Indian Premier League 2023: ಐಪಿಎಲ್ 2023 ಆರಂಭಕ್ಕೆ ಕೇವಲ 4 ದಿನಗಳು ಮಾತ್ರ ಉಳಿದಿವೆ. ಈ ನಡುವೆ ಈ ಲೀಗ್‌’ಗೆ ಸಂಬಂಧಿಸಿದ ದೊಡ್ಡ ಸುದ್ದಿಯೊಂದು ಹೊರಬೀಳುತ್ತಿದೆ. ಐಪಿಎಲ್‌’ನಲ್ಲಿ ವಿರಾಟ್ ಕೊಹ್ಲಿಯಂತಹ ಆಟಗಾರನನ್ನು ಅತಿ ಹೆಚ್ಚು ಬಾರಿ ಔಟ್ ಮಾಡಿದ ಆಟಗಾರ ಈ ಲೀಗ್‌’ಗೆ ಮರಳಿದ್ದಾರೆ. ಈ ಆಟಗಾರನ್ನು ಐಪಿಎಲ್ ಹರಾಜಿನ ಸಂದರ್ಭದಲ್ಲಿ ಯಾವುದೇ ಫ್ರಾಂಚೈಸಿ ಖರೀದಿ ಮಾಡಲಿಲ್ಲ. ಆದರೆ ರಾಜಸ್ಥಾನ್ ರಾಯಲ್ಸ್ ಈ ಆಟಗಾರನನ್ನು ಬದಲಿಯಾಗಿ ತನ್ನ ತಂಡಕ್ಕೆ ಸೇರಿಸಿಕೊಂಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Bollywood Actress: ಮದುವೆ ಬಳಿಕ ಕುಟುಂಬಕ್ಕಾಗಿ ಸಿನಿರಂಗವನ್ನೇ ತ್ಯಜಿಸಿದ ನಟಿಯರು; ಈಗ ವಿದೇಶದಲ್ಲಿ ಸೆಟಲ್!


ಗಾಯಗೊಂಡಿರುವ ಕೃಷ್ಣ ಬದಲಿಗೆ ಸಂದೀಪ್ ಶರ್ಮಾ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇರಿಸಿಕೊಂಡಿದೆ. ಐಪಿಎಲ್‌’ನಲ್ಲಿ ಅತಿ ಹೆಚ್ಚು ಬಾರಿ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ ದಾಖಲೆಯನ್ನು ಸಂದೀಪ್ ಶರ್ಮಾ ಹೊಂದಿದ್ದಾರೆ. ಸಂದೀಪ್ ಶರ್ಮಾ ಐಪಿಎಲ್‌’ನಲ್ಲಿ ಏಳು ಬಾರಿ ಕೊಹ್ಲಿಯನ್ನು ಬೇಟೆಯಾಡಿದ್ದರು. ಆದರೆ, ಐಪಿಎಲ್ 2023 ರ ಹರಾಜಿನಲ್ಲಿ ಸಂದೀಪ್ ಶರ್ಮಾ ಅವರ ಮೂಲ ಬೆಲೆ ಕೇವಲ 50 ಲಕ್ಷ ರೂಪಾಯಿ ಆಗಿತ್ತು.


ಸಂದೀಪ್ ಶರ್ಮಾ ಒಟ್ಟು 104 ಐಪಿಎಲ್ ಪಂದ್ಯಗಳಲ್ಲಿ 114 ವಿಕೆಟ್ ಪಡೆದಿದ್ದಾರೆ. 20 ರನ್‌ಗಳಿಗೆ 4 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ. ಸಂದೀಪ್ ಶರ್ಮಾ ಪವರ್‌ ಪ್ಲೇಯಲ್ಲಿ ಭುವನೇಶ್ವರ್ ಕುಮಾರ್ ನಂತರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಐಪಿಎಲ್‌’ನ ಪ್ರತಿ ಋತುವಿನಲ್ಲಿ 12 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ. ಸಂದೀಪ್ ಶರ್ಮಾ ಕಳೆದ ವರ್ಷ ಐಪಿಎಲ್ 2022 ರ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದರು, ಆದರೆ ಅವರ ಪ್ರದರ್ಶನವು ತುಂಬಾ ಕಳಪೆಯಾಗಿತ್ತು. 5 ಪಂದ್ಯಗಳಲ್ಲಿ ಕೇವಲ 2 ವಿಕೆಟ್ ಗಳಿಸಲು ಸಾಧ್ಯವಾಯಿತು.


ಇದನ್ನೂ ಓದಿ: Hopshoots: ಕೆಜಿಗೆ 1 ಲಕ್ಷ ರೂ… ಇದು ವಿಶ್ವದ ಅತ್ಯಂತ ದುಬಾರಿ ತರಕಾರಿ: ಬರೋಬ್ಬರಿ 20 ವರ್ಷ ಬದುಕುತ್ತೆ ಈ ವೆಜಿಟೇಬಲ್!!


ಇನ್ನು ಶರ್ಮಾಗೆ ಟೀಂ ಇಂಡಿಯಾ ಪರ ಆಡುವ ಅವಕಾಶ ಸಿಕ್ಕಿದೆ. ಸಂದೀಪ್ ಶರ್ಮಾ ಭಾರತ ಪರ ಎರಡು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನೂ ಆಡಿದ್ದಾರೆ. 2015 ರಲ್ಲಿ ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ಟೀಮ್ ಇಂಡಿಯಾಕ್ಕಾಗಿ ತಮ್ಮ T20 ಅಂತರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ ಸರಣಿಯಲ್ಲಿ ಎರಡು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಸಂದೀಪ್ ಶರ್ಮಾಗೆ ಮತ್ತೆ ಟೀಮ್ ಇಂಡಿಯಾದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಈ 2 ಪಂದ್ಯಗಳಲ್ಲಿ ಅವರು ಕೇವಲ ಒಂದು ವಿಕೆಟ್ ಪಡೆದಿದ್ದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.