ಶೂಟಿಂಗ್ ವಿಶ್ವಕಪ್: ಸ್ವರ್ಣ ಗೆದ್ದು ಒಲಂಪಿಕ್ ಗೆ ಪ್ರವೇಶ ಪಡೆದ ಅಭಿಷೇಕ್ ವರ್ಮಾ
ಶನಿವಾರದಂದು ಬೀಜಿಂಗ್ ನಲ್ಲಿ ನಡೆದ ಅಂತರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್ (ಐಎಸ್ಎಸ್ಎಫ್) ವಿಶ್ವಕಪ್ ನಲ್ಲಿ ಭಾರತದ ಶೂಟರ್ ಅಭಿಷೇಕ್ ವರ್ಮಾ ಚಿನ್ನದ ಪದಕ ಗೆದ್ದು ಸಾಧನೆ ಮೆರೆದಿದ್ದಾರೆ.
ನವದೆಹಲಿ: ಶನಿವಾರದಂದು ಬೀಜಿಂಗ್ ನಲ್ಲಿ ನಡೆದ ಅಂತರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್ (ಐಎಸ್ಎಸ್ಎಫ್) ವಿಶ್ವಕಪ್ ನಲ್ಲಿ ಭಾರತದ ಶೂಟರ್ ಅಭಿಷೇಕ್ ವರ್ಮಾ ಚಿನ್ನದ ಪದಕ ಗೆದ್ದು ಸಾಧನೆ ಮೆರೆದಿದ್ದಾರೆ.
29 ವರ್ಷದ ಅಭಿಷೇಕ್ ವರ್ಮಾ ಅವರು 10 ಮೀಟರ್ ಏರ್ ಪಿಸ್ತೂಲ್ ನಲ್ಲಿ 242 .7 ಅಂಕಗಳನ್ನು ಗಳಿಸುವ ಮೂಲಕ ಅಗ್ರಸ್ತಾನವನ್ನು ಪಡೆದರು.ಆ ಮೂಲಕ ಸ್ವರ್ಣ ಪದಕವನ್ನು ಗೆದ್ದು ಒಲಂಪಿಕ್ ಗೆ ನೇರ ಪ್ರವೇಶ ಪಡೆದರು. ಇದಕ್ಕೂ ಮೊದಲು ಸೌರಭ ಚೌಧರಿ 10 ಮೀಟರ್ ವಿಭಾಗದಲ್ಲಿ ಒಲಂಪಿಕ್ ಗೆ ಪ್ರವೇಶ ಪಡೆದಿದ್ದರು.
ಏತನ್ಮಧ್ಯೆ, ರಶಿಯಾದ ಆರ್ಟೆಮ್ ಚೆರ್ನೌಸೊವ್ ಮತ್ತು ಕೊರಿಯಾದ ಸೀಂಗ್ ವೂ ಹಾನ್ ಕ್ರಮವಾಗಿ 240.4 ಮತ್ತು 220 ಅಂಕಗಳನ್ನು ಗಳಿಸುವ ಮೂಲಕ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು.