ನವದೆಹಲಿ: ಐಸಿಸಿ ಟಿ 20 ಕ್ರಿಕೆಟ್ ವಿಶ್ವಕಪ್ ಆಯೋಜನೆಯನ್ನು ತಿರಸ್ಕರಿಸುವುದರೊಂದಿಗೆ, ಇಂಡಿಯನ್ ಪ್ರಿಮಿಯಂ ಲೀಗ್(ಐಪಿಎಲ್) ಹಾದಿ ಸುಗಮವಾದಂತಾಗಿದೆ. ಇದರೊಂದಿಗೆ ಮಹಿಳಾ ಕ್ರಿಕೆಟಿಗರ ಪಾಲಿಗೂ ಕೂಡ ಒಂದು ಸಂತಸದ ಸುದ್ದಿ ಪ್ರಕತಗೊಂಡಿದೆ. ಪ್ರಸ್ತುತ ಐಪಿಎಲ್ ಅನ್ನು ಅನ್ನು ಯುಎಎನ್ ನಲ್ಲಿ ನಡೆಸಲು ಈ ಮೊದಲೇ ತೀರ್ಮಾನಿಸಲಾಗಿದೆ, ಆದರೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹಿಳಾ ಕ್ರಿಕೆಟಿಗರಿಗಾಗಿ ಯಾವುದೇ ಯೋಜನೆಗಳನ್ನು ರೂಪಿಸಿದೆ ಎಂಬುದು ಇನ್ನೂ ಸ್ಪಷ್ಟವಾಗಿರಲಿಲ್ಲ. ಆದರೆ ಇದೀಗ ಪುರುಷರ ಐಪಿಎಲ್ ಜೊತೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಮಹಿಳಾ ಐಪಿಎಲ್ ನಂತಹ ಪಂದ್ಯಾವಳಿಯನ್ನು ಸಹ ನಡೆಸಲು ತೀರ್ಮಾನಿಸಲಾಗಿದೆ ಎಂಬ ಮಾಹಿತಿ ಪ್ರಕಟಗೊಂಡಿದೆ.


COMMERCIAL BREAK
SCROLL TO CONTINUE READING

ಅಧಿಕೃತ ಹೇಳಿಕೆ ನೀಡಿದ ಸೌರವ್ ಗಂಗೂಲಿ
ಭಾರತದಲ್ಲಿ ಹೆಚ್ಚುತ್ತಿರುವ ಕರೋನಾ ವೈರಸ್ ಪ್ರಕರಣಗಳಿಂದಾಗಿ ಬಿಸಿಸಿಐ ಈ ವರ್ಷ ಸೆಪ್ಟೆಂಬರ್ 19 ರಿಂದ ನವೆಂಬರ್ 8 ರವರೆಗೆ ಐಪಿಎಲ್ ಆಯೋಜಿಸುವುದಾಗಿ ಘೋಷಿಸಿದೆ. ಭಾನುವಾರ ಐಪಿಎಲ್ ಆಡಳಿತ ಮಂಡಳಿಯ ಸಭೆಯೂ ನಡೆಯಲಿದ್ದು. ಸಭೆಯಲ್ಲಿ ಪಂದ್ಯ ಆಯೋಜನೆಗೆ ಸಂಬಂಧಿಸಿದ ವಿಷಯಗಳ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತಿದೆ. ಮಹಿಳಾ ಐಪಿಎಲ್‌ಗೆ ಸಂಬಂಧಿಸಿದ ಪರಿಸ್ಥಿತಿ ಇದುವರೆಗೂ ಇದರಲ್ಲಿ ಸ್ಪಷ್ಟವಾಗಿರಲಿಲ್ಲ. ಆದರೆ, ಮಹಿಳಾ ಐಪಿಎಲ್ ಕೂಡ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷೆ ಸೌರವ್ ಗಂಗೂಲಿ ಭಾನುವಾರ ಬೆಳಗ್ಗೆ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿರುವ ಗಂಗೂಲಿ "ಈ ಬಾರಿ ಮಹಿಳಾ ಐಪಿಎಲ್ ಸಹ ಇರಲಿದೆ ಎಂದು ನಾನು ಖಚಿತಪಡಿಸುತ್ತೇನೆ, ಅದರಲ್ಲಿ ನಮ್ಮ ರಾಷ್ಟ್ರೀಯ ತಂಡಕ್ಕೂ ಒಂದು ಸ್ಥಾನ ಇರಲಿದೆ " ಎಂದು ಗಂಗೂಲಿ ಹೇಳಿದ್ದಾರೆ. 


ನವೆಂಬರ್ 1-ನವೆಂಬರ್ 10 ನಡುವೆ ನಾಲ್ಕು ತಂಡಗಳಲ್ಲಿ ಪಂದ್ಯಗಳು ನಡೆಯಲಿವೆ
ಗಂಗೂಲಿ ಮಹಿಳಾ ಐಪಿಎಲ್ ಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ನೀಡಿಲ್ಲ, ಆದರೆ ಇದು ಕಳೆದ ವರ್ಷದಂತೆ ಪುರುಷರ ಐಪಿಎಲ್ ನ ಅಂತಿಮ ಹಂತದಲ್ಲಿ ನಡೆಯಲಿದೆ ಎಂದು ಮಂಡಳಿಯ ಮೂಲಗಳು ಖಚಿತಪಡಿಸಿವೆ. ನವೆಂಬರ್ 1 ರಿಂದ 10 ರವರೆಗೆ ನಾಲ್ಕು ಮಹಿಳಾ ತಂಡಗಳ ನಡುವೆ ಸ್ಪರ್ಧೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ. ಅದರಂತೆ ಪುರುಷರ ಐಪಿಎಲ್ ಫೈನಲ್ ಪಂದ್ಯವನ್ನು ನವೆಂಬರ್ 8 ರ ಬದಲು ನವೆಂಬರ್ 10 ರಂದು ಆಡುವ ಸಾಧ್ಯತೆ ಕೂಡ ಹೆಚ್ಚಾಗಿದೆ ಎಂದು ಗಂಗೂಲಿ ಹೇಳಿದ್ದಾರೆ.


ಮಹಿಳಾ IPL ಬದಲು T20 ಚಾಲೆಂಜರ್ ನಡೆಯುವ ಸಾಧ್ಯತೆಗಳೇ ಹೆಚ್ಚು
ಆದರೆ, ಈ ಬಾರಿ ಮಹಿಳಾ ಟಿ20 ಪಂದ್ಯಗಳನ್ನು ಐಪಿಎಲ್ ಎಂದು ಕರೆಯಲಾಗುವುದು ಅಥವಾ ಕಳೆದ ಎರಡು ವರ್ಷಗಳಂತೆ ಬಿಸಿಸಿಐ ಇದನ್ನು ಮಹಿಳಾ ಟಿ 20 ಚಾಲೆಂಜರ್ ಕಪ್ ಎಂದು ಪ್ರಸ್ತುತಪಡಿಸಲಿದೆಯೇ ಎಂಬುದನ್ನು ಮಂಡಳಿಯ ಮೂಲಗಳು ಸ್ಪಷ್ಟಪಡಿಸಿಲ್ಲ. ಮಹಿಳೆಯರ ಐಪಿಎಲ್ ನಡೆಸುವಲ್ಲಿ ಕೆಲ ತಾಂತ್ರಿಕ ಅಡೆತಡೆಗಳು ಇವೆ. ಇದಕ್ಕಾಗಿ ಇದುವರೆಗೆ ಯಾವುದೇ ಫ್ರಾಂಚೈಸಿಗಳನ್ನು ನೇಮಿಸಲಾಗಿಲ್ಲ ಅಥವಾ ಮಹಿಳಾ ಕ್ರಿಕೆಟಿಗರನ್ನು ಹರಾಜು ಮೂಲಕ ತಂಡಗಳಿಗೆ ಸೇರಿಸಲಾಗಿಲ್ಲ. ಅಷ್ಟೇ ಅಲ್ಲ ಕೇವಲ ಎರಡೇ ತಿಂಗಳಲ್ಲಿ ಇದನ್ನೆಲ್ಲ ಮಾಡಲು ಸಾಧ್ಯವಿಲ್ಲ. ಈಗಾಗಲೇ ಅಸ್ತಿತ್ವದಲ್ಲಿರುವ ಫ್ರಾಂಚೈಸಿಗಳಿಗೆ ತಮ್ಮದೇ ಆದ ಮಹಿಳಾ ತಂಡಗಳನ್ನು ರಚಿಸಲು ಕೇಳಿಕೊಂಡರೂ, ಹರಾಜು ಇತ್ಯಾದಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ.