಿದೆ. ಆಡಿರುವ 27 ಪಂದ್ಯಗಳಲ್ಲಿ 132.55 ಸ್ಟ್ರೈಕ್ ರೇಟ್‌ ಜೊತೆ 786 ರನ್ ಗಳಿಸಿದ್ದಾರೆ. 6 ಅರ್ಧ ಶತಕ ಹಾಗೂ 1 ಶತಕ ಬಾರಿಸಿದ್ದಾರೆ. ವೆಂಕಟೇಶ್ ಅವರು 2021 ರಲ್ಲಿ ಕೆಕೆಆರ್‌ ತಂಡದ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಅಂದು ಆರ್ ಸಿ ಬಿ ವಿರುದ್ಧ ಪಂದ್ಯವನ್ನಾಡಿದ್ದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ