Indian Cricket Team: ಭಾರತ ತಂಡ ಮುಂದಿನ ವರ್ಷ ಚಾಂಪಿಯನ್ಸ್ ಟ್ರೋಫಿ ಆಡಬೇಕಿದ್ದು, ಇದಕ್ಕಾಗಿ ರೋಹಿತ್ ಶರ್ಮಾ ನೇತೃತ್ವದ ತಂಡ ಈಗಿನಿಂದಲೇ ಸಜ್ಜಾಗಬೇಕಿದೆ. ಈ ಐಸಿಸಿ ಟ್ರೋಫಿಗೂ ಮುನ್ನ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮನ್‌ ಪುನರಾಗಮನಕ್ಕೆ ತಯಾರಿ ಆರಂಭಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ 5 ರಾಶಿಯ ಜನರು ಶ್ರೀಮಂತರಾಗೋದಕ್ಕೆ ಹೆಚ್ಚು ಸಮಯವಿಲ್ಲ! ಸಂಪತ್ತು, ಯಶಸ್ಸಿನ ಜೊತೆ ಸರ್ಕಾರಿ ನೌಕರಿ


ಟೀಂ ಇಂಡಿಯಾದಿಂದ ಹೊರಗುಳಿದಿರುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಇಶಾನ್ ಕಿಶನ್ ಬುಚ್ಚಿ ಬಾಬು ಟೂರ್ನಿಯಲ್ಲಿ ಆಡುತ್ತಿದ್ದಾರೆ. ಇಶಾನ್ ಜಾರ್ಖಂಡ್ ತಂಡದ ನಾಯಕರಾಗಿದ್ದು, ಮೊದಲ ಪಂದ್ಯದಲ್ಲಿಯೇ ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದ ಅವರು ಮೊದಲ ಇನಿಂಗ್ಸ್‌ʼನಲ್ಲಿ ಶತಕ ಹಾಗೂ ಎರಡನೇ ಇನ್ನಿಂಗ್ಸ್‌ʼನಲ್ಲಿ ಸತತ ಎರಡು ಸಿಕ್ಸರ್‌ʼಗಳನ್ನು ಸಿಡಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಇತ್ತೀಚಿನ ದಿನಗಳಲ್ಲಿ ಇಶಾನ್ ತೋರುತ್ತಿರುವ ಪ್ರದರ್ಶನ ನೋಡಿದರೆ ಅತೀ ಶೀಘ್ರದಲ್ಲೇ ಮತ್ತೇ ಟೀಂ ಇಂಡಿಯಾಗೆ ಕಂಬ್ಯಾಕ್‌ ಮಾಡುವ ಸಾಧ್ಯತೆ ಇದೆ.


ಬಿಸಿಸಿಐನಿಂದ ಕಟ್ಟುನಿಟ್ಟಿನ ಸೂಚನೆಗಳ ಹೊರತಾಗಿಯೂ ಇಶಾನ್ ಕಿಶನ್ 2023 ರ ಕೊನೆಯಲ್ಲಿ ಕ್ರಿಕೆಟ್‌ʼನಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಅದರ ಪರಿಣಾಮವಾಗಿ ಬಿಸಿಸಿಐನ ವಾರ್ಷಿಕ ಒಪ್ಪಂದದಿಂದ ಹೊರಹಾಕಲಾಯಿತು. ಆದರೂ ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್‌ ಪರ ಆಡಿದ್ದರು. ಅಂದು 14 ಪಂದ್ಯಗಳಲ್ಲಿ 320 ರನ್ ಗಳಿಸಿದ್ದರು.


ಇದನ್ನೂ ಓದಿ: ಒಂದೇ ಏಟಿಗೆ 8 ವಿಕೆಟ್‌ ಕಬಳಿಸಿದ ಸ್ಪಿನ್‌ ಮಾಂತ್ರಿಕ: 64 ವರ್ಷ ಹಳೆಯ ವಿಶ್ವದಾಖಲೆ ಬ್ರೇಕ್!


ಬುಚ್ಚಿ ಬಾಬು ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ನಾಯಕತ್ವ ವಹಿಸಿದ್ದ ಇಶಾನ್ ಕಿಶನ್ ಅದ್ಭುತ ಶತಕ ಗಳಿಸಿ ಕೇವಲ 107 ಎಸೆತಗಳಲ್ಲಿ 114 ರನ್ ಕಲೆ ಹಾಕಿದ್ದರು. ಇದರಿಂದಾಗಿ ಜಾರ್ಖಂಡ್ ಮೊದಲ ಇನ್ನಿಂಗ್ಸ್‌ʼನಲ್ಲಿ 64 ರನ್‌ʼಗಳ ಮುನ್ನಡೆ ಸಾಧಿಸಿತು. ಅಷ್ಟೇ ಅಲ್ಲ, ಎರಡನೇ ಇನ್ನಿಂಗ್ಸ್‌ʼನಲ್ಲಿ ರನ್‌ʼಗಳ ಬೆನ್ನತ್ತಿದ್ದ ಅವರು ತತ್ತರಿಸಿದ ಜಾರ್ಖಂಡ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. 174 ರನ್‌ʼಗಳ ಸಾಧಾರಣ ಗುರಿ ಬೆನ್ನತ್ತಿದ್ದ ಜಾರ್ಖಂಡ್‌ʼನ ಮಧ್ಯಮ ಕ್ರಮಾಂಕ ವಿಫಲವಾದಾಗ ಪಂದ್ಯದಲ್ಲಿ ಟ್ವಿಸ್ಟ್‌ ಕಂಡುಬಂತು. 70 ರನ್ ಗಳಿಸುವಷ್ಟರಲ್ಲಿ ತಂಡ 5 ವಿಕೆಟ್ ಕಳೆದುಕೊಂಡಿತು. ಜಾರ್ಖಂಡ್ ತಂಡ ಗೆಲುವಿಗೆ 12 ರನ್‌ʼಗಳ ಅಂತರದಲ್ಲಿದ್ದು ಕೇವಲ 2 ವಿಕೆಟ್‌ʼಗಳು ಮಾತ್ರ ಬಾಕಿ ಉಳಿದಿದ್ದವು. ಆ ಸಂದರ್ಭದಲ್ಲಿ ಇಶಾನ್ ಕಿಶನ್ ಸತತ ಎರಡು ಸಿಕ್ಸರ್ ಬಾರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ