IPL 2023, DC vs MI: ಐಪಿಎಲ್ 2023ರಲ್ಲಿಯೇ ಈ ಭಾರತೀಯ ಆಟಗಾರನ ವೃತ್ತಿಜೀವನವು ಬಹುತೇಕ ಮುಗಿದಿದೆ. ಈ ಆಟಗಾರ ಐಪಿಎಲ್ 2023 ರಲ್ಲಿ ಫ್ಲಾಪ್ ಆಗಿದ್ದು, ಹಲವು ಅವಕಾಶಗಳು ಸಿಕ್ಕರೂ ಈ ಆಟಗಾರ ತನ್ನ ಹಿಂದಿನ ತಪ್ಪುಗಳಿಂದ ಪಾಠ ಕಲಿತಿಲ್ಲ. ಟೀಂ ಇಂಡಿಯಾದ ಈ ಕ್ರಿಕೆಟಿಗ ಐಪಿಎಲ್ 2023 ರಲ್ಲಿ ಕಳಪೆ ಪ್ರದರ್ಶನ ನೀಡುವ ಮೂಲಕ ತಮ್ಮದೇ ತಂಡಕ್ಕೆ ಹೊರೆ ಎನಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Team India: ಈ ಸ್ಟಾರ್ ಆಟಗಾರನಿಗೆ ಟೀಂ ಇಂಡಿಯಾದ ಬಾಗಿಲು ಬಂದ್! IPLನಲ್ಲೂ ಹೊರಬೀಳುವ ಸಾಧ್ಯತೆ


ಇನ್ನು ಭಾರತ ತಂಡದಿಂದ ಹೊರಬಿದ್ದ ನಂತರ, ಈಗ ಈ ಆಟಗಾರನ ಐಪಿಎಲ್ ವೃತ್ತಿಜೀವನ ಬಹುತೇಕ ಮುಗಿದಿದೆ. ಈ ಆಟಗಾರನಿಗೆ ಅವಕಾಶ ನೀಡುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ತಪ್ಪು ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ಮುಂದಿನ ವರ್ಷ ನಡೆಯುವ ಐಪಿಎಲ್ ಹರಾಜಿನಲ್ಲಿ ಈ ಆಟಗಾರನಿಗೆ ಬೆಲೆ ಕೊಡಲು ಯಾವುದೇ ತಂಡ ಬಯಸುವುದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.


ಟೀಮ್ ಇಂಡಿಯಾದ ಫ್ಲಾಪ್ ಕ್ರಿಕೆಟಿಗ ಮನೀಶ್ ಪಾಂಡೆಗೆ ಐಪಿಎಲ್ 2023ರಲ್ಲಿ ಆಡಲು ಡೆಲ್ಲಿ ಕ್ಯಾಪಿಟಲ್ಸ್ ಸತತ ಎರಡನೇ ಅವಕಾಶವನ್ನು ನೀಡಿದೆ. ಆದರೆ ಈ ಆಟಗಾರನು ಸಂಪೂರ್ಣ ವಿಫಲವಾದನು. ಮಂಗಳವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ, ಮನೀಶ್ ಪಾಂಡೆ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು 3 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ ಕೇವಲ 26 ರನ್ ಗಳಿಸಿ ಔಟಾದರು. ಇದಕ್ಕೂ ಮೊದಲು, ಏಪ್ರಿಲ್ 8 ರ ಶನಿವಾರದಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿಯೂ ಸಹ ಡೆಲ್ಲಿ, ಮನೀಶ್ ಪಾಂಡೆ ಅವರನ್ನು 3ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಫೀಲ್ಡಿಂಗ್ ಇಳಿಸಿತು, ಆದರೆ ಅವರು ಶೂನ್ಯ ಸ್ಕೋರ್‌;ನಲ್ಲಿ ಔಟಾದರು.


ಮನೀಶ್ ಪಾಂಡೆ ಅತ್ಯಂತ ಕಳಪೆ ಫಾರ್ಮ್‌ನಲ್ಲಿ ಸಾಗುತ್ತಿದ್ದಾರೆ. ಮನೀಶ್ ಪಾಂಡೆಗೆ ಅನೇಕ ಅವಕಾಶಗಳು ಬಂದಿವೆ, ಆದರೆ ಅವರು ಪ್ರತಿ ಬಾರಿಯೂ ಫ್ಲಾಪ್ ಎಂದು ಸಾಬೀತುಪಡಿಸಿದ್ದಾರೆ. ಆಯ್ಕೆಗಾರರು ಈಗಾಗಲೇ ಮನೀಶ್ ಪಾಂಡೆಯನ್ನು ಭಾರತ ಕ್ರಿಕೆಟ್ ತಂಡದಿಂದ ತೆಗೆದುಹಾಕಿದ್ದಾರೆ. ಈಗ ಐಪಿಎಲ್‌ನಿಂದ ಶಾಶ್ವತವಾಗಿ ಹೊರಗುಳಿಯುವ ಎಲ್ಲಾ ಸಾಧ್ಯತೆ ಕಾಣಿಸುತ್ತಿದೆ.


ಐಪಿಎಲ್ 2023 ಹರಾಜಿನಲ್ಲಿ ಮನೀಶ್ ಪಾಂಡೆಯನ್ನು 2.40 ಕೋಟಿ ರೂಪಾಯಿಗೆ ಖರೀದಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ತಪ್ಪು ಮಾಡಿದೆ. ಅಷ್ಟೇ ಅಲ್ಲದೆ, ಇವರನ್ನು ತಂಡದಲ್ಲಿ ಸೇರಿಸುವುದು ದೊಡ್ಡ ಅಪಾಯದಂತೆ ಕಾಣಿಸುತ್ತಿದೆ. ಮನೀಶ್ ಪಾಂಡೆ ಅವರ ವೆಚ್ಚದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಇನ್ನೂ ಉತ್ತಮ ಆಟಗಾರರನ್ನು ಖರೀದಿಸಬಹುದಿತ್ತು. ಇನ್ನು ಮುಂದಿನ ವರ್ಷದ 2024 ರ ಐಪಿಎಲ್ ಹರಾಜಿನಲ್ಲಿ ಮನೀಶ್ ಪಾಂಡೆಗೆ ಬೆಲೆ ನೀಡಲು ಯಾವುದೇ ತಂಡವು ಬಯಸುವುದಿಲ್ಲ ಎನ್ನಬಹುದು.


ಇದಕ್ಕೂ ಮೊದಲು, ಮನೀಶ್ ಪಾಂಡೆ 2022 ರಲ್ಲಿ ಲಕ್ನೋ ಸೂಪರ್‌ ಜೈಂಟ್ಸ್ ಮತ್ತು 2021 ರಲ್ಲಿ ಸನ್‌ ರೈಸರ್ಸ್ ಹೈದರಾಬಾದ್‌’ಗಾಗಿ ಐಪಿಎಲ್’ನಲ್ಲಿ ಆಡಿದ್ದರು, ಆದರೆ ಕಳಪೆ ಪ್ರದರ್ಶನದ ಕಾರಣ, ಈ ತಂಡಗಳು ಮನೀಶ್ ಪಾಂಡೆಗೆ ಗುಡ್ ಬೈ ಹೇಳಿದವು.


ಇದನ್ನೂ ಓದಿ: MI vs DC: ಸೂರ್ಯಕುಮಾರ್ ಕಣ್ಣಿಗೆ ಬಾಲ್ ತಗುಲಿ ಗಂಭೀರ ಗಾಯ! ಶಾಕಿಂಗ್ ವಿಡಿಯೋ ನೋಡಿ


ಮನೀಶ್ ಪಾಂಡೆ ಇದುವರೆಗೆ ಟೀಮ್ ಇಂಡಿಯಾ ಪರ 39 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 44.31 ಸರಾಸರಿ ಮತ್ತು 126.15 ಸ್ಟ್ರೈಕ್ ರೇಟ್‌ನಲ್ಲಿ 709 ರನ್ ಗಳಿಸಿದ್ದಾರೆ. ಮನೀಷ್ ಪಾಂಡೆ ಟೀಂ ಇಂಡಿಯಾಗೆ ಅದ್ಧೂರಿ ಪದಾರ್ಪಣೆ ಮಾಡಿದ್ದರು. ಆ ಸಂದರ್ಭದಲ್ಲಿ ಅವರನ್ನು ಭವಿಷ್ಯದ ಬೆಸ್ಟ್ ಆಟಗಾರನಾಗುತ್ತಾನೆ ಎಂದು ಹೇಳಲಾಗಿತ್ತು. ಆದರೆ ಸ್ಥಿರತೆ ಕಾಪಾಡಿಕೊಳ್ಳದ ಅವರು ತಂಡದಿಂದಲೇ ಹೊರಬಿದ್ದಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.