Ishant Sharma: ಭಾರತದ ಹಿರಿಯ ವೇಗದ ಬೌಲರ್ ಇಶಾಂತ್ ಶರ್ಮಾ ಟೀಂ ಇಂಡಿಯಾಗೆ ಮರು ಪ್ರವೇಶ ಮಾಡಲು ಸಜ್ಜಾಗಿದ್ದಾರೆ. ಮೊಹಮ್ಮದ್ ಸಿರಾಜ್ ಅವರಂತಹ ಯುವ ಬೌಲರ್‌ಗಳನ್ನು ಉತ್ತೇಜಿಸುವ ಪ್ರಕ್ರಿಯೆಯಲ್ಲಿ ಇಶಾಂತ್ ಭಾರತ ತಂಡಕ್ಕೆ ಗೈರುಹಾಜರಾಗಿದ್ದರು ಎಂದು ತಿಳಿದು ಬಂದಿದ್ದು. ನೂರು ಟೆಸ್ಟ್ ಪಂದ್ಯಗಳ ಹೀರೋ ಎಂಬ ದಾಖಲೆ ಬರೆದಿರುವ ಇಶಾಂತ್ 2021ರಲ್ಲಿ ಕೊನೆಯ ಬಾರಿ ಭಾರತವನ್ನು ಪ್ರತಿನಿಧಿಸಿದ್ದರು.


COMMERCIAL BREAK
SCROLL TO CONTINUE READING

ಆದರೆ ಮುಂದಿನ ತಿಂಗಳಿನಿಂದ ತವರಿನಲ್ಲಿ ಟೆಸ್ಟ್ ರಶ್ ಶುರುವಾಗಲಿದ್ದು, 35 ವರ್ಷದ ಇಶಾಂತ್ ಭಾರತ ತಂಡಕ್ಕೆ ಮರುಪ್ರವೇಶಿಸಲು ಸಿದ್ಧರಾಗಿದ್ದಾರೆ. ಅವರು ಟೀಂ ಇಂಡಿಯಾಗೆ ಮರಳಲು ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಅನ್ನು ಉನ್ನತ ಮಟ್ಟದಲ್ಲಿ ಕೊನೆಗೊಳಿಸಲು ಆಶಿಸಿದ್ದಾರೆ. ಈ ಕ್ರಮದಲ್ಲಿ ಆರು ಅಡಿಯ ಈ ವೇಗಿ ಯುವ ಆಟಗಾರರೊಂದಿಗೆ ಡೆಲ್ಲಿ ಪ್ರೀಮಿಯರ್ ಲೀಗ್ ನಲ್ಲಿ ಆಡಲಿದ್ದಾರೆ.


ಇದನ್ನೂ ಓದಿ: ಅಭಿಮಾನಿಯ ಕನಸನ್ನು ನನಸು ಮಾಡಿದ ಧೋನಿ..ಮಾಹಿ, ಫ್ಯಾನ್ಸ್‌ನ ಹೃದಯ ಗೆಲ್ಲಲ್ಲು ಕಾರಣ ಏನು ಗೊತ್ತಾ..? ವಿಡಿಯೋ ನೋಡಿ


ಇಶಾಂತ್ ಶರ್ಮಾ ಅವರು ಡೆಲ್ಲಿ ಪ್ರೀಮಿಯರ್ ಲೀಗ್‌ನಲ್ಲಿ 'ಪುರಣಿ ದೆಹಲಿ 6' ತಂಡದಲ್ಲಿ ರಿಷಬ್ ಪಂತ್ ಜೊತೆಗೆ ಆಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಯುವ ಕ್ರಿಕೆಟಿಗರಿಗೆ ಇಶಾಂತ್ ಕೆಲವು ಸಲಹೆಗಳನ್ನು ನೀಡಿದ್ದಾರೆ. 


ಇಶಾಂತ್ ಭಾರತ ಪರ 105 ಟೆಸ್ಟ್, 80 ODI ಮತ್ತು 14 T20 ಪಂದ್ಯಗಳನ್ನು ಆಡಿದ್ದಾರೆ. ಅವರು ಟೆಸ್ಟ್‌ನಲ್ಲಿ 311, ಏಕದಿನದಲ್ಲಿ 115 ಮತ್ತು ಶಾರ್ಟ್ ಫಾರ್ಮ್ಯಾಟ್‌ನಲ್ಲಿ 8 ವಿಕೆಟ್‌ಗಳನ್ನು ಕಬಳಿಸಿದ್ದಾರೆ.


ಭಾರತದ ಹಲವು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಇಶಾಂತ್ ಗೆ ಗೌರವಯುತ ಅಂತ್ಯ ನೀಡಲು ಬಿಸಿಸಿಐ ಬಯಸಿದರೆ, ಬಾಂಗ್ಲಾದೇಶ ಅಥವಾ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇಶಾಂತ್ ಆಡುವ ಸಾಧ್ಯತೆ ಇದೆ. ಪ್ರಸ್ತುತ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ಅವರ ವೇಗದ ತ್ರಿವಳಿ ಗಟ್ಟಿಯಾಗಿದೆ. ಆದರೆ, ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಶಮಿ ಬಾಂಗ್ಲಾ ಅಥವಾ ಕಿವೀಸ್ ಸರಣಿಗೆ ಸಂಪೂರ್ಣ ಫಿಟ್ ಆಗದೇ ಇದ್ದರೆ ಇಶಾಂತ್ ಗೆ ಅವಕಾಶ ಸಿಗುವ ಸಾಧ್ಯತೆ ಇದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ