“ಮ್ಯಾಂಗೋ ಬಾಯ್ ಎಲ್ಲಿದ್ದೀಯಪ್ಪಾ..!” ಕೊಹ್ಲಿ ಶತಕ ಬಾರಿಸುತ್ತಿದ್ದಂತೆ ವೈರಲ್ ಆದ ಪೋಸ್ಟ್: ಯಾರಿದು Mango Boy?
Swiggy Post About Virat Kohli Century: ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ನಡುವೆ ಭಾರೀ ಜಟಾಪಟಿ ನಡೆದಿತ್ತು. ಅಷ್ಟೇ ಅಲ್ಲದೆ, ಈ ಘಟನೆ ನಡೆದ ಕೆಲ ದಿನಗಳ ಬಳಿಕ ಕೊಹ್ಲಿ ಕ್ರೀಸ್’ನಿಂದ ಔಟ್ ಆದಾಗ, ಗೇಲಿ ಮಾಡಿದಂತೆ ನವೀನ್ ಇನ್’ಸ್ಟಾಗ್ರಾಂ ಸ್ಟೋರಿ ಒಂದನ್ನು ಹಾಕಿದ್ದರು. ಅದರಲ್ಲಿ ‘ಸ್ವೀಟ್ ಮ್ಯಾಂಗೋ’ ಎಂದು ಕ್ಯಾಪ್ಶನ್ ನೀಡಿದ್ದಲ್ಲದೆ, ವಿರಾಟ್ ಆದ ಕ್ಷಣದ ಫೋಟೋವನ್ನು ಹಾಕಿದ್ದರು. ಇದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು, ಆದರೆ ಈಗ ದ್ವೇಷವನ್ನು ತೀರಿಸಿಕೊಂಡಿದ್ದಾರೆ.
Swiggy Post About Virat Kohli Century: ಐಪಿಎಲ್ 2023ರಲ್ಲಿ ಮೊದಲ ಮತ್ತು ಐಪಿಎಲ್ ಜರ್ನಿಯಲ್ಲಿ ಆರನೇ ಶತಕ ಬಾರಿಸಿ ವಿರಾಟ್ ಕೊಹ್ಲಿ ವಿಶ್ವದಾಖಲೆ ಬರೆದಿದ್ದಾರೆ. ಆದರೆ ಈ ಸಂದರ್ಭದಲ್ಲಿ ನವೀನ್ ಉಲ್ ಹಕ್ ಅವರನ್ನು ಗೇಲಿ ಮಾಡುತ್ತಾ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಪೋಸ್ಟ್’ಗಳನ್ನು ಹಾಕಲಾಗುತ್ತಿದೆ.
ಇದನ್ನೂ ಓದಿ: IPLನಲ್ಲಿ 6ನೇ ಶತಕ ಬಾರಿಸಿ ವಿಶ್ವದಾಖಲೆ ಬರೆದ ವಿರಾಟ್! ಒಂದು-ಶಾಟ್; 4ಕ್ಕೂ ಹೆಚ್ಚು ರೆಕಾರ್ಡ್..
ಈ ಸೀಸನ್’ನಲ್ಲಿ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ನಡುವೆ ಭಾರೀ ಜಟಾಪಟಿ ನಡೆದಿತ್ತು. ಅಷ್ಟೇ ಅಲ್ಲದೆ, ಈ ಘಟನೆ ನಡೆದ ಕೆಲ ದಿನಗಳ ಬಳಿಕ ಕೊಹ್ಲಿ ಕ್ರೀಸ್’ನಿಂದ ಔಟ್ ಆದಾಗ, ಗೇಲಿ ಮಾಡಿದಂತೆ ನವೀನ್ ಇನ್’ಸ್ಟಾಗ್ರಾಂ ಸ್ಟೋರಿ ಒಂದನ್ನು ಹಾಕಿದ್ದರು. ಅದರಲ್ಲಿ ‘ಸ್ವೀಟ್ ಮ್ಯಾಂಗೋ’ ಎಂದು ಕ್ಯಾಪ್ಶನ್ ನೀಡಿದ್ದಲ್ಲದೆ, ವಿರಾಟ್ ಆದ ಕ್ಷಣದ ಫೋಟೋವನ್ನು ಹಾಕಿದ್ದರು. ಇದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು, ಆದರೆ ಈಗ ದ್ವೇಷವನ್ನು ತೀರಿಸಿಕೊಂಡಿದ್ದಾರೆ.
ಕಳೆದ ದಿನ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ವಿರಾಟ್ ಕೊಹ್ಲಿ ಸ್ಪೋಟಕ ಬ್ಯಾಟಿಂಗ್ ಮಾಡಿದ್ದು, ಶತಕ ಬಾರಿಸಿದ್ದರು. ಈ ಸಂದರ್ಭದಲ್ಲಿ ಜನಪ್ರಿಯ ಆಹಾರ ವಿತರಣಾ ಸಂಸ್ಥೆ ಸ್ವಿಗ್ಗಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದು, ಸಖತ್ ವೈರಲ್ ಆಗುತ್ತಿದೆ.
ಸ್ವಿಗ್ಗಿಯ ಟ್ವೀಟ್’ನಲ್ಲಿ, “Sorry Mango... Cheeku is the Real King" ಎಂದು ಬರೆಯಲಾಗಿದೆ. ಈ ಪೋಸ್ಟ್ ಶೇರ್ ಆಗಿದ್ದೇ ತಡ, ಕೊಹ್ಲಿ ಅಭಿಮಾನಿಗಳು ಮಾತ್ರವಲ್ಲ ಇಡೀ ಭಾರತವೇ ಒಮ್ಮೆ ದ್ವೇಷ ತೀರಿಸಿಕೊಂಡೆ ಎಂಬ ಭಾವನೆಯಲ್ಲಿ ರಿಪೋಸ್ಟ್ ಮಾಡಲು ಮುಂದಾಗಿದೆ.
Weather Update: ವಿವಿಧೆಡೆ ಗುಡುಗು ಸಹಿತ ಮಳೆ-ಬಿರುಗಾಳಿಯ ಮುನ್ಸೂಚನೆ! ಎಚ್ಚರಿಕೆ ವಹಿಸಲು ಇಲಾಖೆ ಮನವಿ
ವಿರಾಟ್ ಕೊಹ್ಲಿ ಸ್ಪೋಟಕ ಶತಕ-ವಿಶ್ವದಾಖಲೆಗಳು:
ಕಳೆದ ದಿನ ನಡೆದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 63 ಎಸೆತಗಳಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್ ಗಳ ಸಹಾಯದಿಂದ 100 ರನ್ ಬಾರಿಸಿದ್ದಾರೆ. ಇದು ಕೊಹ್ಲಿ ವಿಶ್ವದಾಖಲೆ ಮಾಡಲು ಕಾರಣವಾಯಿತು, ಟಿ20 ಕ್ರಿಕೆಟ್ ನಲ್ಲಿ ಒಂದೇ ತಂಡದಲ್ಲಿ ಆಡುತ್ತಾ 7500 ರನ್ ಪೂರೈಸಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ಅಂದರೆ ಅದು ಕೊಹ್ಲಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಷ್ಟೇ ಅಲ್ಲ, ವಿರಾಟ್ ಐಪಿಎಲ್ ನಲ್ಲಿ ಆರನೇ ಬಾರಿಗೆ 500 ಕ್ಕೂ ಹೆಚ್ಚು ವೈಯಕ್ತಿಕ ಸ್ಕೋರ್ ಮಾಡಿದ್ದಾರೆ ಮತ್ತು ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರರಾಗಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l