Irfan Pathan: ಮದುವೆಯಾಗಿ 8 ವರ್ಷಗಳ ಬಳಿಕ ಪತ್ನಿ ಮುಖ ಕಾಣುವ ಫೋಟೋ ಹಂಚಿಕೊಂಡ ಇರ್ಫಾನ್ ಪಠಾಣ್!
Irfan Pathan Wife Photo: ಇರ್ಫಾನ್ ತನ್ನ ಪತ್ನಿಯ ಮುಖವನ್ನು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕವಾಗಿ ತೋರಿಸಿದ್ದು ಇದೇ ಮೊದಲು. ಈ ಹಿಂದೆ, ಸಫಾ ಬೇಗ್ ತನ್ನ ಎಲ್ಲಾ ಸಾಮಾಜಿಕ ಮಾಧ್ಯಮ ಪೋಸ್ಟ್’ಗಳಲ್ಲಿ ಫೇಸ್ ಕವರ್ ಮಾಡಿಕೊಂಡಿ ಪೋಸ್ಟ್ ಶೇರ್ ಮಾಡುತ್ತಿದ್ದರು
Irfan Pathan Wife Photo: ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ತಮ್ಮ 8ನೇ ವಿವಾಹ ವಾರ್ಷಿಕೋತ್ಸವವನ್ನು ಪತ್ನಿ ಸಫಾ ಬೇಗ್ ಜೊತೆ ಆಚರಿಸಿಕೊಂಡಿದ್ದಾರೆ. ಈ ಸಮಯದಲ್ಲಿ, ಇರ್ಫಾನ್ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮುದ್ದಾದ ಮಡದಿಯ ಫೋಟೋ ಕಾಣುವಂತೆ ಪೋಸ್ಟ್ ಶೇರ್ ಮಾಡಿದ್ದಾರೆ.
ಇದನ್ನೂ ಓದಿ:ಏಕರೂಪ ನಾಗರಿಕ ಸಂಹಿತೆಗೆ ಅಸ್ತು ಎಂದ ಕ್ಯಾಬಿನೆಟ್: ಈ ರಾಜ್ಯದಲ್ಲಿ ಮೊದಲ ಬಾರಿಗೆ ಜಾರಿಯಾಗಲಿದೆ UCC
ಪತ್ನಿ ಜೊತೆಗಿನ ಫೋಟೋ ಶೇರ್ ಮಾಡುವಾಗ ಹೀಗೊಂದು ಶೀರ್ಷಿಕೆ ನೀಡಿದ್ದಾರೆ. “ಅನೇಕ ಪಾತ್ರಗಳು ಒಬ್ಬಳಿಂದಲೇ ನಿರ್ವಹಿಸಲಾಗುತ್ತದೆ - ಮೂಡ್ ಬೂಸ್ಟರ್, ಹಾಸ್ಯ, ನನ್ನ ಮಕ್ಕಳ ನಿರಂತರ ಒಡನಾಡಿ, ಸ್ನೇಹಿತೆ ಮತ್ತು ತಾಯಿ. ಈ ಸುಂದರ ಪ್ರಯಾಣದಲ್ಲಿ ನಾನು ನಿನ್ನನ್ನು ನನ್ನ ಮುದ್ದಾದ ಮಡದಿಯಾಗಿ ಸ್ವೀಕರಿಸಿದ್ದೇನೆ. ನನ್ನ ಪ್ರೀತಿಯ 8 ನೇ ವರ್ಷದ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ
ಅಂದಹಾಗೆ ಇರ್ಫಾನ್ ತನ್ನ ಪತ್ನಿಯ ಮುಖವನ್ನು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕವಾಗಿ ತೋರಿಸಿದ್ದು ಇದೇ ಮೊದಲು. ಈ ಹಿಂದೆ, ಸಫಾ ಬೇಗ್ ತನ್ನ ಎಲ್ಲಾ ಸಾಮಾಜಿಕ ಮಾಧ್ಯಮ ಪೋಸ್ಟ್’ಗಳಲ್ಲಿ ಫೇಸ್ ಕವರ್ ಮಾಡಿಕೊಂಡಿ ಪೋಸ್ಟ್ ಶೇರ್ ಮಾಡುತ್ತಿದ್ದರು.
ಇದನ್ನೂ ಓದಿ: ನಿತ್ಯ ಒಂದು ಲೋಟ ನಿಂಬೆ ಜ್ಯೂಸ್ ಕುಡಿಯಿರಿ: ಈ ರೋಗಗಳು ದೂರವಾಗುವ ಜೊತೆ ಸಿಗುತ್ತೆ ಪ್ರಯೋಜನಗಳು
ಇರ್ಫಾನ್ ಪಠಾಣ್ ಅವರು 2016 ರಲ್ಲಿ ಸಫಾ ಬೇಗ್ ಅವರನ್ನು ವಿವಾಹವಾದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಅವರ ಹೆಸರು ಇಮ್ರಾನ್ ಪಠಾಣ್ ಮತ್ತು ಸುಲೇಮಾನ್ ಪಠಾಣ್. ಇರ್ಫಾನ್ ಶೇರ್ ಮಾಡಿರುವ ಈ ಪೋಸ್ಟ್ ಗೆ ಅವರ ಅಭಿಮಾನಿಗಳು ಸಿಕ್ಕಾಪಟ್ಟೆ ಕಮೆಂಟ್ ಮಾಡುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ