KKR vs RCB Match Highlights: ಎರಡು ಬಾರಿಯ ಚಾಂಪಿಯನ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 81 ರನ್’ಗಳ ಭರ್ಜರಿ ಗೆಲುವು ಸಾಧಿಸಿದೆ. ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿದ್ದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಆರ್‌ ಸಿ ಬಿ ನಾಯಕ ಫಾಫ್ ಡುಪ್ಲೆಸಿಸ್ ಟಾಸ್ ಗೆದ್ದು ಕೆಕೆಆರ್‌’ಗೆ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಆದರೆ KKR ತಂಡದ ಒಬ್ಬ ಅನುಭವಿ ಆಟಗಾರ ಫ್ಲಾಪ್ ಆಟ ಆಡುವ ಮೂಲಕ 12 ಕೋಟಿ ರೂ. ನೀರಲ್ಲಿ ಹೋಮ ಮಾಡಿದಂತಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: RCB vs KKR: ಶಾರ್ದೂಲ್ ಸ್ಪೋಟಕ ಬ್ಯಾಟಿಂಗ್… ತವರಿನಲ್ಲಿ ಕೆಕೆಆರ್ ಶೈನಿಂಗ್: ಬೆಂಗಳೂರಿಗೆ ಹೀನಾಯ ಸೋಲು


IPL 16 ನೇ ಋತುವಿನ 9 ನೇ ಪಂದ್ಯ KKR ಮತ್ತು RCB ನಡುವೆ ನಡೆಯಿತು. ಈಡನ್ ಗಾರ್ಡನ್‌’ನಲ್ಲಿ ನಡೆದ ಈ ಪಂದ್ಯದಲ್ಲಿ ಆರ್‌’ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಟಾಸ್ ಗೆದ್ದು ಕೆಕೆಆರ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಡುಪ್ಲೆಸಿ, 'ನಾವು ಮೊದಲು ಬೌಲಿಂಗ್ ಮಾಡಲು ಬಯಸುತ್ತೇವೆ. ನಿನ್ನೆ ರಾತ್ರಿ ಇಲ್ಲಿ ಇಬ್ಬನಿ ಬಿದ್ದಿತ್ತು. ಇದು ಎರಡನೇ ಇನ್ನಿಂಗ್ಸ್‌’ನಲ್ಲಿ ಸ್ಕಿಡ್ ಆಗುವ ನಿರೀಕ್ಷೆಯಿದೆ. ಇದು ಸಂಪೂರ್ಣವಾಗಿ ಹೊಸ ಪಂದ್ಯವಾಗಿದ್ದು, ಉತ್ತಮ ಪ್ರದರ್ಶನ ನೀಡಲು ಬಯಸುತ್ತೇನೆ” ಎಂದು ಹೇಳಿದ್ದರು.


ಈ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಲ್ ರೌಂಡರ್ ಆಂಡ್ರೆ ರಸೆಲ್ ಸಂಪೂರ್ಣ ವಿಫಲರಾಗಿದ್ದಾರೆ. ಇನಿಂಗ್ಸ್‌’ನ 12ನೇ ಓವರ್‌’ನ ಎರಡನೇ ಎಸೆತದಲ್ಲಿ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ ಅವರನ್ನು ಕರ್ಣ್ ಶರ್ಮಾ ಪೆವಿಲಿಯನ್‌’ಗೆ ಕಳುಹಿಸಿದಾಗ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ರಸೆಲ್ ಬಂದರು. ಆದರೆ ಬಂದ ತಕ್ಷಣ ಬೌಂಡರಿ ಬಾರಿಸಲು ಹೋಗಿ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿದ್ದಾರೆ. ಕೇವಲ ಒಂದು ಎಸೆತವನ್ನು ಮಾತ್ರ ಎದುರಿಸಿ, ಖಾತೆ ಕೂಡ ತೆರೆಯದೆ ಪೆವಿಲಿಯನ್‌ಗೆ ಮರಳಿದರು.


ಇದನ್ನೂ ಓದಿ: ಪಂದ್ಯಕ್ಕೂ ಮುನ್ನ ಪುಟ್ಟ ಅಭಿಮಾನಿಗೆ ಆಟೋಗ್ರಾಫ್ ಕೊಟ್ಟ Virat Kohli: ಆ ಕಂದಮ್ಮನ ಖುಷಿಯನ್ನೊಮ್ಮೆ ನೋಡಿ


ಇನ್ನು ಈ ಪಂದ್ಯದಲ್ಲಿ ರಸೆಲ್ ಮೇಲೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ನಿರೀಕ್ಷೆಯನ್ನು ಅವರು ಹುಸಿಗೊಳಿಸಿದ್ದಾರೆ. ಅವರು ಔಟಾಗುವುದರೊಂದಿಗೆ ಕೆಕೆಆರ್ ತಂಡದ ಸ್ಕೋರ್ 5 ವಿಕೆಟ್‌’ಗೆ 89 ಆಗಿತ್ತಯ. ಇನ್ನು ರಸೆಲ್’ಗಾಗಿ ಫ್ರಾಂಚೈಸಿ 12 ಕೋಟಿ ರೂ.ಗಳ ಬೃಹತ್ ಮೊತ್ತವನ್ನು ವ್ಯಯಿಸಿದೆ. ಆದರೆ ಆ ಬೃಹತ್ ಮೊತ್ತಕ್ಕೆ ಸರಿಯಾಗಿ ರಸೆಲ್ ಆಟವಾಡುತ್ತಿಲ್ಲ. ಇದರಿಂದ ಕೋಪಗೊಂಡ ಅಭಿಮಾನಿ, “ಗೆದ್ದರೂ ಸಂತಸವಿಲ್ಲ, 12 ಕೋಟಿ ಮೋಸ ಮಾಡುತ್ತಿದ್ದಾರೆ ರಸೆಲ್” ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.