ಟಿ20 ವಿಶ್ವಕಪ್ ವೇಳೆ ಭಾರೀ ಅವಘಡ! ಈಜುಕೊಳದಲ್ಲಿ ಮುಳುಗಿ ಇರ್ಫಾನ್ ಪಠಾಣ್ ಆತ್ಮೀಯ ಗೆಳೆಯ ಸಾವು
Irfan Pathan Makeup Artist Dies: ಫಯಾಜ್ ಅನ್ಸಾರಿ ಬಿಜ್ನೋರ್ ನಗೀನಾ ನಿವಾಸಿ. 22 ವರ್ಷಗಳ ಹಿಂದೆ, ಬಿಜ್ನೋರ್’ನ ನಗೀನಾ ತಹಸಿಲ್’ನ ಮೊಹಲ್ಲಾ ಖಾಜಿ ಸರಾಯ್’ನಿಂದ ಮುಂಬೈಗೆ ತೆರಳಿ ಅಲ್ಲಿ ಸಲೂನ್ ತೆರೆದಿದ್ದರು. ಈ ಸಮಯದಲ್ಲಿ, ಇರ್ಫಾನ್ ಪಠಾಣ್ ಅವರು ಮೇಕಪ್ ಮಾಡಲೆಂದು ಅನ್ಸಾರಿ ಸಲೂನ್’ಗೆ ತೆರಳುತ್ತಿದ್ದರು.
Irfan Pathan Makeup Artist Dies: ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರ ಪರ್ಸನಲ್ ಮೇಕಪ್ ಮ್ಯಾನ್ ಫಯಾಜ್ ಅನ್ಸಾರಿ, ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಜೂನ್ 21 ರಂದು ವೆಸ್ಟ್ ಇಂಡೀಸ್’ನಲ್ಲಿ ಈ ಘಟನೆ ನಡೆದಿದೆ. ಟಿ20 ವಿಶ್ವಕಪ್’ಗೆ ಇರ್ಫಾನ್ ಪಠಾಣ್ ಜೊತೆ ಅನ್ಸಾರಿ ಬಂದಿದ್ದರು.
ಇದನ್ನೂ ಓದಿ: ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ: ಶುಭ್ಮನ್ ಗಿಲ್ ನಾಯಕ- ಹೊಸ ಮುಖಗಳಿಗೆ ಮಣೆ
ಫಯಾಜ್ ಅನ್ಸಾರಿ ಬಿಜ್ನೋರ್ ನಗೀನಾ ನಿವಾಸಿ. 22 ವರ್ಷಗಳ ಹಿಂದೆ, ಬಿಜ್ನೋರ್’ನ ನಗೀನಾ ತಹಸಿಲ್’ನ ಮೊಹಲ್ಲಾ ಖಾಜಿ ಸರಾಯ್’ನಿಂದ ಮುಂಬೈಗೆ ತೆರಳಿ ಅಲ್ಲಿ ಸಲೂನ್ ತೆರೆದಿದ್ದರು. ಈ ಸಮಯದಲ್ಲಿ, ಇರ್ಫಾನ್ ಪಠಾಣ್ ಅವರು ಮೇಕಪ್ ಮಾಡಲೆಂದು ಅನ್ಸಾರಿ ಸಲೂನ್’ಗೆ ತೆರಳುತ್ತಿದ್ದರು. ಇದರ ನಂತರ, ಈ ಮಾಜಿ ಭಾರತೀಯ ಆಲ್‌ರೌಂಡರ್ ಅನ್ಸಾರಿಯನ್ನು ತನ್ನ ಪರ್ಸನಲ್ ಮೇಕಪ್ ಮ್ಯಾನ್ ಆಗಿ ನೇಮಕ ಮಾಡಿಕೊಂಡಿದ್ದರು.
ಫಯಾಜ್ ಅನ್ಸಾರಿ ಅವರ ಸೋದರ ಸಂಬಂಧಿ ಮೊಹಮ್ಮದ್ ಅಹ್ಮದ್ ಪ್ರಕಾರ, ಅನ್ಸಾರಿಗೆ ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಎಂಟು ದಿನಗಳ ಹಿಂದೆ ಬಿಜ್ನೋರ್’ನ ನಗೀನಾದಿಂದ ಮುಂಬೈಗೆ ಹೋಗಿದ್ದರು. ಈ ಆಘಾತದಿಂದ ಕುಟುಂಬ ದುಃಖತಪ್ತವಾಗಿದೆ.
ಜೂನ್ 21ರ ಸಂಜೆ ವೆಸ್ಟ್ ಇಂಡೀಸ್’ನಲ್ಲಿ ಫಯಾಜ್ ಅನ್ಸಾರಿ ಈಜುಕೊಳದಲ್ಲಿ ಸ್ನಾನ ಮಾಡುವಾಗ ಈ ದುರ್ಘಟನೆ ಸಂಭವಿಸಿದೆ ಎಂದು ಸೋದರ ಸಂಬಂಧಿ ಹೇಳಿದ್ದಾರೆ.
ಇದನ್ನೂ ಓದಿ: ಚುನಾವಣೆಗೆ ನಿಂತಿಲ್ಲ.. ಗೆದ್ದಿಲ್ಲ.. ಆದ್ರೂ ವಿರಾಟ್ ಕೊಹ್ಲಿಗೆ ಕೇಂದ್ರ ಸಚಿವ ಸ್ಥಾನ!?
ಮೃತದೇಹವನ್ನು ಭಾರತಕ್ಕೆ ತರಲು ಸಿದ್ಧತೆ
ವೆಸ್ಟ್ ಇಂಡೀಸ್’ನಲ್ಲಿರುವ ಅನ್ಸಾರಿ ಮೃತ ದೇಹವನ್ನು ಭಾರತಕ್ಕೆ ತರಲು ಇರ್ಫಾನ್ ಪಠಾಣ್ ಅವರೇ ಎಲ್ಲಾ ವಿಧಿವಿಧಾನಗಳನ್ನು ಪೂರ್ಣಗೊಳಿಸುತ್ತಿದ್ದಾರೆ ಎಂದು ಅಹ್ಮದ್ ಹೇಳಿದ್ದಾರೆ. ಕುಟುಂಬವು ಮೃತ ದೇಹವನ್ನು ದೆಹಲಿಗೆ ತರಲು ಯೋಜಿಸಿದ್ದು, ಸುಮಾರು ಮೂರ್ನಾಲ್ಕು ದಿನಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.