ಕೋಲ್ಕತ್ತಾ ವಿರುದ್ದ ಪಂಜಾಬ್ ಗೆ 9 ವಿಕೆಟ್ ಗಳ ಜಯ
ಕೊಲ್ಕತ್ತಾ: ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಕೊಲ್ಕತ್ತಾದ ಕ್ರಿಸ್ ಲೈನ್(74) ಮತ್ತು ದಿನೇಶ್ ಕಾರ್ತಿಕ್ (43) ಯವರ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು.
ನಂತರ ಈ ಗೆಲುವಿನ ಗುರಿಯನ್ನು ಬೆನ್ನತ್ತಿದ ಪಂಜಾಬ್ ತಂಡವು ಆರಂಭಿಕ ಆಟಗಾರ ಕನ್ನಡಿಗ ಕೆ.ಎಲ್ ರಾಹುಲ್(60) ಮತ್ತು ಕ್ರಿಸ್ ಗೇಲ್(62) ಅರ್ಧ ಶತಕಗಳ ನೆರವಿನಿಂದ ಡಕ್ ವರ್ತ್ ಲೂಯಿಸ್ ನಿಮಯದ ಪ್ರಕಾರ ಇನ್ನು 11 ಎಸೆತಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸಿತು. ಮಳೆಯ ಕಾರಣದಿಂದಾಗಿ ಪಂಜಾಬ್ ತಂಡಕ್ಕೆ 125 ರನ್ ಗಳ ಗುರಿಯನ್ನು ನಿಗಧಿ ಪಡಿಸಲಾಗಿತ್ತು, ಆದರೆ ಈ ಗುರಿಯನ್ನು ಪಂಜಾಬ್ ತಂಡವು ಕೇವಲ ಒಂದು ವಿಕೆಟ್ ಕಳೆದುಕೊಂಡು ಸುಲಭವಾಗಿ ತಲುಪಿತು.