ಬೆಂಗಳೂರು : ಭಾರತದ ಸ್ಟಾರ್ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ರಿಷಬ್‌ ಪಂತ್‌ ತಮ್ಮ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿ. ಟೀಂ ಇಂಡಿಯಾ ಪರ ಹಲವು ಪಂದ್ಯಗಳನ್ನು ಸ್ವಂತ ಬಲದಿಂದ ಆಡಿ ಗೆದ್ದಿದ್ದಾರೆ. ಎಂತಹ ಬೌಲಿಂಗ್ ದಾಳಿಯನ್ನು ಪಂತ್‌ ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ. ಸದ್ಯ ಪಂತ್ ಗೆಳತಿ ಇಶಾ ನೇಗಿ ಟ್ರೋಲ್‌ಗೆ ಒಳಗಾಗಿದ್ದು, ನೆಟ್ಟಿಗರು ಕೇಳಿದ ಪ್ರಶ್ನೆಗೆ ಖಡಕ್‌ ಉತ್ತರ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ರಿಷಬ್ ಪಂತ್ ಅವರ ಗೆಳತಿ ಇಶಾ ನೇಗಿ ಹೊಸ ಯೂಟ್ಯೂಬ್ ಚಾನೆಲ್ ಒಂದನ್ನು ಪ್ರಾರಂಭಿಸಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವೀಡಿಯೊ ಒಂದನ್ನು ಅಪ್ಲೋಡ್ ಮಾಡಿ ಮಾಹಿತಿ ನೀಡಿದ್ದಾರೆ. ಇದು ನನ್ನ ಮೊದಲ YouTube ವೀಡಿಯೊ. ವೀಕ್ಷಿಸಿ ಮತ್ತು ಕಾಮೆಂಟ್ ಮಾಡಿ ಹಾಗೂ ಐಡಿಯಾಗಳನ್ನು ನೀಡಿ ಎಂದು ಶೀರ್ಷಿಕೆ ಬರೆದು ವಿಡಿಯೋ ಹಂಚಿಕೊಂಡಿದ್ದಾರೆ. 


ಇದನ್ನೂ ಓದಿ: ಬಾಬರ್ ಅಜಂ ನಾಯಕತ್ವ ಬೆದರಿದ ಹಸುವಿನಂತಿತ್ತು: ಮೊಹಮ್ಮದ್ ಹಫೀಜ್


ಇನ್ನು ಅವರ ಅಭಿಮಾನಿಗಳು ಸೇರಿದಂತೆ ನೆಟ್ಟಿಜನ್ಸ್‌ಗಳಲಿಂದ ವಿಡಿಯೋಗೆ ಕಾಮೆಂಟ್‌ಗಳು ಹರಿದು ಬರುತ್ತಿವೆ. ಈ ಪೈಕಿ ನಿಮ್ಮ ಯೂಟ್ಯೂಬ್ ಚಾನೆಲ್‌ಗೆ ರಿಷಬ್ ಪಂತ್ ಕರೆತನ್ನಿ ಎಂದು ನೆಟ್ಟಿಗರೊಬ್ಬರು ಕೇಳಿದ್ದಾರೆ. ಇದಕ್ಕೆ ಇಶಾ ತನ್ನದೆ ಶೈಲಿಯಲ್ಲಿ ಉತ್ತರ ನೀಡಿದ್ದು, ʼಇದು ನನ್ನ ಕೆಲಸ ನಾನು ಮಾಡುತ್ತೇನೆ, ಅವರು ಕ್ರಿಕೆಟ್‌ ಕಡೆ ಗಮನಹರಿಸಲಿʼ ಎಂದು ಗೆಳೆಯನನ್ನು ಬೆಂಬಲಿಸಿ ಮಾತನಾಡಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.