Virat Kohli-Anushka Sharma: ಬೆಂಗಳೂರು: ಎಂ ಎ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಏಳು ರನ್ ಗಳ ಜಯ ಸಾಧಿಸಿದೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ತಮ್ಮ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರಿಗೆ ಫ್ಲೈಯಿಂಗ್ ಕಿಸ್ ಕೊಟ್ಟಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: RCB vs RR: ವಿರಾಟ್ ಬಂದಿದ್ದೇ ತಡ; ಈ ಆಟಗಾರನಿಗೆ ತಂಡದಿಂದ ಗೇಟ್’ಪಾಸ್! ಸೂಪರ್ ಆಲ್’ರೌಂಡರ್’ಗೆ ಸ್ಥಾನ ಕೊಟ್ಟ ಕಿಂಗ್


ರಾಜಸ್ಥಾನ ರಾಯಲ್ಸ್ ಚೇಸಿಂಗ್‌’ನ 14ನೇ ಓವರ್‌’ನಲ್ಲಿ ಈ ಘಟನೆ ನಡೆದಿದೆ. ಹರ್ಷಲ್ ಪಟೇಲ್ ಬೌಲಿಂಗ್ ಮಾಡಿದಾಗ ನಿಧಾನಗತಿಯಲ್ಲಿ ದೊಡ್ಡ ಶಾಟ್ ಹೊಡೆಯಲಿ ಯಶಸ್ವಿ ಜೈಸ್ವಾಲ್ ಪ್ರಯತ್ನಿಸಿದರು. ಆದರೆ ಚೆಂಡು ಹೆಚ್ಚು ಎತ್ತರಕ್ಕೆ ಹೋಗದೆ,  ಬೌಂಡರಿ ಬಳಿ ನಿಂತಿದ್ದ ಕೊಹ್ಲಿಯ ಕೈಗೆ ನೇರವಾಗಿ ಸಿಕ್ಕಿಬಿತ್ತು.


ಕ್ಯಾಚ್ ಹಿಡಿದ ತಕ್ಷಣ, ವಿವಿಐಪಿ ಗ್ಯಾಲರಿಯಲ್ಲಿ ನಿಂತಿದ್ದ ಅನುಷ್ಕಾ ಶರ್ಮಾಗೆ ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆ ಕೊಹ್ಲಿ. ಈ ಸಂಭ್ರಮಾಚರಣೆಯು ಸಾಮಾಜಿಕ ಮಾಧ್ಯಮದಲ್ಲಿ ತ್ವರಿತವಾಗಿ ವೈರಲ್ ಆಗಿದ್ದು, ನೆಟಿಜನ್‌’ಗಳು ಈ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ವಿಶ್ವ ಕಂಡ ಆ 5 ಸ್ಫೋಟಕ ಬ್ಯಾಟ್ಸ್’ಮನ್’ಗಳನ್ನು ಅತಿ ಹೆಚ್ಚು ಬಾರಿ ಔಟ್ ಮಾಡಿದ್ದು Sachin Tendulkar! ಯಾರವರು ಗೊತ್ತಾ?


ಇನ್ನು ಈ ಪಂದ್ಯದಲ್ಲಿ, ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅರ್ಧ ಶತಕಗಳೊಂದಿಗೆ ಮಿಂಚಿದರು. ಹರ್ಷಲ್ ಪಟೇಲ್ ಸೂಪರ್ ಬೌಲಿಂಗ್’ನಿಂದ ಟೇಬಲ್-ಟಾಪ್ಪರ್ಸ್ ರಾಜಸ್ಥಾನ್ ರಾಯಲ್ಸ್ ಅನ್ನು ಸೋಲಿಸಿದರು. ಇದು ಈ ಐಪಿಎಲ್ ಸೀಸನ್’ನ RCBಯ ನಾಲ್ಕನೇ ಜಯವಾಗಿದೆ. ಏಳು ಪಂದ್ಯಗಳಲ್ಲಿ ಎಂಟು ಅಂಕಗಳನ್ನು ಪಡೆದ ಅವರು ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ