Irfan Pathan Statement: ಕ್ರಿಕೆಟ್ ವಿಶ್ವಕಪ್ 2023ಕ್ಕೂ ಮುನ್ನ ZEE NEWS ನಡೆಸಿದ ಕ್ರಿಕೆಟ್ ಕಾನ್ಕ್ಲೇವ್‌’ನಲ್ಲಿ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.


COMMERCIAL BREAK
SCROLL TO CONTINUE READING

ಟೀಂ ಇಂಡಿಯಾದಲ್ಲಿ ತಾನು ಮೊದಲು ಸ್ನೇಹ ಬೆಳೆಸಿದ ವ್ಯಕ್ತಿ ಯಾರು ಎಂಬುದರ ಬಗ್ಗೆ ಮಾತನಾಡಿದ್ದಾರೆ. ಇದೇ ಸಂದರ್ಭದಲ್ಲಿ ಇಡೀ ತಂಡ ತನ್ನ ತಾಯಿ ಮಾಡಿದ ರುಚಿಕರವಾದ ಬಿರಿಯಾನಿ ತಿನ್ನಲು ಅವರ ಮನೆಗೆ ಹೋಗಿದ್ದ ಘಟನೆಯನ್ನು ಕೂಡ ಪ್ರಸ್ತಾಪಿಸಿದರು.


ಇದನ್ನೂ ಓದಿ: ಈತನೇ ಬಾಲಿವುಡ್’ನ 'ಮೋಸ್ಟ್ ಫ್ಲಾಪ್' ನಟ…! ನಟಿಸಿದ 180 ಸಿನಿಮಾವೂ ಕಂಪ್ಲೀಟ್ ಫೈಲ್ಯೂರ್


ಧೋನಿ ಬಗ್ಗೆ ಇರ್ಫಾನ್ ಹೇಳಿದ್ದೇನು?


ಟೀಂ ಇಂಡಿಯಾದಲ್ಲಿ ಮೊದಲ ಗೆಳೆಯ ಯಾರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಇರ್ಫಾನ್ ಪಠಾಣ್, ರಾಬಿನ್ ಉತ್ತಪ್ಪ, ಸುರೇಶ್ ರೈನಾ, ಎಂಎಸ್ ಧೋನಿ ಈ ಮೂವರು ಆಟಗಾರರು ನಾನಿಲ್ಲದೆ ತಿನ್ನುತ್ತಿರಲಿಲ್ಲ. ಯಾರಿಲ್ಲದೆಯೂ ಊಟ ಮಾಡುತ್ತಿರಲಿಲ್ಲ. ಒಟ್ಟಿಗೆ ಆಟವಾಡುತ್ತಿದ್ದಾಗ ನಮ್ಮಿಬ್ಬರ ನಡುವೆ ತುಂಬಾ ಸ್ನೇಹವಿತ್ತು ಎಂದು ಭಾವನಾತ್ಮಕ ಹೇಳಿಕೆ ನೀಡಿದ್ದಾರೆ.


“ಇನ್ನು ನನಗೆ ಬೇಕೆನಿಸಿದಾಗಲೆಲ್ಲ ಅಮ್ಮ ಬಿರಿಯಾನಿ ಮಾಡಿ ಕೊಡುತ್ತಾರೆ. 2007ರಲ್ಲಿ ನಾನು ಇಡೀ ತಂಡವನ್ನು ನನ್ನ ಮನೆಗೆ ಆಹ್ವಾನಿಸಿದ್ದೆ ಮತ್ತು ತಂಡದ ಸುಮಾರು 25 ಜನರು ನನ್ನ ಮನೆಗೆ ಬಂದಿದ್ದರು. ಅವರ ಜೊತೆ ತಂಡದ ಸಿಬ್ಬಂದಿಯೂ ಇದ್ದರು. ನನ್ನ ತಾಯಿಯೇ ಎಲ್ಲಾ 25 ಜನರಿಗೆ ಅಡುಗೆ ಮಾಡಿದರು” ಎಂದಿದ್ದಾರೆ.


ಸಚಿನ್ ಇಟ್ಟ ಬೇಡಿಕೆ ಏನು?


ಮಾಜಿ ಕ್ರಿಕೆಟಿಗ ಇರ್ಫಾನ್ ಖಾನ್, ನನ್ನ ತಾಯಿ ಮಾಡಿದ ರುಚಿಕರವಾದ ಬಿರಿಯಾನಿ ಎಲ್ಲರಿಗೂ ತುಂಬಾ ಇಷ್ಟವಾಯಿತು ಎಂದು ಹೇಳಿದ್ದಾರೆ. “ಯುವರಾಜ್ ಆಗಿರಲಿ, ಸಚಿನ್ ಆಗಿರಲಿ, ಎಲ್ಲರೂ ಕೈಯಿಂದ ಊಟ ಮಾಡುತ್ತಿದ್ದರು. ಸಚಿನ್‌’ಗೆ ಆ ಬಿರಿಯಾನಿ ಎಷ್ಟು ಇಷ್ಟವಾಯಿತು ಎಂದರೆ ಮರುದಿನವೂ ನಿನ್ನೆಯ ಬಿರಿಯಾನಿಯನ್ನು ಆರ್ಡರ್ ಮಾಡಬಹುದೇ ಎಂದು ಕೇಳಿದರು” ಎಂದು ಹೇಳಿದ್ದಾರೆ.


ಇದನ್ನೂ ಓದಿ: ಮುಂದಿನ 18 ತಿಂಗಳು ಈ ರಾಶಿಯವರಿಗೆ ಪ್ರತೀದಿನವೂ ಗೋಲ್ಡನ್ ಡೇಸ್: ಬರಿದಾಗದಷ್ಟು ಧನಸಂಪತ್ತು, ಬಾಳಲ್ಲಿ ತುಂಬಲಿದೆ ಸಂತಸ-ಸಡಗರ


ಅಣ್ಣನ ಬಗ್ಗೆ ಇರ್ಫಾನ್ ಹೇಳಿದ್ದೇನು?


ಹಿರಿಯ ಸಹೋದರ ಯೂಸುಫ್ ಪಠಾಣ್ ಅವರೊಂದಿಗಿನ ಸಂಬಂಧದ ಕುರಿತು ಮಾತನಾಡಿದ ಇರ್ಫಾನ್ ಪಠಾಣ್, “ನಾನು ಚಿಕ್ಕವನಾಗಿರುವುದರಿಂದ ನನ್ನನ್ನು ಸಹಿಸಿಕೊಳ್ಳುವುದು ನನ್ನ ಸಹೋದರರೇ ಹೊರತು ನಾನಲ್ಲ” ಎಂದು ಹೇಳಿದ್ದಾರೆ. “ಕಿರಿಯ ಸಹೋದರರು ನನಗೆ ತುಂಬಾ ತೊಂದರೆ ಕೊಡುತ್ತಾರೆ. ನಾನು ಕೂಡ ನನ್ನ ಅಣ್ಣನಿಗೆ ತುಂಬಾ ತೊಂದರೆ ಕೊಡುತ್ತೇನೆ. ನಾವು ಪರಸ್ಪರ ಒಗ್ಗಟ್ಟಿನಿಂದ ಇದ್ದೇವೆ” ಎಂದರು.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ